ಫಲಿತಾಂಶ ಉತ್ತಮಪಡಿಸಿ: ಹನುಮಂತರಾಯಪ್ಪ ಸೂಚನೆ

KannadaprabhaNewsNetwork |  
Published : Jul 17, 2025, 12:30 AM IST
ಮಧುಗಿರಿ ತಾಲೂಕು ರಂಟವಳಲು ಅರವಿಂದ ಗ್ರಾಮಾಂತರ ಪ್ರೌಢಶಾಲೆಯ ದಾಖಲಾತಿ ಮತ್ತು ಹಾಜರಾತಿಯನ್ನು ಬಿಇಓ ಹನುಮಂತರಾಯಪ್ಪ ಪರಿಶೀಲಿಸಿದರು. | Kannada Prabha

ಸಾರಾಂಶ

ಅನುದಾನಿತ ಪ್ರೌಢಶಾಲೆಗಳ ಎಸ್‌ಎಸ್‌ಎಲ್‌ಸಿ 2025ರ ಫಲಿತಾಂಶ ತೃಪ್ತಕರವಾಗಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎನ್.ಹನುಮಂತರಾಯಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ಅನುದಾನಿತ ಪ್ರೌಢಶಾಲೆಗಳ ಎಸ್‌ಎಸ್‌ಎಲ್‌ಸಿ 2025ರ ಫಲಿತಾಂಶ ತೃಪ್ತಕರವಾಗಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎನ್.ಹನುಮಂತರಾಯಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ತಾಲೂಕಿನ ರಂಟವಳಲು ಅರವಿಂದ ಗ್ರಾಮಾಂತರ ಪ್ರೌಢಶಾಲೆಯ ದಾಖಲಾತಿ, ಹಾಜರಾತಿ ಪರಿಶೀಲಿಸಿ ವಿದ್ಯಾರ್ಥಿಗಳಿಗೆ ನೋಟ್‌ ಪುಸ್ತಕ ವಿತರಿಸಿ ಮಾತನಾಡಿದರು.

ಈ ಸಲ ಎಸ್‌ಎಸ್‌ಎಲ್‌ಸಿ ಫಲಿತಾಂಶ ಉತ್ತಮ ಪಡಿಸಲು ಸಂಬಂಧಪಟ್ಟಂತೆ ಯೋಜನೆಗಳನ್ನು ರೂಪಿಸಿ ಯಶಸ್ವಿಗೆ ಪ್ರಯತ್ನುಸುವಂತೆ ಎಚ್ಚರಿಸಿದರು. ಈ ತಿಂಗಳಿನಿಂದ ಎಲ್ಲ ತರಗತಿಗಳಿಗೆ ವಿಶೇಷ ಪಾಠ ಪ್ರವಚನ ಮಾಡುವ ಮೂಲಕ ಕಡ್ಡಾಯವಾಗಿ ವಿದ್ಯಾರ್ಥಿಗಳನ್ನು ಶಾಲೆಗೆ ಗೈರು ಹಾಜರಾಗದಂತೆ ಮುನ್ನಚ್ಚರಿಕೆ ಕ್ರಮ ವಹಿಸಬೇಕು. ಫಲಿತಾಂಶದಲ್ಲಿ ಯಾವುದೇ ರಾಜಿ ಇಲ್ಲ. ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಅಗತ್ಯವಿರುವ ವಿಷಯಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಿ ಕೊಳ್ಳುವ ವ್ಯವಸ್ಥೆ ಮಾಡಬೇಕು .ಮಕ್ಕಳಿಗೆ ಯಾವುದೇ ವಿಷಯದ ಕಲಿಕೆ ವಿಚಾರದಲ್ಲಿ ಕೊರತೆ ಉಂಟಾಗಬಾರದು. ಮುಖ್ಯ ಶಿಕ್ಷಕರು, ಶಿಕ್ಷಕರು ಮತ್ತು ಸಿಬ್ಬಂದಿಯೊಂದಿಗೆ ಸಭೆ ನಡೆಸಿ ಚರ್ಚಿಸಿ ಯೋಜನೆ ರೂಪಿಸಿಕೊಳ್ಳಬೇಕು. ಇಲಾಖೆ ಸೂಚಿಸಿರುವಷ್ಟು ಮಾತ್ರ ದಾಖಲಾತಿ ಮಾಡಿಕೊಳ್ಳದೆ ದಾಖಲಾತಿ -ಹಾಜಾರಾತಿ ಮತ್ತು ಫಲಿತಾಂಶ ಉತ್ತಮ ಪಡಿಸಲು ಶ್ರಮಿಸಬೇಕು. ವಿದ್ಯಾರ್ಥಿ ನಿಲಯಗಳಲ್ಲಿ ವಿಶೇಷ ತರಗತಿಗಳನ್ನು ಎಲ್ಲ ಶಿಕ್ಷಕರು ತೆಗೆದುಕೊಂಡಾಗ ಶಾಲೆಯ ನಂತರದ ಅವಧಿಯಲ್ಲಿ ಪಾಠ -ಪ್ರವಚನಗಳು ಉತ್ತಮ ಗೊಳ್ಲುತ್ತವೆ. ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲ ವಿದ್ಯಾರ್ಥಿ ನಿಲಯಗಳಿಗೆ ರಾತ್ರಿ ವೇಳೆ ಬೇಟಿ ನೀಡಿ ಪರಿಶೀಲಿಸುವುದಾಗಿ ತಿಳಿಸಿದರು.

ವಿಶೇಷವಾಗಿ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಸಣ್ಣ ಪುಟ್ಟ ಕಾರ್ಯಕ್ರಮಗಳಿಗೆ ಊರಿಗೆ ಹೋಗುವುದನ್ನು ನಿಲ್ಲಿಸಲು ತಿಳಿಸಿ. ಅನಗತ್ಯವಾಗಿ ಶಾಲೆಗೆ ಗೈರು ಹಾಜರಾಗಬಾರದು. ಸರ್ಕಾರ ಮಕ್ಕಳ ಶಿಕ್ಷಕ್ಕಾಗಿ ಸಾಕಷ್ಟು ಅನುದಾನ ನೀಡಿ ಗುಣ ಮಟ್ಟದ ಶಿಕ್ಷಣ ಕಲಿಕೆಗೆ ಪ್ರೋತ್ಸಾಹಿಸುತ್ತಿದೆ. ಆದ್ದರಿಂದ ಪೋಷಕರು ಮತ್ತು ಮಕ್ಕಳು ಇದರ ಪ್ರಯೋಜನ ಪಡೆದುಕೊಂಡು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಶ್ರಮಿಸಬೇಕಿದೆ ಎಂದರು.

ಈ ವೇಳೆ ಇಸಿಒ ರಾಘವೇಂದ್ರ ,ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಯರಗಾಮಯ್ಯ ಭಾಗವಹಿಸಿದ್ದರು.

PREV

Latest Stories

ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣದೊಂದಿಗೆ ಸಂಸ್ಕಾರ ಅಗತ್ಯ
ಕುಮ್ಕಿ ಹಕ್ಕು ರದ್ದುಪಡಿಸಿ ದಲಿತರಿಗೆ ಹಂಚಿ: ಶ್ಯಾಮರಾಜ್‌ ಬಿರ್ತಿ ಆಗ್ರಹ
ದಲಿತರನ್ನು ಭೂಮಿ ಹಕ್ಕಿನಿಂದ ಹೊರಗಟ್ಟಲು ಕುತಂತ್ರ