ಶರಣ ಡಿ.ಸಿ.ಶಾಂತವೀರಣ್ಣನವರ ಕೈಲಾಸ ಶಿವಗಣಾರಾಧನೆ,ಸರ್ವ ಶರಣರ ಸಮ್ಮೇಳನ
ಕನ್ನಡಪ್ರಭ ವಾರ್ತೆ, ತರೀಕೆರೆಕಾಯಕಶೀಲರಾಗಿ ಎಲ್ಲರ ಒಳಿತಿಗೆ ಹೋರಾಡುವವರು ದೊಡ್ಡವರಾಗುತ್ತಾರೆ ಎಂದು ಸಾಣೆಹಳ್ಳಿ ಶ್ರೀ ತರಳಬಾಳು ಜಗದ್ಗುರು ಶಾಖಾ ಮಠ ಪಟ್ಚಾಧ್ಯಕ್ಷ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿ ಹೇಳಿದರು.
ಗುರುವಾರ ಪಟ್ಟಣದಲ್ಲಿ ದೋರನಾಳು ಅಡಕೆ ಬೆಳೆಗಾರರು ಡಿ.ಎಸ್.ಗಿರೀಶ್, ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಮಾಜಿ ಶಾಸಕ ತರೀಕೆರೆ ಡಿ.ಎಸ್.ಸುರೇಶ್, ಶಿವಮೊಗ್ಗ ಅಡಕೆ ವರ್ತಕ ಮತ್ತು ಡಿ.ಎಸ್.ಶಶಿಕಿರಣ್ ಅವರಿಂದ ಏರ್ಪಡಿಸಿದ್ದ ಶರಣ ಡಿ.ಸಿ.ಶಾಂತವೀರಣ್ಣನವರ ಕೈಲಾಸ ಶಿವಗಣಾರಾಧನೆ ಹಾಗೂ ಸರ್ವ ಶರಣರ ಸಮ್ಮೇಳನದ ಸಾನ್ನಿದ್ಯ ವಹಿಸಿ ಮಾತನಾಡುತ್ತಿದ್ದರು.ಸರಳವಾಗಿ ಬದುಕಿದ ಶರಣ ಡಿ.ಸಿ.ಶಾಂತವೀರಣ್ಣ ಅ ಎಲ್ಲರ ಜೊತೆ ಬೆರೆಯುವ ಶಕ್ತಿ ಇತ್ತು, ಒಳ್ಳೆಯತನ ಬೆಳಿಸಿಕೊಂಡ ಚೇತನಗಳು ಇದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೊಗಳಿಕೆಗೆ ಉಬ್ಬಿಲ್ಲ, ತೆಗಳಿಕೆಗೆ ಕುಗ್ಗಿಲ್ಲ. ಒಳ್ಳೆಯದನ್ನು ಒಳ್ಳೆಯದು ಅಂತ ಹೇಳೋಣ, ನೈತಿಕ ಮಟ್ಟ ಕುಸಿಯಬಾರದು, ಕಾಯಕ ಪ್ರಜ್ಞೆಯನ್ನು ಬೆಳೆಸಿಕೊಳ್ಳೋಣ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ ಆತ್ಮಕ್ಕೆ ಸಾವಿಲ್ಲ, ಇದು ಜೀವನಚಕ್ರ, ಇನ್ನೊಂದರ ಆರಂಭ, ಶರಣ ಡಿ.ಸಿ.ಶಾಂತವೀರಣ್ಣ ಅವರ ಆದರ್ಶಗಳನ್ನು ಪಾಲಿಸಿಲಿದರೆ ಅವರು ಶಾಶ್ವತವಾಗಿ ನೆಲೆಸುತ್ತಾರೆ. ಶಾಂತವೀರಣ್ಣ ಅವರ ಅನುಭವದ ನುಡಿಗಳು ಜೀವನದ ನಡೆಯಾಗಲಿ. ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದು ತಿಳಿಸಿದರು.ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಮಾಜಿ ಶಾಸಕ ಡಿ.ಎಸ್.ಸುರೇಶ್ ಮಾತನಾಡಿ ಸಾಣೆಹಳ್ಳಿ ಶ್ರೀ ತರಳಬಾಳು ಜಗದ್ಗುರು ಶಾಖಾ ಮಠ ಪಟ್ಟಾಧ್ಯಕ್ಷ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಶಾಸಕರು, ಮಾಜಿ ಶಾಸಕರು, ಬಂಧುಗಳು, ಸ್ನೇಹಿತರು ಪ್ರೀತಿ ವಿಶ್ವಾಸದಿಂದ ಆಗಮಿಸಿದ್ದಾರೆ, ನಮ್ಮ ತಂದೆಯ ಶರಣ ಡಿ.ಸಿ.ಶಾಂತವೀರಣ್ಣ ಅವರು ನಿಷ್ಠೆಯಿಂದ ಕೆಲಸ ಮಾಡಿದರು. ಅವರ ಅಗಲುವಿಕೆಯಿಂದ ನಮ್ಮ ಕುಟುಂಬಕ್ಕೆ ಅಪಾರ ನಷ್ಟ ಉಂಟಾಗಿದೆ. ಆವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದರು.ಸಾಹಿತಿ ಚಟ್ನಳ್ಳಿ ಮಹೇಶ್ ಮಾತನಾಡಿ ಶರಣ ಶಾಂತವೀರಣ್ಣ ಸಾರ್ಥಕ ಬದುಕು ನಡೆಸಿದ್ದಾರೆ. ಶ್ರದ್ಧೆ ಮತ್ತು ನಿಷ್ಠೆಯಿಂದ ಬೆಳೆದ ಅವರ ಆತ್ಮಜ್ಯೋತಿ ಬೆಳಗುತ್ತಿದೆ ಎಂದು ನುಡಿದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿ ಶರಣ ಶಾಂತವೀರಣ್ಣ ಕೃಷಿ ಬದುಕಿನಿಂದ ಬೆಳೆದು ಬಂದವರು ಎಂದರು.ಮಾಜಿ ಶಾಸಕ ಜೀವರಾಜ್ ಮಾತನಾಡಿ ಶರಣ ಡಿ.ಸಿ.ಶಾಂತವೀರಣ್ಣ ಅವರದು ಸರಳ ವ್ಯಕ್ತಿತ್ವ ಎಂದು ಹೇಳಿದರು.ಮಾಜಿ ಶಾಸಕ ಎಸ್.ಎಂ.ನಾಗರಾಜ್, ವಿಧಾನ ಪರಿಷತ್ತು ಸದಸ್ಯ ಎಂ.ಕೆ.ಪ್ರಾಣೇಶ್, ಪುರಸಭೆ ಅಧ್ಯಕ್ಷ ವಸಂತಕುಮಾರ್, ಮಾಜಿ ಶಾಸಕ ಬೆಳ್ಳಿ ಪ್ರಕಾಶ್, ಜಿಪಂ ಮಾಜಿ ಅಧ್ಯಕ್ಷ ಕೆ.ಆರ್.ದೃವಕುಮಾರ್, ಚೈತ್ರಶ್ರೀ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಆರ್.ಆನಂದಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ ಶೆಟ್ರು, ಮುಖಂಡ ಕಲ್ಮುರಡಪ್ಪ, ಎ.ಸಿ.ಚಂದ್ರಪ್ಪ, ಡಿ.ಎಸ್.ಗಿರೀಶ್, ಡಿ.ಎಸ್.ಶಶಿಕಿರಣ್, ಡಿ.ಎಸ್.ನೀತು, ಸಮನ್ವಯ ಕಾಶಿ, ಅಜಯ್, ಕುಟುಂಬದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.-- ಬಾಕ್ಸ್--
ವಿವೇಕ ವಿಲ್ಲದೆ ಮಾತಾಡಿದ್ದಾರೆ ಯತ್ನಾಳ್ತರೀಕೆರೆ: ರಾಜಕಾರಣ ಮತ್ತು ಬದುಕು ಒಂದು ನಾಣ್ಯದ ಎರಡು ಮುಖಗಳು, ಶಾಸಕ ಯತ್ನಾಳ್ ಅವರು ವಿವೇಕ ಕಳೆದು ಕೊಂಡು ಮಾತನಾಡಿದ್ದಾರೆ. ಯಾರನ್ನು ಹೇಗೆ ಮಾತನಾಡಿಸಬೇಕು, ಅವಮಾನಕರ ಹೇಳಿಕೆ ನೀಡಿದ್ದಾರೆ ಎಂದು ಸಾಣೆಹಳ್ಳಿ ಶ್ರೀ ತರಳಬಾಳು ಜಗದ್ಗುರು ಶಾಖಾ ಮಠ ಪಟ್ಟಾಧ್ಯಕ್ಷರು ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ ಹೇಳಿದ್ದಾರೆ.ಗುರುವಾರ ತರೀಕೆರೆಯಲ್ಲಿ ಶರಣ ಡಿ.ಸಿ. ಶಾಂತವೀರಣ್ಣನವರ ಕೈಲಾಸ ಶಿವಗಣಾರಾಧನೆ ಮತ್ತು ಸರ್ವ ಶರಣ ಸಮ್ಮೇಳನದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಬಸವಣ್ಣನವರು ಚುರುಕುತನ ಮತ್ತು ಎದೆಗಾರಿಕೆ ಇದ್ದವವರು.ಬಸವಣ್ಣನವರ ಬಗ್ಗೆ ಎಚ್ಚರಿಕೆಯಿಂದ ಮಾತನಾಡಬೇಕು. ಅದಕ್ಕಾಗಿ ತಕ್ಕ ಫಲ ಸಿಗಲಿದೆ ಎಂದು ಸ್ವಾಮೀಜಿ ಹೇಳಿದರು.
5ಕೆಟಿಆರ್.ಕೆ.1ಃತರೀಕೆರೆಯಲ್ಲಿ ನಡೆದ ಶರಣ ಡಿ.ಸಿ.ಶಾಂತವೀರಣ್ಣನವರ ಕೈಲಾಸ ಶಿವಗಣಾರಾಧನೆ ಹಾಗೂ ಸರ್ವ ಶರಣರ ಸಮ್ಮೇಳನದ ಉದ್ಘಾಟನೆಯನ್ನು ಸಾಣೆಹಳ್ಳಿ ಶ್ರೀ ತರಳಬಾಳು ಜಗದ್ಗುರು ಶಾಖಾ ಮಠ ಪಟ್ಚಾಧ್ಯಕ್ಷ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿ ನೆರವೇರಿಸಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಧಾನ ಪರಿಷತ್ತು ಸದಸ್ಯ ಎಸ್.ಎಲ್.ಬೋಜೇಗೌಡ, ಮಾಜಿ ಶಾಸಕ ಡಿ.ಎಸ್.ಸುರೇಶ್ ಇತರರು ಇದ್ದರು.