ಚಿನ್ನದ ಸರ ಕದ್ದು ಕಳ್ಳರು ಪರಾರಿ

KannadaprabhaNewsNetwork |  
Published : Mar 29, 2026, 01:15 AM IST
ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮಾತನಾಡಿದರು. | Kannada Prabha

ಸಾರಾಂಶ

ಬೇಕರಿಯವರೊಂದಿಗೆ ಮಾತನಾಡುವಾಗ ಇಬ್ಬರು ಅಪರಿಚಿತರು ಜ್ಯೂಸ್ ತೆಗೆದುಕೊಂಡು ಕುಡಿಯುತ್ತಾ ಮಹಿಳೆಯ ಕೊರಳಿಗೆ ಕೈ ಹಾಕಿ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ದಾಬಸ್‍ಪೇಟೆ: ಗ್ರಾಹಕರ ಸೋಗಿನಲ್ಲಿ ಬಂದ ಇಬ್ಬರು ಅಪರಿಚಿತ ಕಳ್ಳರು ಬೇಕರಿ ಮುಂದೆ ನಿಂತಿದ್ದ ಮಹಿಳೆ ಕೊರಳಿನಲ್ಲಿದ್ದ 60 ಗ್ರಾಂ ಮೌಲ್ಯದ ಚಿನ್ನದ ಸರ ಕಿತ್ತು ಪರಾರಿಯಾಗಿದ್ದಾರೆ. ನೆಲಮಂಗಲ ತಾಲೂಕಿನ ಗುಡೇಮಾರನಹಳ್ಳಿ ಹ್ಯಾಂಡ್ ಪೋಸ್ಟ್ ಗ್ರಾಮದ ಅಂಬಿಕಾ ಶುಕ್ರವಾರ ಮಧ್ಯಾಹ್ನ 2 ಗಂಟೆಯಲ್ಲಿ ಅದೇ ಗ್ರಾಮದ ಬಸ್ ನಿಲ್ದಾಣದ ಬೇಕರಿ ಬಳಿ ನಿಂತು ಬೇಕರಿಯವರೊಂದಿಗೆ ಮಾತನಾಡುವಾಗ ಇಬ್ಬರು ಅಪರಿಚಿತರು ಜ್ಯೂಸ್ ತೆಗೆದುಕೊಂಡು ಕುಡಿಯುತ್ತಾ ಮಹಿಳೆಯ ಕೊರಳಿಗೆ ಕೈ ಹಾಕಿ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಮಹಿಳೆ ಕಿರುಚಿದ್ದು ಸ್ಥಳೀಯರು ಕಳ್ಳರ ಬೆನ್ನತ್ತಿದ್ದರೂ ಕೈಗೆ ಸಿಗದೇ ಬೈಕಿನಲ್ಲಿ ಪರಾರಿಯಾಗಿದ್ದಾರೆ. ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಿಯದರ್ಶಿನಿ ಶಾಲೆ ಬಳಿ ರಸ್ತೆ ಹಂಪ್ ವಿಸ್ತರಣೆ
ವಸಂತ ನವರಾತ್ರಿ ಉತ್ಸವ ಸಂಪನ್ನ