ಗುರು ಹಿರಿಯರ ಬಗ್ಗೆ ಗೌರವ,ಭಯಭಕ್ತಿ ಇರಬೇಕು: ಮಹೇಶ್ ಕಾಕತ್ಕರ್

KannadaprabhaNewsNetwork |  
Published : Jul 12, 2025, 12:32 AM IST
ಿು | Kannada Prabha

ಸಾರಾಂಶ

ಶೃಂಗೇರಿಸಾಧನೆಗೆ ಗುರಿ ಇರಬೇಕು. ಗುರಿಯ ಹಿಂದೆ ಗುರು ಇರಬೇಕು. ಆಗ ಮಾತ್ರ ಸಾಧನೆ ಮಾಡಲು ಸಾದ್ಯ. ಗುರು ಹಿರಿಯರ ಬಗ್ಗೆ ಗೌರವ, ಭಯಭಕ್ತಿ ತೋರಬೇಕು ಎಂದು ಸಂಸ್ಕೃತ ಪ್ರಾಧ್ಯಾಪಕ ಮಹೇಶ್ ಕಾಕತ್ಕರ್ ಹೇಳಿದರು.

ಪತಂಜಲಿ ಯೋಗ ಶಿಕ್ಷಣ ಸಮೀತಿ ಆಯೋಜಿಸಿದ್ದ ಗುರುಪೂರ್ಣಿಮೆ

ಕನ್ನಡಪ್ರಭ ವಾರ್ತೆ, ಶೃಂಗೇರಿ

ಸಾಧನೆಗೆ ಗುರಿ ಇರಬೇಕು. ಗುರಿಯ ಹಿಂದೆ ಗುರು ಇರಬೇಕು. ಆಗ ಮಾತ್ರ ಸಾಧನೆ ಮಾಡಲು ಸಾದ್ಯ. ಗುರು ಹಿರಿಯರ ಬಗ್ಗೆ ಗೌರವ, ಭಯಭಕ್ತಿ ತೋರಬೇಕು ಎಂದು ಸಂಸ್ಕೃತ ಪ್ರಾಧ್ಯಾಪಕ ಮಹೇಶ್ ಕಾಕತ್ಕರ್ ಹೇಳಿದರು.

ಪಟ್ಟಣದ ಕನ್ನಡ ಭವನದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮೀತಿ ಆಯೋಜಿಸಿದ್ದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಗುರುಶಿಷ್ಯ ಪರಂಪರೆ ಪ್ರಾಚೀನ ಭಾರತದ ಕಾಲ ದಿಂದಲೂ ನಡೆದುಕೊಂಡು ಬಂದಿದೆ. ವೇದೋದ್ಧಾರಕ ಶ್ರೀ ವ್ಯಾಸ ಮಹರ್ಷಿಗಳ ಜನ್ಮ ದಿನಾಚಾರಣೆಯೇ ಗುರುಪೂರ್ಣಿಮೆ. ಬೃಹತ್ತಾದ ವೇದಗಳನ್ನು 18 ಪುರಾಣ ಗಳನ್ನು ವಿಂಗಡಿಸಿ ಸರಳೀಕೃತಗೊಳಿಸಿ ಜನಸಾಮಾನ್ಯರಿಗೆ ಅಧ್ಯಯನಕ್ಕೆ ಅನುವು ಮಾಡಿಕೊಟ್ಟವರು ವೇದವ್ಯಾಸರು.

ಗುರುಪರಂಪರೆಯಲ್ಲಿ ಶ್ರೇಷ್ಠ ದಾರ್ಶನಿಕರಾಗಿದ್ದರು. ನಮಗೆ ಮಾರ್ಗದರ್ಶನ ನೀಡಿ ವಿದ್ಯೆ ಬುದ್ದಿಗಳನ್ನು ಕಲಿಸಿದ ಗುರುಗಳನ್ನು ಆಧ್ಯಾತ್ಮಿಕವಾಗಿ ಗುರುಪರಂಪರೆಯಲ್ಲಿ ಬರುವ ಯತಿ ಶ್ರೇಷ್ಠರನ್ನು ಸ್ಮರಿಸಿ ಭಕ್ತಿ ಭಾವದಿಂದ ಗೌರವಿಸುವ, ಪೂಜಿಸುವ ಪರಿಪಾಠ ಹಿಂದೂ, ಜೈನ, ಭೌದ್ಧ ಧರ್ಮಗಳಲ್ಲಿ ಬೆಳೆದು ಬಂದಿದೆ ಎಂದರು.

ಇದೇ ಸಂದರ್ಭದಲ್ಲಿ ಹಿರಿಯ ಯೋಗಬಂಧು ಗಾಯಿತ್ರಿಯವರನ್ನು ಸನ್ಮಾನಿಸಲಾಯಿತು. ಯೋಗ ಶಿಕ್ಷಣ ಸಮಿತಿ ನಾಗೇಶ್ ಕಾಮತ್, ಯೋಗಶಿಕ್ಷಕಿ ಪದ್ಮಾ, ಡಾ.ದಯಾನಂದ್, ರಮೇಶ್ ಶೂನ್ಯ, ಮಂಜುನಾಥ ಗೌಡ, ಭಾರತೀ ,ಸುಮ, ಸೌಮ್ಯ, ಭುವನ, ಮೇಘನಾ, ವೈಷ್ಣವಿ, ವೈಭವಿ, ಸುಬ್ರಮಣ್ಯ, ರಾಣಿ ಆನಂದ ಮತ್ತಿತರರು ಇದ್ದರು.

10 ಶ್ರೀ ಚಿತ್ರ 2-

ಶೃಂಗೇರಿ ಪಟ್ಟಣದ ಕನ್ನಡ ಭವನದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಗುರುಪೂರ್ಣಿಮೆ ಕಾರ್ಯಕ್ರಮ ಆಚರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು