ಕಳ್ಳನ ಸೆರೆ: 25 ಲಕ್ಷ ಮೌಲ್ಯದ 531 ಗ್ರಾಂ ಚಿನ್ನಾಭರಣ ವಶ

KannadaprabhaNewsNetwork |  
Published : Mar 01, 2024, 02:17 AM IST
ಬಂಧಿತ ಆರೋಪಿಯಿಂದ ವಶಪಡಿಸಿಕೊಂಡಿದ್ದ ಚಿನ್ನಾಭರಣವನ್ನು ಕಳೆದುಕೊಂಡಿದ್ದ ವಾರಸುದಾರರಿಗೆ ಟೌನ್ ಪೊಲೀಸ್ ಠಾಣೆಗೆ ಕರೆಯಿಸಿ ವಾರಸುದಾರರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಚಿನ್ನಾಭರಣ ಹಸ್ತಾಂತರಿಸಿದರು. | Kannada Prabha

ಸಾರಾಂಶ

ಅಬ್ದುಲ್ ಜಬ್ಬರ್ ಬಂಧಿತ ಆರೋಪಿ. ಈತ ಕೋಲಾರ ಜಿಲ್ಲೆ ಬಂಗಾರಪೇಟೆಯ ವಿಜಯನಗರ ನಿವಾಸಿಯಾಗಿದ್ದು, ಪ್ರಸ್ತುತ ತುಮಕೂರು ಸದಾಶಿವನಗರದಲ್ಲಿ ನೆಲೆಸಿದ್ದು, ಬಟ್ಟೆ ವ್ಯಾಪಾರ ಮಾಡುತ್ತಿದ್ದ. ಟೌನ್ ಠಾಣೆಯ ಪಿಎಸ್‌ಐ ಶಶಿಧರ್ ಹಾಗೂ ಸಿಬ್ಬಂದಿ ಈತನನ್ನು ಬಂಧಿಸಿ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ಕನ್ನಡಪ್ರಭ ವಾರ್ತೆ ನೆಲಮಂಗಲ

ಟೌನ್ ಠಾಣೆಯ ಪೊಲೀಸರು ಕುಖ್ಯಾತ ಮನೆಗಳ್ಳನನ್ನು ಬಂಧಿಸಿ 25 ಲಕ್ಷ ಮೌಲ್ಯದ 531 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.

ಅಬ್ದುಲ್ ಜಬ್ಬರ್ ಬಂಧಿತ ಆರೋಪಿ. ಈತ ಕೋಲಾರ ಜಿಲ್ಲೆ ಬಂಗಾರಪೇಟೆಯ ವಿಜಯನಗರ ನಿವಾಸಿಯಾಗಿದ್ದು, ಪ್ರಸ್ತುತ ತುಮಕೂರು ಸದಾಶಿವನಗರದಲ್ಲಿ ನೆಲೆಸಿದ್ದು, ಬಟ್ಟೆ ವ್ಯಾಪಾರ ಮಾಡುತ್ತಿದ್ದ. ಟೌನ್ ಠಾಣೆಯ ಪಿಎಸ್‌ಐ ಶಶಿಧರ್ ಹಾಗೂ ಸಿಬ್ಬಂದಿ ಈತನನ್ನು ಬಂಧಿಸಿ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿ ವಶಪಡಿಸಿಕೊಂಡಿದ್ದ ಚಿನ್ನಾಭರಣವನ್ನು ಪಡೆದು ಕಳೆದುಕೊಂಡಿದ್ದ ವಾರಸುದಾರರಿಗೆ ಟೌನ್ ಪೊಲೀಸ್ ಠಾಣೆಗೆ ಕರೆಯಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಹಸ್ತಾಂತರಿಸಿದರು.

ಆರೋಪಿ ಸೈಯ್ಯದ್ ಅಹಮ್ಮದ್ ಬಿನ್ ಅಬ್ದುಲ್ ಜಬ್ಬರ್ ನ ಮೇಲೆ ಈಗಾಗಲೇ ಮೈಕೋ ಲೇಔಟ್. ಮಾದನಾಯಕನಹಳ್ಳಿ. ತುಮಕೂರು ನ್ಯೂ ಎಕ್ಸ್ ಬೆನ್ನನ್, ವಿಜಯನಗರ, ಕ್ಯಾತ್ಸಂದ್ರ, ಸಿಟಿ ಮಾರ್ಕೆಟ್. ಉಪ್ಪಾರಪೇಟೆ, ಚಂದ್ರ ಲೇಔಟ್, ಜಯನಗರ, ಆರ್.ಎಂ.ಸಿ ಯಾರ್ಡ್, ಜ್ಞಾನಭಾರತಿ, ಕಲಾಸಿಪಾಳ್ಯ, ತಾವರೆಕೆರೆ, ಐಜೂರು, ತುಮಕೂರು ಗ್ರಾಮಾಂತರ, ಜೆಜೆ ನಗರ, ಬಿಡದಿ, ರಾಜಗೋಪಾಲನಗರ ಇನ್ನೂ ಮುಂತಾದ ಠಾಣೆಗಳಲ್ಲಿ ಸುಮಾರು 45 ಕ್ಕೂ ಅಧಿಕ ಮನೆಗಳ್ಳತನ ಪ್ರಕರಣಗಳು ದಾಖಲಾಗಿದ್ದು, ಈತನು ರೂಢಿಗತ ಅಪರಾಧಿಯಾಗಿರುತ್ತಾನೆ.

ಆರೋಪಿಯಿಂದ ಕಳ್ಳತನವಾಗಿದ್ದ ಮಾಲನ್ನು ಪತ್ತೆ ಮಾಡುವ ಸಲುವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಪರ ಪೊಲೀಸ್ ಅಧೀಕ್ಷಕ ಪುರುಷೋತ್ತಮ್ ಹಾಗೂ ನಾಗರಾಜ್ ರ ಮಾರ್ಗದರ್ಶನದಲ್ಲಿ ಹಾಗೂ ನೆಲಮಂಗಲ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಜಗದೀಶರ ನೇತೃತ್ವದಲ್ಲಿ ನೆಲಮಂಗಲ ಟೌನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶಶಿಧರ.ಎಸ್.ಡಿ. ಪಿ.ಎಸ್.ಐ ಜಯಂತಿ. ಕೆ. ಧನರಾಜು, ಎಚ್.ವಿ. ನಂಜಯ್ಯ ಹಾಗೂ ಸಿಬ್ಬಂದಿ ಎ.ಎಸ್.ಐ ರಘು.ಬಿ.ಎಸ್. ಎಚ್. ಮಂಜುನಾಥ್, ಎಚ್ಸಿ ಕೇಶವಮೂರ್ತಿ, ಎಚ್ಸಿ. ಬಸವರಾಜು, ಪಿಸಿ ಫಕ್ರುಸಾಬ್ ಪಠಾಣ್, ಪಿಸಿ ಹರೀಶ್, ಎಹೆಚ್ ಸಿ ಗಿರೀಶ್ ರನ್ನೊಳಗೊಂಡ ತಂಡ ಆರೋಪಿಯನ್ನು ಬಂದಿಸಿ ಚಿನ್ನಾಭರಣ ವಶಪಡಿಸಕೊಳ್ಳುವಲ್ಲಿ ಯಶಸ್ವಿಯಾಗಿದೆ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...