ಚನ್ನಪಟ್ಟಣ: ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಮುತ್ತತ್ತಿ ಬಳಿ ಆನೆ ಕ್ಯಾಂಪ್ ನಿರ್ಮಿಸುವ ವಿಚಾರ ಅರಣ್ಯ ಸಚಿವರೊಡನೆ ಸಮಾಲೋಚಿಸುವುದಾಗಿ ಶಾಸಕ ಸಿ.ಪಿ.ಯೋಗೇಶ್ವರ್ ಭರವಸೆ ನೀಡಿದರು.
ನಗರದಲ್ಲಿ ಕಾಡಾನೆ ಹಾವಳಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ರೈತ ಮುಖಂಡರೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಕಾಡಾನೆ ಹಾವಳಿ ಚನ್ನಪಟ್ಟಣ ತಾಲೂಕಿಗೆ ಮಾತ್ರವಲ್ಲದೆ, ಜಿಲ್ಲೆಯ ಸಮಸ್ಯೆಯಾಗಿದೆ. ಕಾಡಾನೆಗಳನ್ನು ಸೆರೆಹಿಡಿದು ಸ್ಥಳಾಂತರಿಸಿದರೂ ಅವು ಮತ್ತೆ ಸ್ವಸ್ಥಾನಕ್ಕೆ ಮರಳಿ ಪುಂಡಾಟ ಆರಂಭಿಸುತ್ತವೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮುತ್ತತ್ತಿ ಬಳಿ ಆನೆ ಶಿಬಿರ ನಿರ್ಮಿಸುವುದೇ ಪರಿಹಾರ. ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿಗೂ ನೆರವಾಗಲಿದ್ದು ಅರಣ್ಯ ಸಚಿವರ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.ಆನೆ ಮಾತ್ರವಲ್ಲದೇ ಚಿರತೆ, ಹಂದಿ, ನವಿಲು, ಕರಡಿ ಸೇರಿದಂತೆ ಕಾಡುಪ್ರಾಣಿಗಳು ಹಾವಳಿ ತೀವ್ರವಾಗಿದೆ. ಆನೆ ಮತ್ತು ಚಿರತೆ ದಾಳಿಯದ್ದೇ ಹೆಚ್ಚದ್ದು, ಸಮಸ್ಯೆಗಳ ಪಟ್ಟಿ ಮಾಡಿ ಅರಣ್ಯ ಸಚಿವರಿಗೆ ನೀಡಿ ಚರ್ಚಿಸುತ್ತೇನೆ. ತಾಲೂಕಿನಲ್ಲಿ ಕಾಡಾನೆಗಳ ಉಪಟಳಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ೧೫ ದಿನಕ್ಕೊಮ್ಮೆ ಸಭೆ ನಡೆಸಲು ತೀರ್ಮಾನಿಸಿದ್ದು, ಈಗಾಗಲೇ 3 ಸಭೆಗಳನ್ನು ಎಂದರು.
ಹೆಚ್ಚು ಅನುದಾನ:ಆನೆಗಳ ತಡೆಗೆ ಕಾಡಂಚಿನ ಬಹಳಷ್ಟು ಕಡೆ ತಡೆಗೊಡೆ, ಬೇಲಿ, ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳಬೇಕಿದೆ. ಅದಕ್ಕೆ ಸಂಪನ್ಮೂಲದ ಅಗತ್ಯವಿದೆ. ಈ ನಿಟ್ಟಿನಲ್ಲಿ ಅರಣ್ಯ ಸಚಿವರನ್ನು ತಾಲೂಕಿನತ್ತ ಗಮನಸೆಳೆದು ಮುಂದಿನ ಬಜೆಟ್‌ನಲ್ಲಿ ಹೆಚ್ಚು ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಸಭೆಯಲ್ಲಿ ಡಿಸಿಎಫ್ ರಾಮಕೃಷ್ಣಪ್ಪ, ಎಸಿಎಫ್ ಪುಟ್ಟಮ್ಮ, ಆರ್‌ಎಫ್‌ಒ ಮಲ್ಲೇಶ್ ರೈತ ಮುಖಂಡ ಸಿ.ಪುಟ್ಟಸ್ವಾಮಿ, ಕಾಂತರಾಜು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.ಬಾಕ್ಸ್...............
