ಶೃಂಗೇರಿ ವಿದ್ಯಾರಣ್ಯಪುರ ಶ್ರೀ ರಾಮದೇವಸ್ಥಾನದಲ್ಲಿ ಕುಂಭಾಭಿಷೇಕೋತ್ಸವ ನೆರವರೇರಿಸಿ ವಿಧುಶೇಖರ ಭಾರತೀ ತೀರ್ಥರು.
ಕನ್ನಡಪ್ರಭ ವಾರ್ತೆ, ಶೃಂಗೇರಿಶೃಂಗೇರಿ ಪೀಠದ ಜಗದ್ಗುರುಗಳು ರಾಮಮಂದಿರ ಉದ್ಘಾಟನೆಗೆ ವಿರೋಧ ಮಾಡಿದ್ದಾರೆ ಎಂದು ಗುರುಗಳ ಚಿತ್ರ ಹಾಕಿ ಅಪಪ್ರಚಾರ ಮಾಡಿದರು. ಇಂತಹ ಸುಳ್ಳುಪ್ರಚಾರ ಮಾಡಿದವರು ಪಾಪಕ್ಕೆ ಬಾಜನರಾಗುತ್ತಾರೆ ಎಂದು ಶೃಂಗೇರಿ ಪೀಠದ ಕಿರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರು ಹೇಳಿದರು.ಶೃಂಗೇರಿ ವಿದ್ಯಾರಣ್ಯಪುರ ಶ್ರೀ ರಾಮದೇವಸ್ಥಾನದಲ್ಲಿ ಕುಂಭಾಭಿಷೇಕೋತ್ಸವ ನೆರವರೇರಿಸಿ ಅನುಗ್ರಹ ಭಾಷಣ ಮಾಡಿದರು. ಗುರುಗಳ ಚಿತ್ರ ಹಾಕುವುದು, ಅಯೋದ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ವಿರೋಧ ಮಾಡ್ತಾ ಇದ್ದಾರೆ ಅಂತ ಹಾಕುವುದು. ಎಲ್ಲಿ ವಿರೋಧ ಮಾಡಿದ್ದಾರೆ ಎಲ್ಲಾದರೂ ಇದೆಯೇ, ಗುರುಗಳ ದರ್ಶನ ಸಿಗುವುದೇ ದುರ್ಲಬ, ಎಷ್ಟು ಕಷ್ಟವಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇಂತಹದರಲ್ಲಿ ಅವರು ವಿರೋಧ ಮಾಡ್ತಾ ಇದಾರೆ ಅಂದರೆ, ಬೇರೆಯವರ ಅಭಿಪ್ರಾಯ ಬೇರೆ ಬೇರೆ ಅವರವರ ವಿಚಾರ, ಏನೇನೋ ಹೇಳ್ತಾರೆ, ಆ ಬಗ್ಗೆ ನಾವೇನು ಹೇಳಲು ಆಗುವುದಿಲ್ಲ.ಆದರೆ ನಮ್ಮಗುರುಗಳ ಚಿತ್ರ ಹಾಕೋದು, ಎಲ್ಲಾ ಕಡೆ ನೀವೆ ನೋಡಿರಬಹುದು. ಅದು ನನ್ನ ತನಕ ಬಂದಿದೆ ಎಂದರೆ ಅದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಈ ರೀತಿಯಾಗಿ ಅಪಪ್ರಚಾರ ಮಾಡುವುದು. ಅಪಪ್ರಚಾರ ಮಾಡುತ್ತಿರು ವವನು ಎಲ್ಲಿಯೋ ಕೂತಿದ್ದಾನೆ. ಅವನಿಗೆ ಇವರು ಯಾರು, ಏನು ಹೇಳಿದ್ದಾರೆ, ಎನ್ನುವುದೇ ಗೊತ್ತಿಲ್ಲ, ಯಾರೋ ಹೇಳಿದ್ದನ್ನು ಕೇಳಿ,ಅದಕ್ಕೆ ಒಂದಷ್ಟು ಸೇರಿಸಿ ಅದನ್ನು ಹಾಗೆ ಅಪಪ್ರಚಾರ ಮಾಡುತ್ತಾನೆ. ಪ್ರಮಾಣಪೂರ್ವಕವಾಗಿ ಅದನ್ನು ಹೀಗೆ ಎಂದು ಹೇಳಿದರೆ ಎಲ್ಲರೂ ತಿಳಿದುಕೊಳ್ಳಬಹುದು. ಸುಮ್ಮನೆ ಯಾರ್ಯಾರೋ ಹೇಳಿದ್ದನ್ನು ಹೀಗೆ ಅಪಪ್ರಚಾರ ಮಾಡುವುದು ದೊಡ್ಡ ಅಪರಾಧ. ಈಗ ನಡೆದಿದ್ದು, ನಡೆಯುತ್ತಿರುವುದು ಹಾಗೆ. ಇಂತಹ ವಿಷಯಗಳ ಬಗ್ಗೆ ಎಲ್ಲರೂ ಜಾಗರೂಕರಾಗಿರಬೇಕು. ಯಾವುದೇ ಲೌಕಿಕ, ರಾಜಕೀಯ ವಿಷಯಗಳಿಂದ ಸಂಬಂಧವಿಲ್ಲದೇ ನಿರಂತರವಾಗಿ ತಮ್ಮ ಅನುಷ್ಠಾನದಲ್ಲಿದ್ದು ಯಾವಾಗಲೂ ಬ್ರಹ್ಮ ಚಿಂತನೆಯಲ್ಲಿದ್ದು ಭಕ್ತರ, ಶಿಷ್ಯರ ಶ್ರೇಯಸ್ಸು ಬಯಸುತ್ತಿರು ವಂತಹ ವ್ಯಕ್ತಿಯ ವಿಚಾರದಲ್ಲಿ ಹೀಗಾಯ್ತು ಎಂದರೆ, ಇನ್ನು ಸಾಮಾನ್ಯರ ವಿಷಯದಲ್ಲಿ ಏನಾಗಬಹುದು ಎಂದು ಊಹಿಸಲು ಸಾದ್ಯವಿಲ್ಲ. ಅವರು ಎಷ್ಟು ಕಷ್ಟಪಡಬಹುದು ಎಂದು ದುಖವಾಗುತ್ತದೆ.ಹೇಳುವವರು ಏಒಂದಾ ಅದನ್ನು ಪ್ರಮಾಣಿಸಿ ತೋರಿಸಬೇಕು. ಇಲ್ಲವೇ ಸುಮ್ಮನಿರಬೇಕು. ಸುಮ್ಮನೆ ಹೇಳ್ತೆವೆ ಎಂದರೆ ಯಾರು ಅದನ್ನು ನಂಬಲು ಸಾಧ್ಯವಿಲ್ಲ, ಇಂತಹವರಿಂದ ಹಾಗೂ ಪ್ರಪಂಚದಲ್ಲಿ ಗುರುಗಳಿಗೆ ಯಾರಿಂದಲೂ ತೊಂದರೆಯಾಗಿಲ್ಲ, ಆಗುವುದು ಇಲ್ಲ. ಅವರು ಸ್ಥಿತಪ್ರಜ್ಞರಾಗಿದ್ದಾರೆ. ಅವರಿಗೆ ಯಾರಿಂದಲೂ ಯಾವಾಗಲೂ ತೊಂದರೆಯಾಗಲ್ಲ. ಆದರೆ ಅಂತಹವರಿಗೆ ತೊಂದರೆ ನೀಡಲು ಹೋದರೆ ,ಯಾರು ತೊಂದರೆ ಕೊಡುತ್ತಾನೋ ಅಂತಹವನು ಪಾಪಿಯಾಗಬೇಕಾಗುತ್ತದೆ ಎಂದರು.24 ಶ್ರೀ ಚಿತ್ರ 3-
ಶ್ರೀ ವಿಧುಶೇಖರ ಭಾರತೀ ತೀರ್ಥರು..