ಗರ್ವ ಸೆ ಕಹೋ ಹಮ್ ಹಿಂದೂ ಹೈ

KannadaprabhaNewsNetwork |  
Published : Mar 13, 2026, 03:00 AM IST
  ಪಟ್ಟಣದ ದ್ಯಾಮವ್ವದೇವಿ ದೇವಸ್ಥಾನ ಮುಂಭಾಗದಲ್ಲಿ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ ವತಿಯಿಂದ ಹಮ್ಮಿಕೊಂಡ ಬೃಹತ ಹಿಂದೂ ಸಮ್ಮೇಳನ ವೇದಿಕೆ ಕಾರ್ಯಕ್ರಮದಲ್ಲಿ ವಕ್ತಾರಾಗಿ ರಾ ಸ್ವಂ ಸೇ ಸಂ ಪ್ರಚಾರಕ ದಾಮೋದರ ಜಿ ಹಾಗೂ ಪೂಜ್ಯರು ಇದ್ದರು | Kannada Prabha

ಸಾರಾಂಶ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ಧಿ ವರ್ಷದ ಅಂಗವಾಗಿ ಧರ್ಮದ ಜಾಗೃತಿಗಾಗಿ ದೇಶ ಸೇರಿದಂತೆ ವಿಶ್ವದಾದ್ಯಂತ ಲಕ್ಷಕ್ಕಿಂತಲೂ ಅಧಿಕ ಮಂಡಲ ಕೇಂದ್ರಗಳಲ್ಲಿ ಬೃಹತ್ ಹಿಂದೂ ಸಮ್ಮೇಳನಗಳು ಜರಗುತ್ತಿವೆ. ಸಮ್ಮೇಳನದಲ್ಲಿ ಕೋಟ್ಯಂತರ ಹಿಂದೂಗಳು ಭಾಗವಹಿಸಿ ನಾವೆಲ್ಲ ಹಿಂದೂ, ನಾವೆಲ್ಲ ಬಂಧು, ನಾವೆಲ್ಲ ಒಂದು, ಗರ್ವ ಸೆ ಕಹೋ ಹಮ್ ಹಿಂದೂ ಹೈ ಎಂದು ಅಭಿಮಾನದಿಂದ ಹೇಳತ್ತಾರೆ ಎಂದು ರಾಷ್ಟೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕ ದಾಮೋದರ ಜೀ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಲ್ಹಾರ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ಧಿ ವರ್ಷದ ಅಂಗವಾಗಿ ಧರ್ಮದ ಜಾಗೃತಿಗಾಗಿ ದೇಶ ಸೇರಿದಂತೆ ವಿಶ್ವದಾದ್ಯಂತ ಲಕ್ಷಕ್ಕಿಂತಲೂ ಅಧಿಕ ಮಂಡಲ ಕೇಂದ್ರಗಳಲ್ಲಿ ಬೃಹತ್ ಹಿಂದೂ ಸಮ್ಮೇಳನಗಳು ಜರಗುತ್ತಿವೆ. ಸಮ್ಮೇಳನದಲ್ಲಿ ಕೋಟ್ಯಂತರ ಹಿಂದೂಗಳು ಭಾಗವಹಿಸಿ ನಾವೆಲ್ಲ ಹಿಂದೂ, ನಾವೆಲ್ಲ ಬಂಧು, ನಾವೆಲ್ಲ ಒಂದು, ಗರ್ವ ಸೆ ಕಹೋ ಹಮ್ ಹಿಂದೂ ಹೈ ಎಂದು ಅಭಿಮಾನದಿಂದ ಹೇಳತ್ತಾರೆ ಎಂದು ರಾಷ್ಟೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕ ದಾಮೋದರ ಜೀ ಹೇಳಿದರು.

