ಕನ್ನಡಪ್ರಭ ವಾರ್ತೆ ವಿಜಯಪುರ
ರಾಜ್ಯದಲ್ಲಿರುವುದು ಕಾಂಗ್ರೆಸ್ ಸರ್ಕಾರ ಅಲ್ಲ, ಇದು ಖಬರಸ್ತಾನ್ ಸರ್ಕಾರ. ರೈತರ ಜಮೀನುಗಳನ್ನು ವಕ್ಫ್ ಆಸ್ತಿಯೆಂದು ಘೋಷಿಸಿ ವಕ್ಫ್ ಸಚಿವ ಜಮೀರ್ ಅಹಮ್ಮದ ಖಾನ್ ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ರಾಜ್ಯದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಗುಡುಗಿದರು.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ಮಾಡುತ್ತಿಲ್ಲ. ಮಸೀದಿಗಳು ಆಡಳಿತ ಮಾಡುತ್ತಿವೆ. ನಮಗೆ ಜಮೀನುಗಳು ಬೇಕು ಎಂದು ಮಸೀದಿಗಳಿಂದ ಸರ್ಕಾರಕ್ಕೆ ಪತ್ರ ಹೋಗುತ್ತವೆ. ತಕ್ಷಣ ಅವರು ರೈತರ ಆಸ್ತಿಯನ್ನು ವಕ್ಫ್ ಮಾಡಿ ಕೊಡುತ್ತಾರೆ. ಯಾವ ಮಟ್ಟಕ್ಕೆ ಎಂದರೆ ಬೀರದೇವರ ಗುಡಿ, ವಿರಕ್ತಮಠ ಸಹ ವಕ್ಫ್‌ಗೆ ಸೇರಿದೆ ಎನ್ನುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಮೊದಲೇ ಎಚ್ಚರಿಸಿದ್ದ ಪ್ರಧಾನಿ:ವಕ್ಫ್ ಹೆಸರಿನಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಹಚ್ಚಿರುವ ಬೆಂಕಿಯನ್ನು ರೈತರು, ದಲಿತರು, ಹಿಂದುಳಿದವರು ಸೇರಿ ಆರಿಸಬೇಕು. ಕಾಂಗ್ರೆಸ್‌ನ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಕೊಡುಗೆಯೂ ಇದು. ಅವರು ಅಂದು ಮಾಡಿದ ತಪ್ಪು, ಇಂದು ದೇಶಕ್ಕೆ ಬೆಂಕಿ ಬೀಳುವಂತಾಗಿದೆ. ಈ ಹಿಂದಿನ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರು ಕಾಂಗ್ರೆಸ್‌ಗೆ ಓಟ್ ಹಾಕುವಾಗ ಹುಷಾರಾಗಿರಿ. ಅವರನ್ನು ಗೆಲ್ಲಿಸಿದರೆ ನಿಮ್ಮ ಜಮೀನು (ಆಸ್ತಿ) ಕಿತ್ತುಕೊಳ್ತಾರೆ. ನಿಮ್ಮ ಭೂಮಿ ಮಾಯವಾಗುತ್ತದೆ ಎಂದಿದ್ದರು. ಮೋದಿ ಅವರ ದೂರದೃಷ್ಟಿ ಈಗ ಕಾಂಗ್ರೆಸ್ ಬೆಂಬಲಿಸಿದವರಿಗೆ ಅರ್ಥ ಆಗಿದೆ. ಡಾ.ಅಂಬೇಡ್ಕರ್ ಅವರ ಸಂವಿಧಾನ ದೇಶದ ಎಲ್ಲರಿಗೂ ನ್ಯಾಯ ಕೊಡುತ್ತದೆ. ಆದರೆ ಕಾಂಗ್ರೆಸ್ ಮಾಡಿರುವ ಕೆಲವು ಸೃಷ್ಟಿಗಳು ಧರ್ಮಕ್ಕೆ ಒಂದೊಂದು ನ್ಯಾಯ ಕೊಡುತ್ತದೆ ಎಂದು ಟೀಕಿಸಿದರು.
