ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ಜಿಲ್ಲಾ ಪತ್ರಕರ್ತರ ಸಂಘವು ಮಂಗಳವಾರ ಆಯೋಜಿಸಿದ್ದ ಪತ್ರಿಕಾ ಸಂವಾದ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರಿಗೆ ಪೂರಕವಾಗುವ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿದ್ದೇನೆ. ಕೃಷಿಕರ ಆದಾಯ ವೃದ್ಧಿಸಲು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ ಎಂದರು.
ಸಣ್ಣ ರೈತರಿಗೆ ನೆರವಾಗಲು ನೇಗಿಲಯೋಗಿ ಯೋಜನೆ ಜಾರಿಗೊಳಿಸಿದ್ದೇವೆ. ಉಳುಮೆಗೆ ಅಗತ್ಯವಾದ ಟ್ರಾಕ್ಟರ್ ವ್ಯವಸ್ಥೆ ಮಾಡಲು ಕ್ರಮ ವಹಿಸಿದ್ದು, ಆರಂಭದಲ್ಲಿ ಎರಡು ಜಿಲ್ಲೆಯಲ್ಲಿ ಅನುಷ್ಠಾನ. ಆ ಬಳಿಕ ಇಡೀ ರಾಜ್ಯದಲ್ಲಿ ಅನುಷ್ಠಾನಕ್ಕೆ ತರುತ್ತೇವೆ. ರೈತರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸುತ್ತೇವೆ. ರೈತರಿಗೋಸ್ಕರ ಪ್ರವಾಸಗಳನ್ನು ಏರ್ಪಡಿಸುತ್ತೇವೆ ಎಂದರು.ರಾಜಕೀಯ ನಾಯಕನಾಗುವ ಆಲೋಚನೆ ಕೂಡ ಇರಲಿಲ್ಲ. ನಾನು ಓರ್ವ ಅಧಿಕಾರಿ ಆಗಿದ್ದರೆ ನೆಮ್ಮದಿಯ ಜೀವನ ನಡೆಸುತ್ತಿದ್ದೆ. ನಾನು ಕಾಲೇಜು ದಿನಗಳಲ್ಲಿ ವಿದ್ಯಾರ್ಥಿ ಸಂಘಟನೆಯಲ್ಲಿ ಗುರ್ತಿಸಿಕೊಂಡಿದ್ದೆ. ರಾಜೀವ್ ಗಾಂಧಿಯವರ ಆಕರ್ಷಣೆಗೆ ಒಳಗಾಗಿ ರಾಜಕೀಯಕ್ಕೆ ಬಂದೆ. ಎನ್ಎಸ್ ಯುಐ ನಲ್ಲಿ ನಡೆದ ಒಂದು ಘಟನೆ ನನ್ನನ್ನು ರಾಜಕೀಯಕ್ಕೆ ಬರುವಂತೆ ಮಾಡಿತು ಎಂದರು.
ಪತ್ರಕರ್ತರಿಗೆ ಅಭಿನಂದನೆ:
ಇದಕ್ಕೂ ಮುನ್ನ ಅಪೋಲೋ ಅಸ್ಪ್ರತೆ ವತಿಯಿಂದ ಬಿಎಲ್ಎಸ್ ತರಬೇತಿ ಆಯೋಜಿಸಲಾಗಿತ್ತು. ವೈದ್ಯ ಡಾ. ಶಿವಕುಮಾರ್ ಅವರು, ಕಾರ್ಡಿಯಾಕ್ ಅರೆಸ್ಟ್, ಹಾರ್ಟ್ ಅಟ್ಯಾಕ್ ಮತ್ತು ಸ್ಟ್ರೋಕ್ ಕುರಿತು ಮಾಹಿತಿ ನೀಡಿದರು. ಹೆಲ್ತ್ ಎಮರ್ಜೆನ್ಸಿ ಸಮಯದಲ್ಲಿ ಬಹುಮುಖ್ಯವಾದ ಬಿಎಲ್ಎಸ್ ಮತ್ತು ಸಿಪಿಆರ್ ಮಾಡುವುದರ ಕುರಿತು ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಿದರು. ನಂತರ ಅಪೋಲೋ ಬಿಜಿಎಸ್ ಆಸ್ಪತ್ರೆಯ ಆರೋಗ್ಯ ಕಾರ್ಡ್ ಅನ್ನು ಬಿಡುಗಡೆಗೊಳಿಸಲಾಯಿತು.