ಮಳವಳ್ಳಿ:
ತಾಲೂಕಿನ ಕಿರುಗಾವಲು ವೀರಭದ್ರೇಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆದ ಪ್ರಜಾಸೇವೆ ಆಂದೋಲನದಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು, ತಮ್ಮ ಅವಧಿಯಲ್ಲಿ ಅಧಿಕಾರ ದುರುಪಯೋಗ ಪಡಿಸಿಕೊಂಡವರು. ಮಂಡ್ಯದಲ್ಲಿ ಭೂ ಹಗರಣದ ಬಗ್ಗೆ ಮಾತನಾಡುತ್ತಾರೆ. ಭೂ ಅಕ್ರಮದ ಬಗ್ಗೆ ಎಲ್ಲಾ ಮಾಹಿತಿಯೂ ಲಭ್ಯವಿದೆ. ಮಾಹಿತಿ ಹಕ್ಕು ನಿಯಮದಡಿ ಅರ್ಜಿ ಸಲ್ಲಿಸಿ ಪಡೆಯಬಹುದು ಎಂದು ತಿರುಗೇಟು ನೀಡಿದರು.
ಕೆಲವು ಯುಟ್ಯೂಬರ್‌ಗಳು ರಾಜಕಾರಣಕೋಸ್ಕರ ಸದಾ ಸುಳ್ಳುಗಳನ್ನು ಹೇಳುತ್ತಾ ಜನರನ್ನು ದಿಕ್ಕು ತಪ್ಪಿಸಲು ಹೊರಟಿದ್ದಾರೆ. ಇಂತಹ ಅಪಸ್ವರಗಳಿಗೆ ಕಿವಿಕೊಡಬಾರದು. ತಾಲೂಕಿನ ವಡ್ಡರಹಳ್ಳಿ ಕೆರೆ ಹೊರತುಪಡಿಸಿ ಎಲ್ಲಾ ಕರೆಗಳಿಗೆ ನೀರು ತುಂಬಿಸಲಾಗಿದೆ. ಇಲಾಖೆ ಅಧಿಕಾರಗಳನ್ನು ಗುರಿಯಾಗಿಸಿಕೊಂಡು ಕೆಲವರು ಶೋಷಣೆ ಮಾಡುತ್ತಿದ್ದಾರೆ. ಈ ಬಗ್ಗೆ ಸರಿ ತಪ್ಪುಗಳನ್ನು ಪ್ರಶ್ನೆ ಮಾಡಬೇಕಿದೆ ಎಂದರು.ಮುಂದಿನ ಡಿಸೆಂಬರ್ ತಿಂಗಳೊಳಗೆ ಸ್ಥಳೀಯ ಚುನಾವಣೆಗಳು ನಡೆಯಲಿದೆ. ಜ್ಞಾನದ ಅರಿವಿನೊಂದಿಗೆ ಭವಿಷ್ಯದ ಚಿಂತನೆಗಾಗಿ ಯುವ ಸಮೂಹ ಸೇವೆಯಲ್ಲಿ ಯಾರು ಪಾಲುದಾರರು ಆಗುತ್ತಾರೋ ಅವರನ್ನೇ ಆಯ್ಕೆ ಮಾಡಲಿದ್ದಾರೆ. ಉತ್ತಮ ನಾಯಕತ್ವ ಉಳ್ಳವರು ಭವಿಷ್ಯದ ನಾಯಕರಾಗುತ್ತಾರೆಂದು ಭವಿಷ್ಯ ನುಡಿದರು.