ರಕ್ತ ಕುದಿಯುತ್ತದೆ:ವಿಜಯಪುರಕ್ಕೆ ಬಂದಾಗ ಸಚಿವ ಜಮೀರ್ ಮಾಡಿದ ಭಾಷಣ ನೋಡಿದರೆ ಎಂತಹವರಿಗೂ ರಕ್ತ ಕುದಿಯುತ್ತದೆ. ವಕ್ಫ್ ಆಸ್ತಿಗೆ ಕಾಂಪೌಂಡ್ ಹಾಕಿ, ಇಂತಹದ್ದೆ ಬಣ್ಣ ಬಳಿಯಿರಿ, ಅದನ್ನ ನೋಡಿ ಕೆಲ ಸೈತಾನಗಳ(ಹಿಂದೂ ನಾಯಕರ) ಹೊಟ್ಟೆ ಉರಿಯಬೇಕು ಎಂದು ಹಲ್ಲು ಕಚ್ಚಿಕೊಂಡು ಭಾಷಣ ಮಾಡುತ್ತಾರೆ. ಇದನ್ನು ನೋಡಿದರೆ ಹಿಂದೂಗಳ ಮೇಲೆ ಅವರು ಮಾಡುತ್ತಿರುವ ದೌರ್ಜನ್ಯ ಎಂತಹವರಿಗೂ ಅರ್ಥವಾಗುತ್ತದೆ ಎಂದರು.
ಸಿದ್ಧರಾಮಯ್ಯ ಸಂಡೇ ಲಾಯರ್:1974ರ ಗೆಜೆಟ್ ನಂತೆ ನೋಟಿಸ್ ಕೊಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಸಿಎಂ ಸಿದ್ದರಾಮಯ್ಯನವರು ವಾಪಸ್ ಪಡೆದಿದ್ದೇವೆ ಎನ್ನುತ್ತಾರೆ. ಸಿಎಂ ಅವರೇ ನೀವು ಸಂಡೆ ಲಾಯರ್ರಾ?, ಇಲಾಖೆಗಳಿಂದ ನೋಟಿಸ್ ಬಂದಿದ್ದು ಅದನ್ನು ವಾಪಸ್ ಪಡೆಯುತ್ತೇವೆ ಎನ್ನುತ್ತೀರಿ? ಆದರೆ ಗೆಜೆಟ್ ವಾಪಸ್ ಹೋಗುತ್ತಾ? ಅದು ಮುಂದುವರೆದಿರುತ್ತದೆ. ಗೆಜೆಟ್ ವಾಪಸ್ ಪಡೆಯಲು ಆಗುತ್ತಾ? ರೈತರನ್ನು ದಾರಿ ತಪಿಸುವ ಕೆಲಸ ಮಾಡುಬೇಡಿ ಎಂದು ಕುಟುಕಿದರು.
