ಯಮನೂರಪ್ಪಗೆ ತೃತೀಯ ಬಹುಮಾನ

KannadaprabhaNewsNetwork |  
Published : Oct 14, 2026, 02:15 AM IST
ಫೋಟೋವಿವರ-(13ಎಚ್‌ಪಿಟಿ3)  ಹೊಸಪೇಟೆ ನಗರದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ವೆಂಕಟೇಶ್ ರಾಮಚಂದ್ರಪ್ಪಅವರು ವಿಭಾಗೀಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಸನ್ಮಾನಿಸಿದರು | Kannada Prabha

ಸಾರಾಂಶ

ಸಾಧನೆಗೈದ ಮೂವರೂ ವಿದ್ಯಾರ್ಥಿಗಳನ್ನು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವೆಂಕಟೇಶ್ ರಾಮಚಂದ್ರಪ್ಪ ಹಾಗೂ ಬಳ್ಳಾರಿಯ ಜಿಲ್ಲಾ ಅಂತರ್ಜಲ ಅಭಿವೃದ್ಧಿ ಇಲಾಖೆಯ ಹಿರಿಯ ಭೂ ವಿಜ್ಞಾನಿ ಬಸಂತ್ ಅಭಿನಂದಿಸಿ ಸನ್ಮಾನಿಸಿದರು.

ಹೊಸಪೇಟೆ: ರಾಯಚೂರು ನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಕಲ್ಯಾಣ ಕರ್ನಾಟಕ ವಿಭಾಗೀಯ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನೀರಿದ್ದರೆ ನಾಳೆ ಎಂಬ ಘೋಷವಾಕ್ಯದಡಿಯಲ್ಲಿ ನಮ್ಮ ಭೂಮಿ ನಮ್ಮ ನೀರು ನಮ್ಮ ಶಕ್ತಿ ಎಂಬ ವಿಷಯದ ಕುರಿತು ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಹೊಸಪೇಟೆಯ ಸರ್ಕಾರಿ ಪ್ರೌಢಶಾಲೆ ಅನಂತಶಯನಗುಡಿಯ ವಿದ್ಯಾರ್ಥಿ ಯಮನೂರಪ್ಪ ತೃತೀಯ ಬಹುಮಾನದೊಂದಿಗೆ ₹10,000 ನಗದು ಬಹುಮಾನ ಪಡೆದುಕೊಂಡಿದ್ದಾರೆ. ಅಲ್ಲದೆ, ಹೊಸಪೇಟೆಯ ಕೆಸಿಎ ಶಾಲೆಯ ವಿದ್ಯಾರ್ಥಿ ಗೌತಮ್ ಕೆ.ಚಿತ್ರಗಾರ ಹಾಗೂ ಸರ್ಕಾರಿ ಪ್ರೌಢಶಾಲೆ ನೆಹರು ಕಾಲನಿಯ ವಿದ್ಯಾರ್ಥಿನಿ ಸಭಾ ಅಲಿಯಾ ಇಬ್ಬರಿಗೂ ಸಮಾಧಾನಕರ ಬಹುಮಾನವಾಗಿ ತಲಾ ₹5,000 ನಗದು ಪ್ರಶಸ್ತಿ ಲಭಿಸಿದೆ. ಸಾಧನೆಗೈದ ಮೂವರೂ ವಿದ್ಯಾರ್ಥಿಗಳನ್ನು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವೆಂಕಟೇಶ್ ರಾಮಚಂದ್ರಪ್ಪ ಹಾಗೂ ಬಳ್ಳಾರಿಯ ಜಿಲ್ಲಾ ಅಂತರ್ಜಲ ಅಭಿವೃದ್ಧಿ ಇಲಾಖೆಯ ಹಿರಿಯ ಭೂ ವಿಜ್ಞಾನಿ ಬಸಂತ್ ಅಭಿನಂದಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಸಂಬಂಧಿಸಿದ ಶಾಲೆಗಳ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀ ಕ್ಷೇತ್ರ ದೊಡ್ಡಣಗುಡ್ಡೆ: ವೈಭವದ ಶರನ್ನವರಾತ್ರಿ
ಕಾಫಿ ಬೆಳೆಗಾರ, ಕೃಷಿ ಸುಧಾರಣೆಗೆ ಒತ್ತು: ಡಾ. ಮಂತರ್ ್ಗೌಡ