೧೯ಕ್ಕೆ ಮತದಾರರಿಗೆ ಅಭಿನಂದನೆಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕ್ಷೇತ್ರದ ಮತದಾರರಿಗೆ ಅಭಿನಂದಿನೆ ಸಲ್ಲಿಸುವ ನಿಟ್ಟಿನಲ್ಲಿ ಜ.೧೯ರಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದಾರೆ. ಆ ವೇಳೆ ಆನೆ ಹಾವಳಿಯಿಂದ ಜಿಲ್ಲೆಯ ಜನ ಅನುಭವಿಸುತ್ತಿರುವ ಸಮಸ್ಯೆ ಕುರಿತು ಮುಖ್ಯಮಂತ್ರಿಗಳ ಗಮನ ಸೆಳೆದು ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಯೋಗೇಶ್ವರ್ ತಿಳಿಸಿದರು.
ಲೀಡ್ ಬಾಕ್ಸ್.............ಕಾಡಾನೆ ಹಾವಳಿಗೆ ಕಡಿವಾಣ ಹಾಕಲು ಕ್ರಮ
ಚನ್ನಪಟ್ಟಣ: ತಾಲೂಕಿನ ಜನರಿಗೆ ಉಪಟಳ ನೀಡುತ್ತಿದ್ದ ಎರಡು ಪುಂಡಾನೆಗಳನ್ನು ಸೆರೆಹಿಡಿದು ಸ್ಥಳಾಂತರಿಸಿದ ಮೇಲೆ ಆನೆ ಕಾಟ ಉಲ್ಭಣಗೊಂಡಿದೆ. ಪುಂಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಿ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಅರಣ್ಯಾಧಿಕಾರಿಗಳಿಗೆ ತಾಕೀತು ಮಾಡಿದರು.ಎರಡು ಆನೆಗಳನ್ನು ಸೆರೆಹಿಡಿದ ಮೇಲೆ ಆನೆಗಳ ಕಾಟ ಮತ್ತಷ್ಟು ಹೆಚ್ಚಿದೆ ಎಂದು ಜನ ಬೈಯುತ್ತಿದ್ದಾರೆ. ಕಾಡಾನೆ ಕಾಟದಿಂದ ಜಿಲ್ಲೆಯನ್ನು ಮುಕ್ತಗೊಳಿಸಲು ಏನು ಕ್ರಮ ಕೈಗೊಳ್ಳುತ್ತೀರೋ ತಿಳಿಸಿ ಎಂದು ಕಿಡಿಕಾರಿದರು.
ಆನೆಗಳು ಬೆಳೆಗಳನ್ನು ನಾಶ ಮಾಡುತ್ತಿದ್ದು ರೈತರು ಹೈರಾಣಾಗಿದ್ದಾರೆ. ತಾಲೂಕಿಗೆ ಕಾಡಿನಿಂದ ಎಷ್ಟು ಆನೆಗಳು ಬಂದಿವೆ. ಎಷ್ಟು ಆನೆಗಳನ್ನು ಕಾಡಿಗೆ ಹಿಮ್ಮಟ್ಟಿಸಿದ್ದೀರಾ ಎಂಬ ಲೆಕ್ಕಕೊಡಿ. ಕಾಡಾನೆ ಹಾವಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನಿಮಗೆ ಸರ್ಕಾರದಿಂದ ಯಾವ ಸಹಕಾರದ ಅಗತ್ಯವಿದೆಯೋ ಅದನ್ನು ಪಟ್ಟಿ ಮಾಡಿಕೊಡಿ, ಅದಕ್ಕೆ ನಾನು ಪ್ರಯತ್ನಿಸುತ್ತೇನೆ ಎಂದರು.ಆನೆಗಳನ್ನು ಹಿಮ್ಮೆಟ್ಟುವ ಕಾರ್ಯ ಪ್ರಗತಿಯಲ್ಲಿ: ತಾಲೂಕು ವ್ಯಾಪ್ತಿಯಲ್ಲಿ ಎಂಟು ಆನೆಗಳು ಕಾಟ ಕೊಡುತ್ತಿದ್ದು, ಅವುಗಳನ್ನು ಕಾವೇರಿ ವನ್ಯಜೀವಿ ವಿಭಾಗಕ್ಕೆ ಅಟ್ಟಲಾಗಿದೆ. ಇನ್ನು ಆರು ಆನೆಗಳನ್ನು ಹಿಮ್ಮೆಟ್ಟಿಸುವ ಕಾರ್ಯ ಪ್ರಗತಿಯಲ್ಲಿದೆ. ಒಂದು ಕಡೆಯಿಂದ ಆನೆಗಳನ್ನು ಓಡಿಸಿದರೆ ಇನ್ನೊಂದು ಕಡೆಯಿಂದ ಹಿಂದಿರುಗುತ್ತಿವೆ. ೧೫ ದಿನದಲ್ಲಿ ಆನೆಗಳನ್ನು ಕಾವೇರಿ ವನ್ಯಜೀವಿ ವಿಭಾಗಕ್ಕೆ ಅಟ್ಟಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.
ಡ್ರೋನ್ ಅಗತ್ಯ:ಆನೆಗಳ ಮೇಲೆ ನಿಗಾ ಇಟ್ಟು ಅವುಗಳು ನಾಡಿಗೆ ಬಾರದಂತೆ ತಡೆಯುವ ನಿಟ್ಟಿನಲ್ಲಿ ೪ ಡ್ರೋನ್‌ಗಳು, ೪ ವಾಹನಗಳು ಹಾಗೂ ಡ್ರೋನ್ ನಿರ್ವಹಣೆಗೆ ಒಂದು ವಾಹನದ ಅಗತ್ಯತೆ ಇದೆ. ಜತೆಗೆ ಎಲಿಫೆಂಟ್ ಟಾಸ್ಕ್ ಫೋರ್ಸ್ ರಚಿಸಿ ಅದನ್ನು ಬಲಿಷ್ಠಗೊಳಿಸಬೇಕಿದೆ ಎಂದು ತಿಳಿಸಿದರು.
ಬಾಕ್ಸ್...............ಶಾಶ್ವತ ಪರಿಹಾರ ಕಲ್ಪಿಸಿ: ರೈತರ ಆಗ್ರಹ
ಪುಂಡಾನೆಗಳ ಹಾವಳಿಯಿಂದ ಸಾಕಷ್ಟು ಸಮಸ್ಯೆಯಾಗಿದೆ ಕೈಗೆ ಬಂದ ಫಸಲನ್ನು ಆನೆಗಳು ನಾಶ ಮಾಡುತ್ತಿದ್ದು, ರೈತರಿಗೆ ಲಕ್ಷಾಂತರ ನಷ್ಟವಾಗುತ್ತಿದೆ. ಆನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಿ ಇಲ್ಲವೇ ನಮ್ಮ ಜಮೀನುಗಳಲ್ಲಿ ಅರಣ್ಯ ಇಲಾಖೆಯೇ ಉಳಿಮೆ ನಡೆಸಿ ಪರಿಹಾರ ನೀಡಿ. ಆನೆ ದಾಳಿಯಿಂದ ಆದ ನಷ್ಟಕ್ಕೆ ಸೂಕ್ತ ಪರಿಹಾರ ದೊರಕುತ್ತಿಲ್ಲ. ಆನೆಗಳು ಬಂದಾಗ ಓಡಿಸಲು ಅರಣ್ಯ ಇಲಾಖೆ ರೈತರಿಗೆ ಪಟಾಕಿ ಒದಗಿಸುತ್ತಿಲ್ಲ. ಸಮಸ್ಯೆ ಹೇಳಿಕೊಳ್ಳೋಣವೆಂದರೆ ಅರಣ್ಯ ಇಲಾಖೆ ಅಧಿಕಾರಿಗಳು ಕರೆಯನ್ನೇ ಸ್ವೀಕರಿಸುವುದಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.ಪೊಟೋ೪ಸಿಪಿಟಿ೧,:
ಚನ್ನಟಪ್ಟಣದಲ್ಲಿ ಶಾಸಕ ಯೋಗೇಶ್ವರ್ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ರೈತ ಮುಖಂಡರೊಡನೆ ಸಭೆ ನಡೆಸಿದರು.