ರಾಜ್ಯದಲ್ಲಿನ ಉಪ ಚುನಾವಣೆ ಹಾಗೂ ಪಕ್ಕದ ಮಹಾರಾಷ್ಟ್ರದ ಚುನಾವಣೆಗೋಸ್ಕರ ನಾವು ಈ ವಿವಾದ ಮಾಡಿಲ್ಲ. ನಮಗೆ ದೇಶ ಮೊದಲು, ಚುನಾವಣೆ ಮೊದಲಲ್ಲ. ನಮ್ಮ ಚುನಾವಣೆಯನ್ನು ಕಾರ್ಯಕರ್ತರು, ಜನರು ಮಾಡುತ್ತಾರೆ. ನಮ್ಮ ಸರ್ಕಾರದ ಅವಧಿಯಲ್ಲಿ ಪೂರ್ಣಗೊಂಡಿದ್ದ ಒಳ ಮೀಸಲಾತಿ ಜಾರಿಗೆ ತರದೆ ಕಾಂಗ್ರೆಸ್ ನುಣುಚಿಕೊಂಡು ಜನರಿಗೆ ಅನ್ಯಾಯ ಮಾಡುತ್ತಿದೆ. ಇದಕ್ಕಾಗಿ ಯಾವುದೇ ಆಯೋಗದ ಅವಶ್ಯಕತೆ ಇಲ್ಲ. ತಕ್ಷಣ ಒಳಮೀಸಲಾತಿ ಜಾರಿಗೆ ತರಬೇಕು ಎಂದರು.ನನ್ನ ರಕ್ತದಲ್ಲೇ ಹೊಂದಾಣಿಕೆ ಇಲ್ಲ:
ಪಕ್ಷ ಹೊಂದಾಣಿಕೆ ಮಾಡಿಕೊಳ್ಳುವ ಹಾಗಿದ್ದರೆ ನಮಗೆ ಯಾಕೆ ಹೋರಾಟ ಬೇಕಿತ್ತು. ನಮ್ಮ ಪಕ್ಷದಲ್ಲಿ ಯಾವುದೇ ಹೊಂದಾಣಿಕೆ ಇಲ್ಲ. ನನ್ನ ರಕ್ತದಲ್ಲೇ ಹೊಂದಾಣಿಕೆ ಇಲ್ಲ. ನಮ್ಮಿಂದ ಯಾವುದೇ ಕಾರಣಕ್ಕೂ ಸಂವಿಧಾನ ಬದಲಾವಣೆಯಾಗುವುದಿಲ್ಲ. ಸಿಎಂ ಕುಂಕುಮ, ಕೇಸರಿ ಶಾಲು ಕಂಡರೆ ಬೇಡ ಎನ್ನುತ್ತಿದ್ದರು. ಆದರೆ ಇದೀಗ ತಾಯಿ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗಿ ಕುಂಕುಮ ಹಚ್ಚಿಕೊಳ್ಳುತ್ತಾರೆ. ಇವರಿಗೆ ಬಿಜೆಪಿ ಶಕ್ತಿ ಈಗ ಗೊತ್ತಾಯಿತಾ ಎಂದರು.ಅಲ್ಲದೆ, ಚಾಮುಂಡೇಶ್ವರಿ ದುಷ್ಟರನ್ನು ಸಂಹಾರ ಮಾಡು ಎಂದು ದೇವರ ಹೆಸರಿನಲ್ಲೇ ಜಾಹೀರಾತು ಕೊಟ್ಟರು. ದೇವರ ಹೆಸರಿನ ಮೇಲೆ ಇಂತಹ ಜಾಹೀರಾತು ಯಾರಾದರೂ ಕೊಟ್ಟಿದ್ದರಾ?. ದುಷ್ಟರ ಸಂಹಾರ ಮಾಡುವ ಕೆಲಸವನ್ನು ದುಷ್ಟ ಸಿದ್ಧರಾಮಯ್ಯ ಸಂಹಾರ ಮಾಡುವ ಮೂಲಕ ಆ ಕೆಲಸವನ್ನು ತಾಯಿ ಚಾಮುಂಡೇಶ್ವರಿ ಸಿದ್ಧರಾಮಯ್ಯನಿಂದಲೇ ಆರಂಭ ಮಾಡಲಿ ಎಂದು ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ್ ಕೂಚಬಾಳ, ಮುಖಂಡರಾದ ಗುರುಲಿಂಗಪ್ಪ ಅಂಗಡಿ, ವಿಜುಗೌಡ ಪಾಟೀಲ್, ಚಂದ್ರಶೇಖರ ಕವಟಗಿ, ರಮೇಶ ಭೂಸನೂರ, ಗೋಪಾಲ ಘಟಕಾಂಬಳೆ, ಈರಣ್ಣ ರಾವೂರ, ಚಿದಾನಂದ ಚಲವಾದಿ, ವಿಜಯ ಜೋಶಿ ಉಪಸ್ಥಿತರಿದ್ದರು.-----------ಬಾಕ್ಸ್
ರಾಜ್ಯಾದ್ಯಂತ ವಕ್ಫ್ ರಾದ್ಧಾಂತವಿಜಯಪುರದಲ್ಲಿ ಆರಂಭವಾದ ವಕ್ಫ್ ರಾದ್ದಾಂತ ಇದೀಗ ಕೊಲ್ಹಾರ, ಬೀದರ, ಕಲಬುರಗಿ, ರಾಯಚೂರ, ಚಿತ್ರದುರ್ಗ. ದಾವಣಗೆರೆ ಸೇರಿದಂತೆ ರಾಜ್ಯದ ಎಲ್ಲಾಕಡೆ ಶುರು ಆಗಿದೆ. ಇವರಿಗೆ ಆಸ್ತಿ ಕೊಟ್ಟವರು ಯಾರು? ಇವರು ಆಸ್ತಿಯನ್ನು ಕದ್ದಿದ್ದಾರೆ. ಇಂತಹ ಪಾಪಿ ಸರ್ಕಾರ ಜನತೆಗೆ ಬೇಕಾಗಿಲ್ಲ, ಇದು ಬೇಗ ಹೋಗಬೇಕು. ಖಬರಸ್ತಾನ್, ಮಸೀದಿ ಕಾಪಾಡಲು ವಕ್ಫ್ ಇದೆ. ಆದರೆ, ಇವರು ರೈತರ ಜಾಗವನ್ನು ಕಬಳಿಸಿ ಇಡೀ ರಾಜ್ಯವನ್ನು ಖಬರಸ್ತಾನ್ ಮಾಡಲು ಹೊರಟಿದೆ. ಈ ಮೂಲಕ ಹಿಂದೂಗಳಿಗೆ ಚಡಿ ಏಟು ಕೊಡುತ್ತಿದ್ದಾರೆ. ನಮ್ಮ ದೇವರ ಕೈಗಳಲ್ಲಿ ಎಲ್ಲಾ ಇವೆ, ಹುಲಿ- ಸಿಂಹದ ಮೇಲೆ ಸವಾರಿ ಮಾಡುವ ದೇವರುಗಳು ಇವೆ. ಆದರೆ ನಮ್ಮ ದೇವರಗಳು ತಾಳ್ಮೆಯಿಂದ ಇದ್ದಾರೆ ಎಂದು ಹೇಳಿದರು.
ಕೋಟ್ವಕ್ಫ್ಗೆ ಭೂಮಿ ಕೊಟ್ಟಯವರು ಯಾರು. ನೆಹರು ಕೊಟ್ರಾ? ಇಂದಿರಾಗಾಂಧಿ ಕೊಟ್ರಾ? ಅದನ್ನಾದರೂ ಹೇಳಿ. ವಕ್ಫ್‌ನವರು ತಮ್ಮ ಆಸ್ತಿ ಅಂತ ಘೋಷಣೆ ಮಾಡಿದ ಮೇಲೆ ಯಾವ ನ್ಯಾಯಾಲಯವೂ ಪ್ರಶ್ನೆ ಮಾಡದಂತೆ ಕಾನೂನು ಮಾಡಿ ಇಟ್ಟಿದ್ದಾರೆ. ಇದನ್ನು ಮೊದಲು ಹೊರಗೆ ತಂದ ಯತ್ನಾಳ ಅವರನ್ನು ಬಿಟ್ಟು ನಾವು ಏನು ಮಾಡ್ತಿಲ್ಲ. ನಮ್ಮೆಲ್ಲರ ಬೆಂಬಲ ಶಾಸಕ ಯತ್ನಾಳ ಅವರಿಗೆ ಇದೆ.
ಚಲವಾದಿ ನಾರಾಯಣಸ್ವಾಮಿ, ವಿ.ಪರಿಷತ್ ವಿಪಕ್ಷ ನಾಯಕ