ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗದಲ್ಲಿ ಶನಿವಾರ ರೈತ ಉತ್ಪಾದಕ ಕಂಪನಿಗಳ ಒಕ್ಕೂಟಗಳ ಪಾತ್ರ ಕುರಿತು ಜಿಲ್ಲಾ ಪಂಚಾಯಿತಿ, ಸಹೋದಯ ರೈತ ಉತ್ಪಾದಕ ಕಂಪನಿಗಳ ಒಕ್ಕೂಟ ಲಿಮಿಟೆಡ್, ಕೃಷಿ ಇಲಾಖೆ ಹಾಗೂ ಚೈತನ್ಯ ರೂರಾಲ್ ಡೆವಲಪ್ ಮೆಂಟ್ ಸೊಸೈಟಿ ಸೇರಿದಂತೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ದೇಶದ ಬಹುದೊಡ್ಡ ಸಮೂಹಕ್ಕೆ ಕೃಷಿಯೇ ಪ್ರಮುಖ ವೃತ್ತಿಯಾಗಿದೆ.ದುರಂತ ಅಂದ್ರೆ ಇಲ್ಲಿಯೇ ಹೆಚ್ಚು ತೊಂದರೆಗಳಿವೆ. ಅನಿಶ್ಚಿತ ತೆಯಲ್ಲಿ ರೈತರು ಬೆಳೆ ಬೆಳೆಯುತ್ತಿದ್ದಾರೆ. ಬೆಳೆದ ಬೆಳಗೆ ಸರಿಯಾದ ಬೆಳೆ ಸಿಗದ ಪರಿಸ್ಥಿತಿಗಳಿವೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆನ್ನುವ ಪ್ರಯತ್ನ ಹಲವಾರು ವರ್ಷಗಳಿಂದಲೂ ನಡೆದಿದೆ. ಆದರೂ ಅದಕ್ಕೆ ಪರಿಹಾರ ಸಿಗದಂತಾಗಿದೆ. ಈ ಹಿನ್ನೆಲೆಯಲ್ಲಿ ಕೃಷಿಯನ್ನು ಕೇವಲ ಭಾವನಾತ್ಮಕವಾಗಿ ನೋಡದೆ ಅದನ್ನು ಉದ್ಯಮವಾಗಿ ಪರಿಗಣಿಸಬೇಕಿದಾಗ ಮಾತ್ರ ಬೇರೆಯವ ಸಹಾಯಕ್ಕೆ ಕಾಯದೆ, ತಮ್ಮಿಂದ ಇತರರಿಗೆ ಸಹಾಯ ಮಾಡಲು ಸಾಧ್ಯವಾಗಲಿದೆ ಎಂದರು.ಕೃಷಿ ಉತ್ಪನ್ನಗಳಿಗೆ ಈಗ ಮಾರುಕಟ್ಟೆ ಸಮಸ್ಯೆಯಿದೆ. ಇದನ್ನು ನಿಭಾಯಿಸಲು ಸರ್ಕಾರ ಹಲವು ರೀತಿ ಪ್ರಯತ್ನ ನಡೆಸುತ್ತಿರುವುದರ ನಡುವೆಯೇ ಸಹಕಾರಿ ಕ್ಷೇತ್ರವೂ ಕೂಡ ಪ್ರಯತ್ನ ನಡೆಸಿದೆ. ಆದರೆ ಸಹಕಾರಿ ಕ್ಷೇತ್ರದಲ್ಲಿ ಒಂದಷ್ಟು ಲೋಪದೋಷಗಳು ಆಗಿದ್ದನ್ನುನಾವು ನೋಡಿದ್ದೇವೆ. ಇಂತಹ ಸಂದರ್ಭದಲ್ಲಿ ರೈತ ಉತ್ಪಾದಕ ಕಂಪನಿಗಳ ಪಾತ್ರ ದೊಡ್ಡದಿದೆ ಎಂದರು.
ಸರ್ಕಾರದ ಸೌಲಭ್ಯಗಳನ್ನು ಹಂಚಿಕೆ ಮಾಡುವಾಗ ಎಸ್ಟಿ ಎಸ್ಟಿಗೆ ಇಷ್ಟು, ಮಹಿಳೆಯರಿಗೆ ಇಷ್ಟು, ಎಎಲ್‌ಎ, ಎಂಪಿ ಕೋಟಾ ಇಷ್ಟು ಎಂದುಹಂಚಿಕೆ ಮಾಡುವ. ಪದ್ದತಿ ಹಾಗೆಯೇ ಇದೆ. ಇನ್ನಾದರೂ ಕೂಡ ಅಧಿಕಾರಿಗಳ ಮನೋಭಾವ ಬದಲಾಗಬೇಕಿದೆ ಎಂದರು.
ಜಿಲ್ಲೆಯ ವಿವಿಧೆಡೆಗಳಿಂದ ಬಂದಿದ್ದ ನೂರಾರು ರೈತರು ಕಾರ್ಯಾಗಾರದಲ್ಲಿ ಪಾಲ್ಗೊಂಡರು.