ಹರಿಹರ: ಹಲವು ಜಿಲ್ಲೆಗಳ ಮನೆಗಳಲ್ಲಿ ಕಳವು ಕೃತ್ಯ ನಡೆಸಿದ್ದ ಆರೋಪಿಯನ್ನು ಭಾನುವಾರ ಹರಿಹರ ನಗರ ಠಾಣೆ ಪೊಲೀಸರು ಬಂಧಿಸಿ, ₹10,30,000 ಮೊತ್ತದ ಚಿನ್ನ, ಬೆಳ್ಳಿ ಸೇರಿದಂತೆ ವಿವಿಧ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಮತ್ತೊಬ್ಬ ಆರೋಪಿ ರಾಣೆಬೆನ್ನೂರಿನ ಮಾಸೂರು ರಟ್ಟಿಹಳ್ಳಿ ನಿವಾಸಿ ಪ್ರವೀಣ ಆನಂದಪ್ಪ ಹಡಗಲಿ ತಲೆತಪ್ಪಿಸಿಕೊಂಡಿದ್ದಾನೆ. ಈ ಇಬ್ಬರೂ ಕದ್ದಿದ್ದ ಬೈಕ್‍ನಲ್ಲಿ ಬರುತ್ತಿದ್ದಾಗ ಪೊಲೀಸರು ತಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ದಾವಣಗೆರೆ, ಹರಿಹರ, ಶಿವಮೊಗ್ಗ, ತೀರ್ಥಹಳ್ಳಿ, ಹುಬ್ಬಳ್ಳಿ, ಧಾರವಾಡ ಠಾಣೆಗಳಲ್ಲೂ ಆರೋಪಿಗಳ ವಿರುದ್ಧ ಪ್ರಕರಣಗಳು ಇರುವುದು ಪತ್ತೆಯಾಗಿದೆ.- - - -02ಎಚ್‍ಆರ್‌ಆರ್02: