ಬಿಜಿಎಂಎಲ್‌ ಆಸ್ಪತ್ರೆ ಸತ್ಯಸಾಯಿ ಸಂಸ್ಥೆಗೆ ನೀಡಲು ಚಿಂತನೆ

KannadaprabhaNewsNetwork |  
Published : Sep 14, 2024, 01:46 AM IST
೧೩ಕೆಜಿಎಫ್೧ಕೆಜಿಎಫ್ ಹೊರವಲಯದ ಬಿಜಿಎಂಎಲ್ ಆಸ್ಪತ್ರೆಗೆ ಸಂಸದ ಮಲ್ಲೇಶ್‌ಬಾಬು ಸತ್ಯ ಸಾಯಿ ಸಂಸ್ಥೆಯ ವೈದ್ಯರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.  | Kannada Prabha

ಸಾರಾಂಶ

೧೩೬ ವರ್ಷದ ಹಿಂದೆ ಚಿನ್ನದ ಗಣಿಗಳ ಕಾರ್ಮಿಕರ ಸೇವೆಗೆ ಬ್ರಿಟಿಷರು ಸ್ಥಾಪಿಸಿದ್ದರು. ೨೦೦೧ರಲ್ಲಿ ಬಿಜಿಎಂಎಲ್ ಕಾರ್ಖಾನೆ ಮುಚ್ಚಿದ ನಂತರ ಆಸ್ಪತ್ರೆ ಸೇವೆ ಸ್ಥಗಿತಗೊಳಿಸಿದ ಪರಿಣಾಮವಾಗಿ ಬಿಜಿಎಂಎಲ್ ಆಸ್ಪತ್ರೆ ಪಾಳು ಬಿದ್ದಿದೆ.

ಕನ್ನಡಪ್ರಭ ವಾರ್ತೆ ಕೆಜಿಎಫ್ಶತಮಾನದ ಚಿನ್ನದ ಗಣಿಗಳ ಆಸ್ಪತ್ರೆಯನ್ನು ಚಿಕ್ಕಬಳ್ಳಾಪುರ ಸತ್ಯಸಾಸಾಯಿ ಸಂಸ್ಥೆಗೆ ನೀಡಿ, ಕೆಜಿಎಫ್ ಮತ್ತು ಬಂಗಾರಪೇಟೆ ತಾಲೂಕಿನ ಸಾರ್ವಜನಿಕರು, ಚಿನ್ನದ ಗಣಿ ಕಾರ್ಮಿಕರ ಕುಟುಂಬಗಳಿಗೆ ಉಚಿತ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಸತ್ಯಾಸಾಯಿ ಆಸ್ಪತ್ರೆಯ ವೈದ್ಯರ ತಂಡ ಹಾಗೂ ಸಂಸದ ಮಲ್ಲೇಶ್‌ಬಾಬು ಆಸ್ಪತ್ರೆಯ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಿದರು.ಈ ಆಸ್ಪತ್ರೆ ೧೩೬ ವರ್ಷದ ಹಿಂದೆ ಚಿನ್ನದ ಗಣಿಗಳ ಕಾರ್ಮಿಕರ ಸೇವೆಗೆ ಬ್ರಿಟಿಷರು ಸ್ಥಾಪಿಸಿದ್ದರು. ೨೦೦೧ರಲ್ಲಿ ನಷ್ಟದ ಕಾರಣದಿಂದ ಬಿಜಿಎಂಎಲ್ ಕಾರ್ಖಾನೆ ಮುಚ್ಚಿದ ನಂತರ ಬಿಜಿಎಂಎಲ್ ಆಸ್ಪತ್ರೆ ಸಹ ತಮ್ಮ ಸೇವೆ ಸ್ಥಗಿತಗೊಳಿಸಿದ ಪರಿಣಾಮವಾಗಿ ಬಿಜಿಎಂಎಲ್ ಆಸ್ಪತ್ರೆ ಪಾಳು ಬಿದ್ದಿತ್ತು. ಆದರೆ ಕೋವಿಡ್ ಸಂದರ್ಭದಲ್ಲಿ ಇದೇ ಕಟ್ಟಡವನ್ನು 450 ಹಾಸಿಗೆಗಳ ಕೋವಿಡ್ ಸೆಂಟರ್ ಆಗಿ ಪರಿವರ್ತಿಸಲಾಗಿತ್ತು.

ಸತ್ಯಸಾಯಿ ಸಂಸ್ಥೆಯಿಂದ ಆರೋಗ್ಯಸೇವೆ

ಸಂಸದ ಮಲ್ಲೇಶ್ ಬಾಬು ಮಾತನಾಡಿ, ಈ ಆಸ್ಪತ್ರೆಯನ್ನು ಸತ್ಯಸಾಯಿ ಸಂಸ್ಥೆಗೆ ಹಸ್ತಾಂತರಿಸಿದ ಬಳಿಕ ಕೆಜಿಎಫ್ ಮತ್ತು ಬಂಗಾರಪೇಟೆ ಎರಡು ತಾಲೂಕಿನ ಜನರಿಗೆ ಸತ್ಯಸಾಯಿ ಸಂಸ್ಥೆ ಉಚಿತ ಸೇವೆ ನೀಡಲಿದೆ. ಆಸ್ಪತ್ರೆಯನ್ನು ಸತ್ಯಸಾಯಿ ವೈದ್ಯರು ತಂಡ ಪರಿಶೀಲನೆ ನಡೆಸಿದೆ. ಮುಂದಿನ ದಿನಗಳಲ್ಲಿ ಕಾರ್ಮಿಕರ ಮುಖಂಡರ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದೆಂದು ತಿಳಿಸಿದರು. ಚಿನ್ನದಗಣಿಗಳ ಸಮಸ್ಯೆಗಳನ್ನು ಬಗೆಹರಿಸಬೇಕಾದರೆ ಚಿನ್ನದ ಗಣಿಗಳ ೧೮ ಕಾರ್ಮಿಕ ಸಂಘಟನೆಗಳು ನ್ಯಾಯಾಲಯದಲ್ಲಿ ಹೂಡಿರುವ ವ್ಯಾಜ್ಯಗಳನ್ನು ಪಾಪಸ್‌ ಪಡೆದರೆ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಲು ಅನುಕೂಲವಾಗಲಿದೆ ಎಂದು ಅವರು ಹೇಳಿದರು.

ಪ್ರತಿಷ್ಠೆ ಬಿಟ್ಟು ಸಮಸ್ಯೆ ಪರಿಹರಿಸಿಕೊಳ್ಳಿಬಿಜಿಎಂಎಲ್‌ನ ೧೮ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ತಮ್ಮ ಪ್ರತಿಷ್ಠೆ ಬದಿಗಿಟ್ಟು ಕಾರ್ಮಿಕರ ಅವಲಬಿತ ಕುಟುಂಬಗಳ ಹಿತಕ್ಕಾಗಿ ಒಂದಾಗಿ ಬಿಜಿಎಂಎಲ್ ಸಮಸ್ಯೆಗೆ ಶಾಶ್ವತವಾದ ಪರಿಹಾರಕ್ಕಾಗಿ ಮುಂದೆ ಬಾರದೇ ಇದ್ದರೆ ಇನ್ನು ೨೫ ವರ್ಷ ಕಳೆದರು ಬಿಜಿಎಂಎಲ್ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಸಂಸದ ಮಲ್ಲೇಶಬಾಬು ಹೇಳಿದರು. ಈ ಸಂಘಟನೆಗಳ ಪ್ರತಿನಿಧಿಗಳಿಗೆ ನಿಜವಾಗಿಯೂ ಕಾರ್ಮಿಕರ ಬಗೆಗೆ ಕಾಳಜಿ ಇದ್ದರೆ ಎಲ್ಲಾ ೧೮ ಕಾರ್ಮಿಕ ಸಂಘಟನೆ ಪದಾಧಿಕಾರಿಗಳು ಒಂದಾಗಿ ತಮ್ಮ ಪ್ರತಿನಿಧಿ ಸೂಚಿಸಿದರೆ ಅವರೊಂದಿಗೆ ಕೇಂದ್ರದ ಗಣಿ ಸಚಿವ ಕಿಶನ್‌ ರೆಡ್ಡಿರೊಂದಿಗೆ ಮಾತುಕತೆ ನಡೆಸಲಾಗುವುದು ಎಂದರು. ವಾಸಸ್ಥಳ ದೃಢೀಕರಣ ಪತ್ರ

ಹಿಂದೆ ನಡೆದ ಕಹಿ ಘಟನೆಗಳನ್ನು ಮೆಲುಕು ಹಾಕುವುದು ಬೇಡ, ಮುಂದೆ ಆಗಬೇಕಾದ ಕೆಲಸಗಳ ಬಗ್ಗೆ ಚಿಂತನೆ ನಡೆಸಬೇಕು. ಎಲ್ಲ ಕಾರ್ಮಿಕರಿಗೆ ವಾಸಸ್ಥಳ ದೃಢೀಕರಣ ಪ್ರಮಾಣಪತ್ರ ನೀಡಲಾಗುವುದು ಮತ್ತು ವಾಸ ದೃಢೀಕರಣ ಪಡೆದವರಿಗೆ ನಗರಸಭೆಯಲ್ಲಿ ಖಾತೆ ಮಾಡಲು ಆಗಿರುವ ಅಡ್ಡಿ ಬಗ್ಗೆ ನಗರಸಭೆ ಪೌರಾಯುಕ್ತರ ಬಳಿ ಚರ್ಚೆ ನಡೆಸಿ ಪರಿಹಾರ ಕಂಡುಹಿಡಿಯಲಾಗುವುದು ಎಂದು ಹೇಳಿದರು.ಗಣಿಗಾರಿಕೆ ನಡೆಸಿ ಹೊರ ಹಾಕಲಾದ ಸೈನೈಡ್ ದಿಬ್ಬಗಳಲ್ಲಿ ಚಿನ್ನದ ಅಂಶವಿದೆ ಎಂದು ಹೇಳಲಾಗುತ್ತಿದೆ. ಅದರ ಬಗ್ಗೆ ಮಾಹಿತಿ ಪಡೆದು ಚಿನ್ನದ ಅದಿರು ಇದ್ದರೆ ಸಂಸ್ಕರಣ ಮಾಡುವುದರ ಬಗ್ಗೆ ಮತ್ತು ಸೈನೈಡ್ ದಿಬ್ಬಗಳ ಬಹಿರಂಗ ಹರಾಜು ನಡೆಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದರು. ಆಸ್ಪತ್ರೆ ಪರಿಶೀಲಿಸಿದ ತಂಡ

ಇದೀಗ ಮರಳಿ ಆಸ್ಪತ್ರೆಯ ಗತವೈಭವ ಮರುಕಳಿಸಬೇಕು ಎಂಬ ಬೇಡಿಕೆ ಕಾರ್ಮಿಕ ಸಂಘಟನೆಗಳಿಂದ ಕೇಳಿ ಬಂದ ಹಿನ್ನಲೆಯಲ್ಲಿ ಸತ್ಯ ಸಾಯಿ ಸಂಸ್ಥೆಯ ಸ್ವಾಮಿಜೀರನ್ನು ಭೇಟಿಯಾಗಿ ಬೇಡಿಕೆ ಇಟ್ಟಿದ್ದರಿಂದ ಸತ್ಯ ಸಾಯಿ ಸಂಸ್ಥೆಯ ವೈದ್ಯರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಚರ್ಚಿಸಿ ಆಸ್ಪತ್ರೆ ಪ್ರಾರಂಭಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಕೆ.ರಾಜೇಂದ್ರನ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಸುರೇಶ್‌ಕುಮಾರ್, ಗ್ರಾಮಾಂತರ ಅಧ್ಯಕ್ಷ ಲಕ್ಷ್ಮಿನಾರಾಯಣ, ನಗರಸಭೆ ಸದಸ್ಯ ಪಾಂಡ್ಯನ್, ಕೋಲಾರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕಮಲ್‌ನಾಥನ್, ವಿಜಿಕುಮಾರ್, ರವಿಕುಮಾರ್ ಇದ್ದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