ಅಧಿಕಾರಿಗಳ ಕರ್ತವ್ಯದಲ್ಲಿ ಜಾತಿ ಪ್ರದರ್ಶನ, ಕೀಳರಿಮೆ ಬೇಡ: ಕಾಗಿನೆಲೆ ಶ್ರೀ

KannadaprabhaNewsNetwork | Updated : Dec 27 2023, 01:33 AM IST

ಸಾರಾಂಶ

ಸಮಾಜದ ಯಾವುದೇ ಅಧಿಕಾರಿಗಳು ತಾವು ನಿರ್ವಹಿಸುವ ಸೇವೆ, ಕರ್ತವ್ಯಗಳಲ್ಲಿ ಜಾತಿ ಪ್ರದರ್ಶಿಸಬಾರದು, ಹುಟ್ಟಿದ ಜಾತಿ ಬಗ್ಗೆ ಕೀಳರಿಮೆಯನ್ನೂ ಬೆಳೆಸಿಕೊಳ್ಳಬಾರದು ಎಂಬ ಉತ್ತಮ ಸಲಹೆಯನ್ನು ಎಂದು ಶ್ರೀ ಕನಕ ಗುರುಪೀಠ ಕ್ಷೇತ್ರ ಕಾಗಿನೆಲೆ ಪೀಠಾಧ್ಯಕ್ಷರಾದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ಭದ್ರಾವತಿ

ಸಮಾಜದ ಅಧಿಕಾರಿಗಳು ಕರ್ತವ್ಯದಲ್ಲಿ ಜಾತಿ ಪ್ರದರ್ಶಿಸಬಾರದು. ಹುಟ್ಟಿದ ಜಾತಿ ಬಗ್ಗೆ ಕೀಳರಿಮೆಯನ್ನೂ ಪಡಬಾರದು ಎಂದು ಶ್ರೀ ಕನಕ ಗುರುಪೀಠ ಕ್ಷೇತ್ರ ಕಾಗಿನೆಲೆ ಪೀಠಾಧ್ಯಕ್ಷರಾದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ನುಡಿದರು.

ನಗರದ ಬಿ.ಎಚ್. ರಸ್ತೆ, ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ತಾಲೂಕು ಕುರುಬರ ಸಂಘ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ, ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಿದರು.

ಭದ್ರಾವತಿ ತಾಲೂಕಿನ ಕುರುಬರ ಸಂಘ ಶೈಕ್ಷಣಿಕ ಕ್ರಾಂತಿ ಮೂಲಕ ಇಡೀ ರಾಜ್ಯದಲ್ಲಿ ಗಮನ ಸೆಳೆದಿದೆ. ಹುಟ್ಟಿದ ಮೇಲೆ, ಹುಟ್ಟಿದ ಜಾತಿ ಬಗ್ಗೆ ಕೀಳರಿಮೆಪಡಬಾರದು. ಜಾತಿಯ ಇತಿಹಾಸ, ಸಂಸ್ಕೃತಿ ತಿಳಿಯದಿದ್ದರೆ ಮಾತ್ರ ಕೀಳರಿಮೆ ಮೂಡಲು ಸಾಧ್ಯ ಎಂದರು.

ತಾಲೂಕು ಕುರುಬರ ಸಂಘದ ಅಧ್ಯಕ್ಷ ಬಿ.ಎಂ. ಸಂತೋಷ್ ಮಾತನಾಡಿ, ಸಮಾಜ ಬಾಂಧವರ ನಡುವೆ ಬಾಂಧವ್ಯ ಬೆಳೆಯಲು ಮತ್ತು ಸಮಾಜದ ಪ್ರತಿಭಾವಂತರನ್ನು ಪ್ರೋತ್ಸಾಹಿಸಲು ಇಂತಹ ಕಾರ್ಯಕ್ರಮಗಳು ಮುಖ್ಯ. ಸೇವಾ ಭಾವನೆ ರೂಢಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಗೌರವ ದೊರೆಯಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಬಿ.ಎಸ್. ಶೇಖರಪ್ಪ, ದಾವಣಗೆರೆಯ ಪ್ರೊಬೆಷನರಿ ತಹಸೀಲ್ದಾ‌ರ್ ಟಿ.ಎನ್. ರಘು, ಕರ್ನಾಟಕ ಪ್ರದೇಶ ಕುರುಬರ ಸಂಘ ಉಪಾಧ್ಯಕ್ಷ ಕೆ.ರಂಗನಾಥ್, ನಿರ್ದೇಶಕರಾದ ಎಂ.ಶರತ್, ಡಾ.ಸೌಮ್ಯ ಪ್ರಶಾಂತ್, ಕನಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಿ.ಪ್ರಭಾಕರ್ ಬೀರಯ್ಯ, ತಾಲೂಕು ಕುರುಬರ ಸಂಘ ಪದಾಧಿಕಾರಿಗಳಾದ ಬಿ.ಎಚ್. ವಸಂತ, ಎನ್.ಸತೀಶ್, ಬಿ.ಎಸ್. ಮಂಜುನಾಥ್, ಬಿ.ಎ. ರಾಜೇಶ್, ಜೆ.ಕುಮಾರ್, ಕೆ.ಕೇಶವ, ಎಲ್.ಪ್ರವೀಣ್, ನಿರ್ದೇಶಕರಾದ ಸಣ್ಣಯ್ಯ, ಕೆ.ಲೋಕೇಶ್, ವಿನೋದ್ ಕುಮಾರ್, ಹೇಮಾವತಿ ಶಿವಾನಂದ, ಜೆ.ಮಂಜುನಾಥ್‌ ಇನ್ನಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರಶಾಂತ ಸಣ್ಣಕ್ಕಿ ನಿರೂಪಿಸಿದರು.

- - - ಟಾಪ್‌ ಕೋಟ್‌ಹಾಲುಮತ ಸಮಾಜದವರು ಒಟ್ಟುಗೂಡಿದರೆಂದರೆ ಇತರರಲ್ಲಿ ಸಂಚಲನ ಮೂಡುತ್ತದೆ. ಆದರೆ, ನಾವು ಹಾಲಿನಂತೆ ಶುದ್ಧವಾಗಿ ಬದುಕೋಣ. ಹಾಲುಮತ ಸಮಾಜ ಉತ್ತಮ ಇತಿಹಾಸ ಹಾಗೂ ಧಾರ್ಮಿಕ ಸಂಸ್ಕೃತಿಯನ್ನು ಒಳಗೊಂಡಿರುವ ಸಮಾಜವಾಗಿದೆ. ವಿದ್ಯೆ, ವಿನಯ ಕಲಿಸಬೇಕು. ಸಮಾಜದ ಕಾರ್ಯಕ್ರಮಗಳಲ್ಲಿ ಒಟ್ಟುಗೂಡಿ ಸಮಾಜದ ಏಳಿಗೆಗೆ ಕಾರಣರಾಗಬೇಕು

- ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಕಾಗಿನೆಲೆ ಪೀಠ

- - -

-ಡಿ26-ಬಿಡಿವಿಟಿ1:

ಕಾರ್ಯಕ್ರಮದಲ್ಲಿ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.

Share this article