ಯಲ್ಲಾಪುರ: ಪಟ್ಟಣದ ಎಪಿಎಂಸಿ ರೈತ ಸಭಾಭವನದಲ್ಲಿ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಸಂಘದ ತಾಲೂಕು ಸಂಘದ ವತಿಯಿಂದ ಏರ್ಪಡಿಸಿದ್ದ ೪ನೇ ವರ್ಷದ ಜಿಲ್ಲಾಮಟ್ಟದ ಒಪನ್ ರ‍್ಯಾಪಿಡ್ ಚೆಸ್ ಟೂರ್ನಾಮೆಂಟ್ ಸಮಾರೋಪ ಸಮಾರಂಭದಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವಿದ್ಯುತ್ ಗುತ್ತಿಗೆದಾರ ಸಂಘದ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ ಅಧ್ಯಕ್ಷತೆ ವಹಿಸಿ, ವಿಜೇತರಿಗೆ ಬಹುಮಾನ ವಿತರಿಸಿ, ಮಕ್ಕಳ ಪ್ರತಿಭೆ ಬೆಳಗುವ ನಿಟ್ಟಿನಲ್ಲಿ ಮುಂದಿನ ವರ್ಷವೂ ಪಂದ್ಯಾವಳಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದರು.
ವಿಶ್ರಾಂತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ, ಮಲೆನಾಡು ಸೊಸೈಟಿ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ವಿಕಾಸ ಬ್ಯಾಂಕ್ ಅಧ್ಯಕ್ಷ ಮುರಳಿ ಹೆಗಡೆ, ನೌಕರರ ಸಂಘದ ಅಧ್ಯಕ್ಷ ಸಂಜೀವಕುಮಾರ ಹೊಸ್ಕೇರಿ, ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಸುಬ್ರಾಯ ಬಿದ್ರೆಮನೆ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಚೆಸ್ ಮಾರ್ಗದರ್ಶಕರಾದ ರಾಮಚಂದ್ರ ಭಟ್ಟ, ಆನಂದ ಸ್ವಾಮಿ ಅವರನ್ನು ಗೌರವಿಸಲಾಯಿತು.೧೪ ವರ್ಷದ ಮಹಿಳಾ ವಿಭಾಗದಲ್ಲಿ ಸನ್ನಿಧಿ ಸಂತೋಷ ಶೆಟ್ಟರ್ ಶಿರಸಿ ಪ್ರಥಮ, ವಾರುಣಿ ಯಲ್ಲಾಪುರ ದ್ವಿತೀಯ, ಅನ್ವಿತಾ ಎನ್.ಎಚ್. ಶಿರಸಿ ತೃತೀಯ ಸ್ಥಾನ ಪಡೆದರು. ೧೪ ವರ್ಷದ ಪುರುಷರ ವಿಭಾಗದಲ್ಲಿ ಅಖಿಲ್ ತುಕಾರಾಮ ನಾಯ್ಕ ಕಾರವಾರ ಪ್ರಥಮ, ದುರ್ಗಾಪ್ರಸಾದ ಭಟ್ಟ ಯಲ್ಲಾಪುರ ದ್ವಿತೀಯ, ಅಭಿಶೇಕ ಗಾಂವ್ಕರ ಯಲ್ಲಾಪುರ ತೃತೀಯ, ಬೆಸ್ಟ್ ಯಲ್ಲಾಪುರ ಅವಾರ್ಡ್ ಧನುಷ್ ನಾರಾಯಣ ಹೆಗಡೆ ಯಲ್ಲಾಪುರ ಪಡೆದುಕೊಂಡರು. ೧೬ ವರ್ಷ ಮೇಲ್ಪಟ್ಟವರಿಗಾಗಿ ನಡೆದ ಸ್ಪರ್ಧೆಯಲ್ಲಿ ವಿಸ್ಮಯ ಈಶ್ವರ ಪಟಗಾರ ಯಲ್ಲಾಪುರ, ವಿಜಯೇಂದ್ರ ಡಿ. ಭಟ್ಟ, ನಿಹಾಲ್ ಕೆ ಶಿರಸಿ, ನಿಯತಿ ಎಂ. ಯಲ್ಲಾಪುರ, ತನುಶ್ ನಾಗರಾಜ ನಾಯ್ಕ ಕುಮಟಾ, ರೋಹಿತ್ ಮಾಕು ಕೊಕರೆ ವಿಜೇತರಾದರು.