ಪಟ್ಟಣದ ದ್ಯಾಮವ್ವದೇವಿ ದೇವಸ್ಥಾನ ಮುಂಭಾಗದಲ್ಲಿ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ ವತಿಯಿಂದ ಹಮ್ಮಿಕೊಂಡ ಬೃಹತ ಹಿಂದೂ ಸಮ್ಮೇಳನ ವೇದಿಕೆ ಕಾರ್ಯಕ್ರಮದ ವಕ್ತಾರರಾಗಿ ಮಾತನಾಡಿದ ಅವರು, ಎಲ್ಲಿ ಶಕ್ತಿ ಇದೆಯೋ ಅಲ್ಲಿ ಭಕ್ತಿಯ ಚಮತ್ಕಾರ ನಡೆಯುತ್ತದೆ. ಅಂತಹ ಶಕ್ತಿ ಸಂಪನ್ನವಾಗಬೇಕು. ಸಂಪೂರ್ಣ ದೇಶಕ್ಕೆ ದೇಶವೇ ಎದ್ದು ನಿಲ್ಲಬೇಕು. ಹೀಗಾಗಿ ಹಿಂದೂ ಎದ್ದಲ್ಲಿ ದೇಶ ಎದ್ದಿತು. ಸಂಘಟಿತ ಹಿಂದೂ, ಶಕ್ತಿಶಾಲಿ ಭಾರತ ಎಂದರು.ಧರ್ಮ ಹಿಂದೂ ಸನಾತನ ಧರ್ಮವಾಗಿದೆ. ಆದರ್ಶ ರಾಮನ 16 ಗುಣಗಳು ನಮ್ಮ ಮನೆಯ ಮಕ್ಕಳಲ್ಲಿ ಬೆಳೆಸಬೇಕು. ಉತ್ತರದ ಹಿಮಾಲಯದಿಂದ ದಕ್ಷಿಣದ ಕನ್ಯಾಕುಮಾರಿವರೆಗೆ ರಾಮನಾಮ ಜಪ ಆಗುತ್ತಿದೆ. ಇಂದಿನ ಯುವಕರು ದೇಶದ ಸಂಸ್ಕೃತಿ, ಆಚಾರ ವಿಚಾರ ಪದ್ಧತಿಯನ್ನು ಅಳವಡಿಸಿಕೊಂಡಾಗ ಮಾತ್ರ ಈ ದೇಶ, ಹಿಂದೂ ಧರ್ಮ ಹಾಗೂ ನಾವುಗಳೆಲ್ಲ ಉಳಿಯಲು ಸಾಧ್ಯ ಎಂದರು.ಪ್ಲಾಸ್ಟಿಕ್ ಮುಕ್ತ ಭಾರತ ಆಗಬೇಕಾದರೇ ನಾವು ಪ್ಲಾಸ್ಟಿಕ್ ಬಳಕೆ ನಿಷೇಧಿಸಬೇಕು. ಇವತ್ತು ಪ್ಲಾಸ್ಟಿಕ್ ತಿಂದು ಲಕ್ಷಾಂತರ ಗೋವುಗಳು ಸಾಯುತ್ತಿವೆ. ಈ ಭೂಮಿ, ನೆಲ, ಜಲ ಸಂರಕ್ಷಿಸಲು ಪಣತೋಡೋಣ. ಮನೆಯಲ್ಲಿ ಹೆಚ್ಚು ಸ್ವದೇಶಿ ವಸ್ತುಗಳನ್ನು ಬಳಸಿ ದೇಶವನ್ನು ಸದೃಢ ರಾಷ್ಟ್ರವನ್ನಾಗಿ ಮಾಡೋಣ ಎಂದರು.ದಿಗಂಬರೇಶ್ವರ ಮಠದ ಯೋಗಿ ಕಲ್ಲಿನಾಥ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಹಿಂದೂ ಧರ್ಮದ ರಕ್ಷಣೆಗಾಗಿ ಇಂದಿನ ಯುವಕರು ಹಗಲಿರುಳು ಶ್ರಮಿಸುತ್ತಿದ್ದಾರೆ. ಕೆಲವು ರಾಜಕಾರಣಿಗಳು ಓಟಿನ ಆಸೆಗಾಗಿ ಹಿಂದೂ ಧರ್ಮವನ್ನು ತೆಗಳುತ್ತಿದ್ದಾರೆ. ಆದರೆ, ಇಂದು ಹಿಂದೂ ಆಗಿರುವುದರಿಂದಲೇ ಇಂದು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರೇ, ಪ್ರಿಯಾಂಕಾ ಖರ್ಗೆ ಮಂತ್ರಿಯಾಗಿದ್ದಾರೆ. ವಿನಃ ಮುಸ್ಲಿಂರಾಗಿದ್ದರೇ ಇವರು ಶಾಸಕರ ಕೂಡಾ ಆಗ್ತಿರಲಿಲ್ಲ. ಸಚಿವ ಪ್ರಿಯಾಂಕರವರಿಗೆ ಪರಿಶಿಷ್ಟ ಜಾತಿ ಸರ್ಟಿಫಿಕೇಟ್ ಕೂಡಾ ಸಿಗ್ತಿರಲಿಲ್ಲ ಎಂದು ತಿಳಿಸಿದರು.ಮಹಿಳಾ ಪ್ರತಿನಿಧಿ ಗಾಯತ್ರಿ ಪತ್ತಾರ ಮಾತನಾಡಿ, ತಾಯಿಯ ಮಡಿಲೇ ಮೊದಲ ಶಾಲೆ, ಹಿಂದೂ ಸಮಾಜಕ್ಕೆ ಮಹಾನ್ ವ್ಯಕ್ತಿಗಳನ್ನು ಕೊಡುವಲ್ಲಿ ತಾಯಿ ಸಂಸ್ಕಾರ ಬಹಳ ಮುಖ್ಯ. ಸ್ವಾಮಿ ವಿವೇಕಾನಂದ, ಶಿವಾಜೀ ಮಹಾರಾಜ ಅಂತಹ ವ್ಯಕ್ತಿ ಗಳ ಶಕ್ತಿ ಹಿಂದೆ ತಾಯಿ ಇದ್ದಾಳೆ. ಹೆಣ್ಣಿಗೆ ಷೋಡಶ ಶೃಂಗಾರಗಳು ಎಷ್ಟು ಮುಖ್ಯವೂ, ಅಷ್ಟೇ ಸಂಸ್ಕಾರಗಳಿಂದ ಹಿಂದೂ ಧರ್ಮದ ರಕ್ಷಣೆಯ ಹೊಣೆ ಮುಖ್ಯ. ವಸುದೈವ ಕುಟುಂಬಕಮ್ ಸ್ತ್ರೀ ಶಕ್ತಿ ಮೇಲೆ ಇದೆ. ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ ಸಂಸ್ಕಾರಯುತ ಹೆಣ್ಣಿಗೆ ಅನಾದಿ ಕಾಲದಿಂದಲೂ ಪೂಜನೀಯ ಸ್ಥಾನವಿದೆ. ಹೆಣ್ಣು ಮನೆಗೆ ಸಮೃದ್ಧಿ ಮೌಲ್ಯಗಳ ಆಧಾರ ಎಂದರು.ಈ ವೇಳೆ ಸಾನ್ನಿಧ್ಯವನ್ನು ವಹಿಸಿ ಮುಳವಾಡ ಕೊಣ್ಣೂರು ಹಿರೇಮಠದ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಸಾನ್ನಿಧ್ಯ ವಹಿಸಿ ವರ್ಚಗಲ್ ಶೃದ್ದಾನಂದ ಆಶ್ರಮದ ಜಗದೀಶಾನಂದ ಮಹಾಸ್ವಾಮಿಗಳು ಮತ್ತು ಶೀಲವಂತ ಹಿರೇಮಠದ ಡಾ.ಕೈಲಾಸನಾಥ ಮಹಾಸ್ವಾಮಿಗಳು ಮಾತನಾಡಿದರು. ಮಾಜಿ ಸೈನಿಕರು ಹಾಗೂ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿಯ ಅಧ್ಯಕ್ಷ ಐ.ಜಿ.ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಈರಯ್ಯ ಗಣಕುಮಾರ ಸ್ವಾಗತಿಸಿದರು. ಶ್ರೀಶೈಲ ಪಡಸಲಗಿ ನಿರೂಪಿಸಿದರು.ಶೋಭಯಾತ್ರೆಯಲ್ಲಿ ಮಹಿಳೆಯರ ಕುಂಭಮೇಳ:

ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ ವತಿಯಿಂದ ಹಮ್ಮಿಕೊಂಡ ಭವ್ಯ ಶೋಭಾಯಾತ್ರೆಯು ಪಟ್ಟಣದ ದಿಗಂಬರೇಶ್ವರ ಮಠದಿಂದ ಆರಂಭಗೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದ್ಯಾಮವ್ವದೇವಿ ದೇವಸ್ಥಾನವನ್ನು ತಲುಪಿತು. ಶೋಭಯಾತ್ರೆಯಲ್ಲಿ ಮಹಿಳೆಯರ ಕುಂಭಮೇಳ, ಹತ್ತಾರು ವಾಹನಗಳಲ್ಲಿ ಭಾರತ ಮಾತೆ ಹಾಗೂ ವಿವಿಧ ಮಹಾಪುರುಷರ ಭಾವಚಿತ್ರಗಳು ನೋಡುಗರ ಕಣ್ಮನ ಸೆಳೆದವು. ಪಟ್ಟಣದ ಸಾವಿರಾರು ದೇಶಭಕ್ತ ಹಿಂದೂ ಬಾಂಧವರು, ಪೂಜ್ಯರು ಕೇಸರಿ ಶಾಲು ಕೊರಳಲ್ಲಿ ಧರಿಸಿ ಸನಾತನ ಧರ್ಮವನ್ನು ಎತ್ತಿ ಹಿಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ಷುಲ್ಲಕ ಕಾರಣಕ್ಕೆ ಥಳಿಸಿ ದಲಿತ ಯುವಕನ ಹತ್ಯೆ
ಶ್ರದ್ಧೆ, ನಂಬಿಕೆ ಭಕ್ತಿಯ ಮೂಲ: ಶ್ರೀ ರಾಜಶೇಖರಾನಂದ ಸ್ವಾಮೀಜಿ