ದಿನಸಿ ಅಂಗಡಿಯ ಬೀಗ ಒಡೆದು ನಗದು ದೋಚಿದ ಕಳ್ಳರು

KannadaprabhaNewsNetwork |  
Published : Dec 19, 2024, 12:31 AM IST
ಕಳ್ಳತನವಾಗಿರುವ ಕಟ್ಟಿನಕೆರೆ ಮಾರುಕಟ್ಟೆ ದಿನಸಿ ಅಂಗಡಿ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. | Kannada Prabha

ಸಾರಾಂಶ

ಕಟ್ಟಿನಕೆರೆ ಮಾರುಕಟ್ಟೆಯ ಒಳಗಿರುವ ದಿನಸಿ ಅಂಗಡಿಯೊಂದರಲ್ಲಿ ಕಳ್ಳರು ಬೀಗ ಒಡೆದು ಒಳಗಿದ್ದ ೧ ಲಕ್ಷದ ೫೦ ಸಾವಿರ ನಗದು ಕಳ್ಳತನ ಮಾಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಅಂಗಡಿಯಲ್ಲಿ ಇನ್ನಿತರ ಬೆಲೆಬಾಳುವ ವಸ್ತುಗಳು ಇದ್ದರೂ ಅವುಗಳನ್ನೆಲ್ಲ ಬಿಟ್ಟು ಕೇವಲ ಹಣವನ್ನು ಮಾತ್ರ ಕಳ್ಳತನ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಈ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮ ವಹಿಸಬೇಕು ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಕಟ್ಟಿನಕೆರೆ ಮಾರುಕಟ್ಟೆಯ ಒಳಗಿರುವ ದಿನಸಿ ಅಂಗಡಿಯೊಂದರಲ್ಲಿ ಕಳ್ಳರು ಬೀಗ ಒಡೆದು ಒಳಗಿದ್ದ ೧ ಲಕ್ಷದ ೫೦ ಸಾವಿರ ನಗದು ಕಳ್ಳತನ ಮಾಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಸಂಗಾತಿ ಪ್ರವಿಜನ್ ಸ್ಟೋರ್‌ನಲ್ಲಿ ಈ ಘಟನೆ ನಡೆದಿದೆ. ಮಂಗಳವಾರ ವ್ಯಾಪಾರ ಎಲ್ಲಾ ಮುಗಿದ ನಂತರ ಬೀಗ ಹಾಕಿಕೊಂಡು ಮನೆಗೆ ತೆರಳಿದ್ದ ವೇಳೆ ಕೈ ಚಳಕ ತೋರಿರುವ ಕಳ್ಳರು ಲಕ್ಷಾಂತರ ರುಪಾಯಿ ಹಣ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾರೆ. ಈ ಬಗ್ಗೆ ಅಂಗಡಿ ಮಾಲೀಕ ವೆಂಕಟೇಶ್ ಮಾತನಾಡಿ, ಮಂಗಳವಾರದಂದು ಎಂದಿನಂತೆ ಅಂಗಡಿ ವ್ಯಾಪಾರ ಮುಗಿದ ನಂತರ ರಾತ್ರಿ ೯ ಗಂಟೆಗೆ ಮನೆಗೆ ತೆರಳಿದ್ದು, ಬೆಳಿಗ್ಗೆ ಎಂದಿನಂತೆ ೭ ಗಂಟೆಗೆ ಬಂದು ನೋಡಲಾಗಿ ಅಂಗಡಿಯ ಒಂದು ಬದಿಯ ಬೀಗ ಒಡೆದಿರುವುದು ಕಂಡು ಬಂದಿದೆ. ಒಳಗೆ ನೋಡಿದರೇ ೧ ಲಕ್ಷದ ೫೦ ಸಾವಿರ ರು. ಹಣ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಈ ಹಿಂದೆ ಯಾವತ್ತೂ ಈ ರೀತಿಯ ಘಟನೆ ನಡೆದಿರಲಿಲ್ಲ. ಇದೇ ಮೊದಲ ಬಾರಿಗೆ ಈ ರೀತಿ ಕಳ್ಳತನ ನಡೆದಿರಲಿಲ್ಲ. ಈ ಬಗ್ಗೆ ಈಗಾಗಲೇ ಹಾಸನ ನಗರ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದರು. ನಗರಾಭಿವೃದ್ಧಿ ಪ್ರಾಧೀಕಾರದ ಮಾಜಿ ನಿರ್ದೇಶಕ ಮೋಹನ್ ಕುಮಾರ್ ಮಾತನಾಡಿ, ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಕಳ್ಳತನ ಪ್ರಕರಣಗಳು ಕಡಿಮೆ. ಆದರೆ ಈ ಅಹಿತಕರ ಘಟನೆ ನಡೆದಿರುವುದು ಬೇಸರ ತಂದಿದೆ. ಎಂದಿನಂತೆ ಮಂಗಳವಾರ ರಾತ್ರಿಯೂ ಸುಮಾರು ೧ ಗಂಟೆಗೆ ಪೊಲೀಸ್ ಬೀಟ್ ನಡೆದಿದೆ ಎಂದು ಅಕ್ಕಪಕ್ಕದವರು ಮಾಹಿತಿ ನೀಡಿದ್ದಾರೆ ಎಂದರು.

ಅಂಗಡಿಯಲ್ಲಿ ಇನ್ನಿತರ ಬೆಲೆಬಾಳುವ ವಸ್ತುಗಳು ಇದ್ದರೂ ಅವುಗಳನ್ನೆಲ್ಲ ಬಿಟ್ಟು ಕೇವಲ ಹಣವನ್ನು ಮಾತ್ರ ಕಳ್ಳತನ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಈ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮ ವಹಿಸಬೇಕು. ಜೊತೆಗೆ ಪ್ರತೀ ಅಂಗಡಿ ಮಾಲೀಕರು ಕೂಡ ತಮ್ಮ ಅಂಗಡಿಗಳಲ್ಲಿ ಸಿ.ಸಿ ಕ್ಯಾಮರಾಗಳನ್ನು ಅಳವಡಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.

====

ಫೊಟೋ:

ಕಳ್ಳತನವಾಗಿರುವ ಕಟ್ಟಿನಕೆರೆ ಮಾರುಕಟ್ಟೆ ದಿನಸಿ ಅಂಗಡಿ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿಯಲ್ಲಿ ಸ್ನೇಹಿತನಿಂದಲೇ ಯುವ ಕಾಂಗ್ರೆಸ್‌ ನಾಯಕ ಹತ್ಯೆ?
ಫಿಸಿಯೋಥೆರಪಿಗೆ ವಿಶ್ವಾದ್ಯಂತ ವಿಫುಲ ಅವಕಾಶ : ಯುಟಿ ಖಾದರ್‌