ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ನಕಲಿ ಸಂಸ್ಧೆಗೆ ಅನುಮತಿ ನೀಡಿ ನೂರಾರು ಮಂದಿ ನಿರುದ್ಯೋಗಿ ಯುವಕ, ಯುವತಿಯರ ವಂಚನೆಗೆ ಕಾರಣವಾದ ಪ್ರಕರವೀಗ ಹೊಸ ತಿರುವು ಪಡೆದುಕೊಂಡಿದ್ದು ಸಂತ್ರಸ್ಥರಿಂದ ವಸೂಲಿ ಮಾಡಿದ ಲಕ್ಷಾಂತರ ಹಣ ಜು.12ರಂದು ನೀಡದಿದಲ್ಲಿ ದಲಿತ ಮುಖಂಡ ಅಣಗಳ್ಳಿ ಬಸವರಾಜು ನೇತೃತ್ವದಲ್ಲಿ ಸಂತ್ರಸ್ಥರು ಹೋರಾಟಕ್ಕೆ ಸಜ್ಜಾಗಿದ್ದಾರೆ.ಈ ಪ್ರಕರಣದಲ್ಲಿ ನೂರಾರು ಮಂದಿ ವಂಚನೆಗೆ ಡಿಡಿಪಿಐ ಸರ್ಕಾರಿ ನಿಯಮ ಮೀರಿ ನೀಡಿದ ಅನುಮತಿಯಿಂದಲೇ ಮೋಸ ಹೋಗಲು ಕಾರಣವಾಗಿದ್ದು ರಾಮಚಂದ್ರರಾಜೇ ಅರಸು ಸೇರಿದಂತೆ 5 ಮಂದಿ ವಿರುದ್ದ ದಾಖಲೆ ಸಮೇತ ಸಂತ್ರಸ್ಥರು ಪೊಲೀಸ್ ಠಾಣೆಗೆ ದೂರು ನೀಡಿ ಪ್ರತಿಭಟಿಸುವುದು, ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕಚೇರಿ ಮುಂದೆ ಧರಣಿ ನಡೆಸಿ ನ್ಯಾಯ ಕೇಳುವುದು, ಅನುಮತಿ ನೀಡಿದ ಡಿಡಿಪಿಐ ಅವರೇ ಮದ್ಯ ನಿಂತು ಹಣ ವಸೂಲಿ ಮಾಡಿಸಿ ನಮಗೆ ನ್ಯಾಯ ದೊರಕಿಸಿಕೊಡಬೇಕು, ವಂಚನೆಗೆ ಒಳಗಾದ ನಮಗೆ ಕೆಲಸ ಕೊಡಿಸಬೇಕು ಎಂದು ಹೋರಾಟಕ್ಕೆ ಸಜ್ಜಾಗಿದ್ದಾರೆ.
ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಹೋರಾಟಗಾರ ಅಣಗಳ್ಳಿ ಬಸವರಾಜು ನೇತೃತ್ವದಲ್ಲಿ ಭೇಟಿಯಾಗಿನ್ಯಾಯ ಕೇಳುವುದು, ಸಚಿವರ ಗಮನಕ್ಕೆ ಈ ವಿಚಾರ ಬಂದಿದ್ದರೂ ಕ್ರಮ ಕೈಗೊಂಡು ನ್ಯಾಯ ಸಲ್ಲಿಸುವಲ್ಲಿ ವಿಫಲತೆ ಪ್ರಶ್ನಿಸುವುದು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿ ನ್ಯಾಯ ಕೇಳುವುದಕ್ಕೆ
ಸಂತ್ರಸ್ಥರುಗಳು ನಿರ್ಣಯಿಸಿದ್ದಾರೆ.ಜು.12ರಂದು ಹಣ ಸಂದಾಯವಾಗದಿದ್ದಲ್ಲಿ ಈ ಸಂಸ್ಥೆಯ ಪ್ರಮುಖರುವಾರಿ ಎಂದು ಹೇಳಿಕೊಳ್ಳುತ್ತಿರುವ ಸಂಯೋಜಕ ಸತೀಶ್ , ಕೊಳ್ಳೇಗಾಲದ ಶ್ರೀಕಂಠು, ಕೃಷ್ಣ, ಸುಂದರ್ ವಿರುದ್ದ ಮತ್ತು ಡಿಡಿಪಿಐ ವಿರುದ್ದ ದೂರು ದಾಖಲಿಸಲು ಮುಂದಾಗಿದ್ದಾರೆ. ಡಿಡಿಪಿಐ ಆದೇಶ ನೋಡಿ ಫೇಕ್ ಕಲಾಂ ಸಂಸ್ಥೆಗೆ ಹಣ ನೀಡಿ ಮೋಸ ಸಂತ್ರಸ್ಥರು ರೈತ ಹೋರಾಟಗಾರರ ಸಮ್ಮುಖದಲ್ಲಿ ತಮ್ಮ ಅಳಲು ಹೇಳಿಕೊಂಡಿದ್ದಾರೆ.
ಸತ್ತೇಗಾಲದ ಮಹಿಳೆಯೊಬ್ಬರು ಲಕ್ಷಾಂತರ ಹಣವನ್ನು ಮಾಂಗಲ್ಯಸರ ಅಡವಿಟ್ಟು ಕೆಲಸದಾಸೆಗೆ ನೀಡಿದ್ದು ಇತ್ತಸಂಬಳವೂ ಇಲ್ಲ, ಹಣವೂ ವಾಪಸ್ಸ್ ನೀಡಿದ ಬಗ್ಗೆ ಮನನೊಂದು ಕಣ್ಣಿರಿಟ್ಟಿದ್ದಾರೆ.
ಸಂತ್ರಸ್ಥರು ಡಿಡಿಪಿಐ ಆದೇಶ ನಂಬಿ ಸರ್ಕಾರಿ ಉದ್ಯೋಗ ಸಿಗುತ್ತೆ ಎಂದು ಕಲಾಂ ಸಂಸ್ಥೆಗೆ ಲಕ್ಷಾಂತರ ಹಣ ನೀಡಿ ಮೋಸ ಹೋಗಿದ್ದಾರೆ. ಜು.12ರತನಕ ಸಂಸ್ಥೆಯವರು ಹಣ ನೀಡುವುದಾಗಿ ಪೊಲೀಸರ ಸಮ್ಮುಖದಲ್ಲಿ ಹೇಳಿಕೆ ನೀಡಿದ್ದಾರೆ. ಹಣ ನೀಡದಿದ್ದಲ್ಲಿ ಹೋರಾಟ ಮಾಡಲಾಗುವುದು.- ಅಣಗಳ್ಳಿ ಬಸವರಾಜು. ಛಲವಾದಿ ಮಹಾಸಭೆ ರಾಜ್ಯ ಉಪಾಧ್ಯಕ್ಷ