ದಾಬಸ್‌ಪೇಟೆ: ಅಮ್ಮ ನಮ್ಮಗೆಲ್ಲ ಅಮ್ಮನಂತೆ ಇದ್ದು ಅತ್ಯಂತ ಪ್ರೀತಿ ವಾತ್ಸಲ್ಯದಿಂದ ಮಾತನಾಡಿಸುತ್ತಿದ್ದತು. ಅವರು ನೆಲಮಂಗಲಕ್ಕೆ ಬಂದ ನಂತರ ಈ ಭಾಗದಲ್ಲಿ ಬಹಳ ಅಭಿವೃದ್ಧಿ ಆಗಿತ್ತು. ಗ್ರಾಮಸ್ಥರ ಯಾವುದೇ ಕೆಲಸಗಳಿದ್ದರೂ ಸರ್ಕಾರದಲ್ಲಿ ಮಾತನಾಡಿ ಬಗೆಹರಿಸುತ್ತಿದ್ದರು. ತಮ್ಮ ಸ್ವಂತ ಖರ್ಚಿನಿಂದ ರಸ್ತೆಗಳನ್ನು ಮಾಡಿಸಿದ್ದರು. ಕಷ್ಟ ಅಂತ ಹೋದರೆ ಕೈಲಾದ ಸಹಾಯ ಮಾಡದೇ ವಾಪಸ್ಸು ಕಳುಹಿಸುತ್ತಿರಲಿಲ್ಲ. ಇದೀಗ ಅವರನ್ನು ಕಳೆದುಕೊಂಡು ಅನಾಥರಾಗಿದ್ದೇವೆ ಎಂದು ಸೋಲದೇವನಹಳ್ಳಿ ಗ್ರಾಮಸ್ಥರು ಕಣ್ಣೀರಿಟ್ಟ ದೃಶ್ಯ ಎಲ್ಲರ ಮನಕರಗುವಂತ್ತಿತ್ತು.
ಪೋಟೋ ಮುಂದೆ ಕುಳಿತು ರೋದಿಸಿದ ಬ್ಲಾಕಿ :ಲೀಲಾವತಿ ಅವರು ಕಳೆದ ಕಳೆದ 10 ವರ್ಷಗಳಿಂದ ಬ್ಲ್ಯಾಕಿ ಎಂಬ ಶ್ವಾನವನ್ನು ಸಾಕಿಕೊಂಡಿದ್ದರು. ಅವರ ಜೊತೆ ಬ್ಲಾಕಿ ಬಹಳ ಒಡನಾಟ ಇಟ್ಟುಕೊಂಡಿತ್ತು. ಲೀಲಾವತಿ ಆಸ್ಪತ್ರೆಗೆ ದಾಖಲಾಗಲು ಬರುವಾಗ ಕಾಲು ಸ್ವಾಧೀನ ಇಲ್ಲದಿದ್ದರು, ಕಾಲು ಎಳೆದುಕೊಂಡೇ ಅವರ ಹಿಂದೆ ಓಡಿತ್ತು. ಮನೆಯ ಒಳಭಾಗ ಲೀಲಾವತಿಯವರ ಪೋಟೋ ಮುಂದೆ ಕುಳಿತು ನಾಯಿಯ ರೋಧಿಸುತ್ತಿತ್ತು.
ಅಮ್ಮ ಇಲ್ಲದೆ ಅನಾಥರಾಗಿದ್ದೇವೆ :ಲೀಲಮ್ಮನವರ ಮನೆಕೆಲಸಕ್ಕೆ ಹೋಗುತ್ತಿದ್ದ ನಮ್ಮನ್ನು ಮಕ್ಕಳಂತೆ ನೋಡಿಕೊಂಡಿದ್ದಾರೆ. ಯಾವತ್ತೂ ನಮಗೆ ಭೇದಬಾವ ಮಾಡಿಲ್ಲ. ನಮ್ಮ ಮನೆಯಲ್ಲಿರೋ ನಾಯಿಗಳು ಕೂಡ ಆಳುತ್ತಿವೆ. ಅಮ್ಮನವರ ಪ್ರೀತಿಯ ನಾಯಿ ಬ್ಲಾಕಿ ರಾತ್ರಿಯಿಂದ ಊಟ ಮಾಡಿಲ್ಲ. ಅಮ್ಮ ಇಲ್ಲದಿರೋದು ನಮಗೆಷ್ಟು ನೋವಾಗಿದಿಯೋ ಅಷ್ಟೇ ವೇದನೆಯನ್ನ ನಾಯಿ ಕೂಡ ಅನುಭವಿಸುತ್ತಿದೆ ಎಂದು ಮನೆಕೆಲಸದವರು ಕಣ್ಣೀರಿಟ್ಟರು.
ನಮ್ಮ ಪಾಲಿಗೆ ದೇವರು:ಲೀಲಾವತಿ ಆಪ್ತ ಶೀನಾ ಮಾತನಾಡಿ, ಲೀಲಾವತಿ ಅವರ ಹೊಟ್ಟೆಯಲ್ಲಿ ಹುಟ್ಟಿಲ್ಲ ಅನ್ನೋದು ಬಿಟ್ಟರೆ ಅವರೂ ನನಗೆ ಅಮ್ಮನಾಗಿದ್ದರು. 1995ರಲ್ಲಿ ನನ್ನ ಹತ್ತಿರವೇ ಅವರು ಈ ತೋಟ ಖರೀದಿ ಮಾಡಿದ್ದರು. ಅಂದಿನಿಂದ ನನಗೂ ಅವರಿಗೂ ಬಹಳ ಪ್ರೀತಿ. ನನ್ನ ಕಷ್ಟ ಸುಖದಲ್ಲಿ ಲೀಲಮ್ಮ ನನ್ನ ಜೊತೆಗಿದ್ದರು. ತೋಟ ಖರೀದಿ ಮಾಡುವಾಗ ಕೊನೆಯ ಕ್ಷಣದವರೆಗೂ ನಾನು ಇಲ್ಲೇ ಇರುತ್ತೇನೆ ಎಂದಿದ್ದರು. ಹಾಗೆಯೇ ನನ್ನ ಮಣ್ಣಲ್ಲೇ ಅವರು ಕೊನೆಯಾದರು. ಅವರು ನಮ್ಮ ಊರಿಗೆ ಬಂದ ಮೇಲೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಟ್ಟರು. ಅವರು ಕಲಾದೇವತೆ ಮಾತ್ರವಲ್ಲ ನಮ್ಮ ಪಾಲಿಗೆ ದೇವರು ಎಂದರು.
ಪೋಟೋ 4 :ಲೀಲಾವತಿ ಅವರ ಪ್ರಾರ್ಥಿವ ಶರೀರಕ್ಕೆ ಜಿ.ಪಂ.ಸಿಇಒ ಅನುರಾಧ ಅಂತಿಮ ನಮನ ಸಲ್ಲಿಸಿದರು.
ಪೋಟೋ 5 : ತಿಪ್ಪಗೊಂಡನಹಳ್ಳಿಯ ವೃದ್ದೆಯೊಬ್ಬರು ಲೀಲಾವತಿ ನೆನಪಿಸಿಕೊಂಡು ಅಳುತ್ತಿರುವುದುಪೋಟೋ 6 : ನಟ ವಿನೋದ್ ರಾಜ್ ತಾಯಿಯ ಮುಖವನ್ನು ನೋಡುತ್ತಾ ಭಾವುಕರಾಗಿರುವುದು