.ಗಂಭೀರ ಚಿಂತನೆಯಿಂದ ವಿನೂತನ ಆವಿಷ್ಕಾರ ಸಾಧ್ಯ

KannadaprabhaNewsNetwork | Published : Nov 28, 2024 12:32 AM

ಸಾರಾಂಶ

ಸಾತನೂರು ದೇವರಾಜು ಅವರ ಸಾಹಿತ್ಯ ಕುರಿತು ವಿಚಾರ ಸಂಕಿರಣ

ಕನ್ನಡಪ್ರಭ ವಾರ್ತೆ ಮೈಸೂರುಗಂಭೀರ ಚಿಂತನೆಯಿಂದ ವಿನೂತನ ಆವಿಷ್ಕಾರ ಸಾಧ್ಯ ಎಂದು ಮೈಸೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಹೇಳಿದರು.ಶ್ರೀ ನಟರಾಜ ಪ್ರತಿಷ್ಠಾನ, ಕನ್ನಡ ಸಾಹಿತ್ಯ ಕಲಾಕೂಟ, ಸ್ವಂದನ ಸಾಂಸ್ಕೃತಿಕ ಪರಿಷತ್ತು ಬುಧವಾರ ಖಿಲ್ಲೆ ಮೊಹಲ್ಲಾದ ಶ್ರೀ ನಟರಾಜ ಸಭಾಭನದಲ್ಲಿ ಏರ್ಪಡಿಸಿದ್ದ ಹಿರಿಯ ಸಾಹಿತಿ, ಸರ್ಕಾರಿ ಪಿಯು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಸಾತನೂರು ದೇವರಾಜು ಅವರ ಸಾಹಿತ್ಯ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣ, ಸಂವಾದ ಹಾಗೂ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ವಿದ್ಯಾರ್ಥಿಗಳು ಕಲಿಯುವ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಮೊಬೈಲ್ ಅನ್ನು ಮಿತವಾಗಿ ಬಳಸಿ, ಗ್ರಂಥಾಲಯಗಳು ಭೇಟಿ ನೀಡಿ ಅಧ್ಯಯನ ಮಾಡುವುದರಿಂದ, ಪತ್ರಿಕೆಗಳನ್ನು ಓದುವುದರಿಂದ ಗಂಭೀರ ಚಿಂತನೆ ಬೆಳೆಸಿಕೊಳ್ಳಬಹುದು. ಆ ಮೂಲಕ ಹೊಸ ಹೊಸ ಆಲೋಚನೆಗಳಿಗೆ ತಮ್ಮನ್ನು ಒಡ್ಡಿಕೊಳ್ಳಬಹುದು ಎಂದರು.ಯಾವುದೂ ಬದಲಾಗುವುದಿಲ್ಲ. ಅದೇ ಸೂರ್ಯ, ಅದೇ ಚಂದ್ರ. ಹೀಗಾಗಿ ನಾವು ಬದಲಾಗಬೇಕು. ಒಳ್ಳೆಯ ವಿಚಾರಗಳನ್ನು ಓದಬೇಕು. ಆ ಮೂಲಕ ಜ್ಞಾನ ಸಂಪಾದನೆ ಮಾಡಬೇಕು. ಒಳ್ಳೆಯ ಸ್ನೇಹಿತರನ್ನು ಸಂಪಾದಿಸಬೇಕು ಎಂದು ಅವರು ಸಲಹೆ ಮಾಡಿದರು.''''ರವಿ ಕಾಣದನ್ನು ಕವಿ ಕಂಡ'''' ಎಂಬ ಮಾತಿದೆ. ಸಾಹಿತ್ಯ ರಚನೆಯಲ್ಲಿ ರಮ್ಯವಾಗಿ ವರ್ಣಿಸಬಹುದು. ಆದರೆ ವಿಜ್ಞಾನ ಸಾಹಿತ್ಯ ರಚನೆಯಲ್ಲಿ ಈ ರೀತಿ ಮಾಡಲಾಗದು. ಏಕೆಂದರೆ ಅಲ್ಲಿ ನಿಖರತೆ ಇರಬೇಕು. ಹೀಗಾಗಿ ವಿಜ್ಞಾನ ಸಾಹಿತ್ಯ ರಚನೆ ಕಷ್ಟ. ಜೊತೆಗೆ ಅನುವಾದ ಇನ್ನೂ ಕಷ್ಟ. ಪ್ರತಿ ಪದಗಳನ್ನು ಸರಿಯಾಗಿ ಆಲೋಚಿಸಿ ಬಳಸಬೇಕಾಗುತ್ತದೆ ಎಂದು ಅವರು ಹೇಳಿದರು.ಜೀವಶಾಸ್ತ್ರ ಉಪನ್ಯಾಸಕ, ಪ್ರಾಂಶುಪಾಲರಾಗಿ ಕೆಲಸ ಮಾಡಿರುವ ಸಾತನೂರು ದೇವರಾಜು ಅವರು ವಿಜ್ಞಾನ ಸಾಹಿತ್ಯ ಕುರಿತು 60ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಮೈಸೂರು ವಿವಿ ವಿಜ್ಞಾನ ವಿಷಯಕೋಶ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದು ಅವರ ಅಧ್ಯಯನದಿಂದ ಸಾಧ್ಯವಾಗಿದೆ. ಅವರ ವಿಜ್ಞಾನ ಸಾಹಿತ್ಯವನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರೊ.ಲೋಕನಾಥ್ ಶ್ಲಾಘಿಸಿದರು.ಪ್ರತಿಯೊಬ್ಬರಿಗೂ ಮಾತೃಭಾಷೆ ಮುಖ್ಯ. ಮಾತೃಭಾಷೆ ಚೆನ್ನಾಗಿ ಗೊತ್ತಿದ್ದರೆ ಇತರೆ ಭಾಷೆಗಳಿಂದ ಅನುವಾದ ಮಾಡಬಹುದು ಎಂದ ಅವರು ಹೇಳಿದರು.ಸಾತನೂರು ದೇವರಾಜು ಅವರ ಪುಸ್ತಕಗಳ ಪ್ರದರ್ಶನವನ್ನು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಉದ್ಘಾಟಿಸಿದರು. ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್. ಶಿವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು.''''ಜೀವಜಗತ್ತಿನ ವಿಸ್ಮಯಗಳು'''' ಕುರಿತು ವಿದ್ಯಾವರ್ಧಕ ಪದವಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ.ಜಿ. ಚಂದ್ರಶೇಖರ್, ''''ಜೈವಿಕ ತಂತ್ರಜ್ಞಾನ'''' ಕುರಿತು ವಿಧಿವಿಜ್ಞಾನ ಪ್ರಯೋಗಾಲಯದ ವೈಜ್ಞಾನಿಕಾಧಿಕಾರಿ ಡಾ.ಎಲ್. ಶಶಿಕುಮಾರ್, ''''ಸೃಜನಶೀಲ ಸಾಹಿತ್ಯ'''' ಕುರಿತು ನಂಜನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ಸಹಾಯಕ ಪ್ರಾಧ್ಯಾಪಕಿ ಡಾ.ಡಿ.ಕೆ. ಉಷಾ ವಿಚಾರ ಮಂಡಿಸಿದರು. ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಟಿ. ಸತೀಶ್ ಜವರೇಗೌಡ, ಶ್ರೀ ವಾತ್ಸಲ್ಯ ಬಿ.ಇಡಿ ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್ ದಳಪತಿ, ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕರೆ ಗೋಪಾಲ್ ಇದ್ದರು. ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್ ಪ್ರಾಸ್ತಾವಿಕ ಭಾಷಣ ಮಾಡಿ, ಸ್ವಾಗತಿಸಿದರು. ಪ್ರಶಿಕ್ಷಣಾರ್ಥಿ ಕೆ.ಡಿ. ಬಸವರಾಜು ವಂದಿಸಿದರು. ಪ್ರಶಿಕ್ಷಣಾರ್ಥಿ ಎಂ. ಕೃತಿಕಾ ನಿರೂಪಿಸಿದರು. ಚೂಡಾಮಣಿ ಪ್ರಾರ್ಥಿಸಿದರು.ಡಾ.ಎಂ. ಚಂದ್ರಕುಮಾರ್, ಎಸ್. ರಾಮಪ್ರಸಾದ್, ಚಂದ್ರಶೇಖರ ಮಿರ್ಲೆ, ವೀರಭದ್ರಪ್ಪ ಬಿಸ್ಲಳ್ಳಿ, ಮೂಗೂರು ನಂಜುಂಡಸ್ವಾಮಿ, ನೀಲಕಂಠನಹಳ್ಳಿ ತಮ್ಮಣ್ಣಗೌಡ ಮೊದಲಾದವರು ಪಾಲ್ಗೊಂಡಿದ್ದರು.

Share this article