ಇಷ್ಟೊಂದು ಮನೆ ಏಕಕಾಲದಲ್ಲಿ ಹಂಚಿಕೆ ದೇಶದಲ್ಲೇ ಮೊದಲು

KannadaprabhaNewsNetwork |  
Published : Jan 22, 2026, 02:30 AM IST
ಕನ್ನಡಪ್ರಭ ಕಚೇರಿಯಲ್ಲಿ ಸಚಿವ ಜಮೀರ್‌ ಅಹ್ಮದ ಖಾನ್‌ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಕಾಂಗ್ರೆಸ್‌ ಸರ್ಕಾರ ಬಡವರ ಪರವಾಗಿದೆ ಎಂಬುದಕ್ಕೆ ಇಷ್ಟೊಂದು ಮನೆ ಹಂಚಿಕೆ ಮಾಡುತ್ತಿರುವುದೇ ಸಾಕ್ಷಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಶೇಷ ಕಾಳಜಿಯಿಂದಾಗಿ ಬಡವರ ಸೂರಿನ ಕನಸು ನನಸಾಗುತ್ತಿದೆ ಎಂದು ಜಮೀರ್‌ ಅಹಮದ್‌ ಹೇಳಿದರು.

ಹುಬ್ಬಳ್ಳಿ:

423,45 ಮನೆಗಳನ್ನು ಜ.24ರಂದು ವಸತಿ ರಹಿತರಿಗೆ ಹುಬ್ಬಳ್ಳಿಯಿಂದ ರಾಜ್ಯಾದ್ಯಂತ ವಿತರಿಸಲಾಗುತ್ತಿದೆ. ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಿಸಿ ಏಕಕಾಲಕ್ಕೆ ಇಷ್ಟೊಂದು ಮನೆ ಹಂಚಿಕೆ ಮಾಡುತ್ತಿರುವ ಭಾರತದಲ್ಲಿಯೇ ಇದೇ ಮೊದಲು. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ ಎಂದು ವಸತಿ, ವಕ್ಫ್‌ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್‌ ಅಹ್ಮದ ಖಾನ್‌ ಹೇಳಿದರು.

ಬುಧವಾರ ಕನ್ನಡಪ್ರಭ ಕಚೇರಿಗೆ ಆಗಮಿಸಿ ಮಾಧ್ಯಮ ಬಳಗಕ್ಕೆ ಆಮಂತ್ರಣ ಪತ್ರಿಕೆ ನೀಡುವ ಮೂಲಕ ಆಹ್ವಾನಿಸಿ ಅವರು ಮಾತನಾಡಿದರು.

ಕಾಂಗ್ರೆಸ್‌ ಸರ್ಕಾರ ಬಡವರ ಪರವಾಗಿದೆ ಎಂಬುದಕ್ಕೆ ಇಷ್ಟೊಂದು ಮನೆ ಹಂಚಿಕೆ ಮಾಡುತ್ತಿರುವುದೇ ಸಾಕ್ಷಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಶೇಷ ಕಾಳಜಿಯಿಂದಾಗಿ ಬಡವರ ಸೂರಿನ ಕನಸು ನನಸಾಗುತ್ತಿದೆ. ಜ.24ರಂದು ನಡೆಯುವ ಕಾರ್ಯಕ್ರಮ ಅತ್ಯಂತ ಐತಿಹಾಸಿಕ ಕಾರ್ಯಕ್ರಮವಾಗಲಿದೆ. ಮನೆಗಳನ್ನು ಅತ್ಯಂತ ಹೈಟೆಕ್‌ ಆಗಿ ನಿರ್ಮಿಸಲಾಗಿದೆ. ಶಾಪಿಂಗ್‌ ಮಾಲ್‌, ಆಸ್ಪತ್ರೆ, ಉದ್ಯಾನವನ ಹೀಗೆ ಅತ್ಯಂತ ಸುಸಜ್ಜಿತವಾಗಿವೆ. ಯಾವುದೇ ಖಾಸಗಿ ಸೊಸೈಟಿಗೂ ಕಮ್ಮಿಯಿಲ್ಲದಂತೆ ಬಡವರ ನಿರ್ಮಿಸಿರುವ ತೃಪ್ತಿ ತಮಗಿದೆ ಎಂದರು.

ಈ ಸಂದರ್ಭದಲ್ಲಿ ಸಚಿವರನ್ನು ಸನ್ಮಾನಿಸಲಾಯಿತು. ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ, ಕಾಂಗ್ರೆಸ್‌ ಜಿಲ್ಲಾ ವಕ್ತಾರ ಶಿವಾನಂದ ಮುತ್ತಣ್ಣವರ, ಕನ್ನಡಪ್ರಭದ ಹುಬ್ಬಳ್ಳಿ ಬ್ಯೂರೋ ಮುಖ್ಯಸ್ಥ ಮಲ್ಲಿಕಾರ್ಜುನ ಸಿದ್ದಣ್ಣವರ, ಸುದ್ದಿ ಸಂಪಾದಕ ಮಧುಕೇಶ್ವರ ಯಾಜಿ, ಪ್ರಸಾರಂಗ ವಿಭಾಗದ ಮುಖ್ಯಸ್ಥ ಶ್ರೀಪಾದ ಕುಲಕರ್ಣಿ ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

50% ಮುಗಿದ ವಾರಾಹಿ ಏತ ನೀರಾವರಿಗೆ ತಡೆ : ಕಿಚ್ಚು
ಬಿಜೆಪಿ- ದಳ ಶಾಸಕರಿಗೆ ಇಂದು ಚೌಹಾಣ್‌ ಜಿ ರಾಮ್‌ ಜಿ ಪಾಠ!