ಸುಜ್ಞಾನದಿಂದ ಬೆಳೆದರೆ ಸಜ್ಜನರಾಗಿ ಆರೋಗ್ಯ, ಗೌರವ ಉತ್ತಮ ಬದುಕು ಕಟ್ಟಿಕೊಳ್ಳಬಹುದು. ತಲೆತಗ್ಗಿಸಿ ಓದಿದವರು ತಲೆ ಎತ್ತಿ ಬದುಕುವರು ಎಂಬುದು ಗೊತ್ತಿಲ್ಲವೆ ಎಂದು ಉಪನ್ಯಾಸಕ ಹಾಗೂ ಬರಹಗಾರ ಹಳ್ಳಿವೆಂಕಟೇಶ್ ತಿಳಿಸಿದರು. ಪ್ರಪಂಚದಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ರವರು ಹೆಚ್ಚು ಪುಸ್ತಕಗಳನ್ನು ಓದಿದವರು ಗ್ರಂಥಾಲಯವನ್ನು ಹೆಚ್ಚು ಬಳಕೆ ಮಾಡಿಕೊಂಡವರು. ಕುವೆಂಪು, ದ.ರಾ.ಬೇಂದ್ರೆ, ಎ. ಪಿ. ಜೆ. ಅಬ್ದುಲ್ ಕಲಾಂ, ರವಿಬೆಳಗೆರೆ ಇಂತಹವರೆಲ್ಲ ಜ್ಞಾನದಾಹದಿಂದ ಅಭ್ಯಸಿಸಿ ಮಹಾತ್ಮರು ಎಂದೆನಿಸಿಕೊಂಡರು ಎಂದರು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಸುಜ್ಞಾನದಿಂದ ಬೆಳೆದರೆ ಸಜ್ಜನರಾಗಿ ಆರೋಗ್ಯ, ಗೌರವ ಉತ್ತಮ ಬದುಕು ಕಟ್ಟಿಕೊಳ್ಳಬಹುದು. ತಲೆತಗ್ಗಿಸಿ ಓದಿದವರು ತಲೆ ಎತ್ತಿ ಬದುಕುವರು ಎಂಬುದು ಗೊತ್ತಿಲ್ಲವೆ ಎಂದು ಉಪನ್ಯಾಸಕ ಹಾಗೂ ಬರಹಗಾರ ಹಳ್ಳಿವೆಂಕಟೇಶ್ ತಿಳಿಸಿದರು.ಅವರು ಪಟ್ಟಣದ ಸಾರ್ವಜನಿಕ ಗ್ರಂಥಾಲಯ, ಹೇಮವಾಣಿ ಪ್ರಕಾಶನ, ಹೇಮಾವತಿ ಆಫ್‌ಸೆಟ್ ಪ್ರಿಂಟರ್ಸ್ ವತಿಯಿಂದ ನಡೆದ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ ಹಾಗೂ ಪುಸ್ತಕ ಪ್ರದರ್ಶನವನ್ನು ಗುರುವಾರ ಉದ್ಘಾಟಿಸಿ ಮಾತನಾಡಿ, ಮಕ್ಕಳು ಹೀಗಿರಬೇಕು ಹಾಗಿರಬೇಕೆಂದೆಲ್ಲ ತಂದೆ ತಾಯಂದಿರು ಬಯಸುವುದು ಮಾರುಕಟ್ಟೆಯಲ್ಲಿ ಸಂತೆಯಲ್ಲಿ ಅವರಿಗೆ ಬೇಕೆಂದು ತೆಗೆದುಕೊಂಡು ಹೋಗುವುದು ತಪ್ಪಲ್ಲ ಎಲ್ಲವನ್ನು ತೆಗೆದುಕೊಂಡುವುದರ ಜೊತೆಗೆ ಒಂದು ಪುಸ್ತಕವನ್ನು ಕೊಂಡು ಓದು ಎಂದು ಓದುವ ಅಭ್ಯಾಸ ಮಾಡಿಸಬೇಕಲ್ಲವೆ ಎಂದರು. ಪ್ರಪಂಚದಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ರವರು ಹೆಚ್ಚು ಪುಸ್ತಕಗಳನ್ನು ಓದಿದವರು ಗ್ರಂಥಾಲಯವನ್ನು ಹೆಚ್ಚು ಬಳಕೆ ಮಾಡಿಕೊಂಡವರು. ಕುವೆಂಪು, ದ.ರಾ.ಬೇಂದ್ರೆ, ಎ. ಪಿ. ಜೆ. ಅಬ್ದುಲ್ ಕಲಾಂ, ರವಿಬೆಳಗೆರೆ ಇಂತಹವರೆಲ್ಲ ಜ್ಞಾನದಾಹದಿಂದ ಅಭ್ಯಸಿಸಿ ಮಹಾತ್ಮರು ಎಂದೆನಿಸಿಕೊಂಡರು. ಇಂದು ಸಹ ಜೀವನಂತವಾಗಿ ನಾವುಗಳು ನೆನೆಯುತ್ತಿದ್ದೇವೆ. ಗ್ರಾಮ ಪಂಚಾಯಿತಿಗಳಲ್ಲಿಯೂ ನೀವು ಬರುತ್ತೀರ ಎಂದು ಗ್ರಂಥಪಾಲಕರು ಬಾಗಿಲು ತೆರೆದು ಕಾಯುತ್ತಿರುತ್ತಾರೆ. ಓದುಗರು ಹೋದರೆ ಅವರಿಗೆ ಸಂತೋಷವಾಗುವುದನ್ನು ನೋಡಿದ್ದೇವೆ. ಪಟ್ಟಣದ ಈ ಸುವ್ಯವಸ್ಥಿತ ಸಾರ್ವಜನಿಕ ಗ್ರಂಥಾಲಯದ ಉಪಯೋಗದಿಂದ ಬದುಕನ್ನು ಕಟ್ಟಿಕೊಂಡಿರುವವರ ಉದಾಹರಣೆಗಳಿವೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಹಿರಿಯ ಹೋರಾಟಗಾರ ಹಾಗೂ ಗ್ರಂಥಾಲಯ ನಿರ್ಮಾತೃ ಪುಟ್ಟಣ್ಣ ಗೋಕಾಕ್, ಜಿಲ್ಲೆಯಲ್ಲೇ ಒಂದು ಉತ್ತಮ ಸುಸಜ್ಜಿತ ಗ್ರಂಥಾಲಯ ನಿರ್ಮಾಣವಾಗಿದ್ದರೆ ಅದು ನಮ್ಮ ತಾಲೂಕಿನಲ್ಲಿ. ಸಾವಿರಾರು ವಿದ್ಯಾರ್ಥಿಗಳು ಗ್ರಂಥಾಲಯದ ಉಪಯೋಗವನ್ನು ಪಡೆದುಕೊಂಡು ಉನ್ನತ ವ್ಯಾಸಂಗಕ್ಕೆ ದೇಶ ವಿದೇಶಕ್ಕೆ ಹೋಗಿದ್ದಾರೆ. ಇನ್ನು ಕೆಲವರು ಸರ್ಕಾರಿ ಉದ್ಯೋಗ ಪಡೆದುಕೊಂಡು ಬದುಕನ್ನು ಕಟ್ಟಿಕೊಂಡಿದ್ದಾರೆ. ನಮ್ಮ ೫೦ವರ್ಷಗಳ ಸಮಾಜ ಸೇವೆಯಲ್ಲಿ ಗ್ರಂಥಾಲಯ ಸೇವೆ ತೃಪ್ತಿ ನೀಡುತ್ತದೆ, ಮಕ್ಕಳೇ ಈ ದೇಶದ ಆಸ್ತಿ ವಿದ್ಯೆ ಇದ್ದರೆ ಯಾವ ಗುಲಾಮಗಿರಿಗೆ ಹೋಗುವ ಅವಶ್ಯಕತೆಯೆ ಇರುವುದಿಲ್ಲ. ಆದ್ದರಿಂದ ಎಲ್ಲರೂ ಗ್ರಂಥಾಲಯದ ಉಪಯೋಗವನ್ನು ಪಡೆದುಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ರಂಗಭೂಮಿ ಕಲಾವಿದ ಮಂಜು ಮಟ್ಟನವಿಲೆ, ಖ್ಯಾತ ಭರತನಾಟ್ಯ ಕಲಾವಿದೆ ಬಿ. ಜಿ.ಶೈಲಜಾ ಕುಮಾರ್, ಪತ್ರಕರ್ತರಾದ ಮಹೇಶ್‌ಎಸ್.ಬಿದರೆಕಾವಲು, ಪೊಲೀಸ್ ಇಲಾಖೆ ನಿವೃತ್ತ ನೌಕರ ಶ್ರೀಕಂಠಯ್ಯ, ಮುಷರಫ್ ಜಾಫರ್, ಗ್ರಂಥಪಾಲಕ ದೇವರಾಜ್ ಮತ್ತಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.