ಕನ್ನಡಪ್ರಭ ವಾರ್ತೆ ಧಾರವಾಡ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬಸವ ಜಯಂತಿ, ನಿಂಗಯ್ಯ ಮಾಸ್ತಮರಡಿ ರುದ್ರಾಪೂರ, ಶಿವಲಿಂಗಯ್ಯ ಪ್ರಭು ದೇಸಾಯಿ ಹಾಗೂ ಎಸ್.ಎಸ್. ವಿದ್ವಾನ್ ಮತ್ತು ಗುರುಕುಮಾರ ದತ್ತಿ ಉಪನ್ಯಾಸದಲ್ಲಿ ಮಾತನಾಡಿದರು
ಭಾರತದ ಸಂವಿಧಾನದ ಪೀಠಿಕೆಯಲ್ಲಿರುವ ಸಮಾನತೆ, ಸ್ವಾಭಿಮಾನ, ಭಾವೈಕ್ಯತೆ, ಮಾನವೀಯತೆ, ಸಾಮಾಜಿಕ ನ್ಯಾಯ, ಆರ್ಥಿಕ ಸಮಾನತೆ ಮೊದಲಾದ ಮೌಲ್ಯಗಳನ್ನು ವಚನ ಸಾಹಿತ್ಯದಲ್ಲಿ ಕಾಣಬಹುದು. ಶಾಸ್ತ್ರ - ಶಸ್ತ್ರಗಳನ್ನು ಹೊಂದಿದ ಅಧಿಕಾರದಲ್ಲಿ ಜನಸಾಮಾನ್ಯರು ಗುಲಾಮರಾಗುತ್ತಾರೆ. ಪ್ರಗತಿಪರ, ಕ್ರಾಂತಿಕಾರಿ ವಿಚಾರಗಳನ್ನು ಅಂತರ್ಗತಗೊಳಿಸಿಕೊಂಡ ಸಮಾಜವನ್ನು ಪುನರ್ ವ್ಯವಸ್ಥೆಗೊಳಿಸಲು ಶರಣರು ಪ್ರಯತ್ನಿಸಿದರು ಎಂದರು.ಎಸ್.ಜಿ. ನಡಕಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸ್ವಾಭಿಮಾನ, ಸ್ವಾವಲಂಬನೆ, ಕಾಯಕ ದಾಸೋಹ, ಸಮಾನತೆ, ಏಕದೇವೋಪಾಸನೆಯ ಮೌಲ್ಯಕ್ಕೆ ಮೂಲ ಶಿಕ್ಷಣ ಮತ್ತು ದಾಸೋಹ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ 15 ಜನ ಸಹೃದಯರು ವಚನ ವಾಚನ ಮತ್ತು ಗಾಯನ ಮಾಡಿದರು. ಶಾರದಾ ಕುರವತ್ತಿ, ಸುಮಂಗಲಾ ಅಂಗಡಿ, ಮೇಘಾ ಹುಕ್ಕೇರಿ, ಭಾರತಿ ಬಡಿಗೇರಿ, ಶಿವು ಕುನ್ನುರ ವಚನ ವಾಚನ ಮಾಡಿದರು.
ಪ್ರಮೀಳಾ ಜಕ್ಕನ್ನವರ ಪ್ರಾರ್ಥಿಸಿದರು. ಪ್ರೊ. ಕೆ ಎಸ್ ಕೌಜಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾಂತೇಶ ನರೇಗಲ್ ವಂದಿಸಿದರು. ಡಾ. ರಾಜೆಂದ್ರ ಪೋದ್ದಾರ, ಸುರೇಶ ಕುಲಕರ್ಣಿ, ಡಾ. ಶಶಿಧರ ನರೆಂದ್ರ, ಸೋಮಶೇಖರ್ ಇಟಗಿ, ರಾಜಶೇಖರ ಬಸೆಟ್ಟಿ, ಪಾಟೀಲ ಕುಲಕರ್ಣಿ, ಗಂಗಾಧರ ಗಾಡದ, ಪ್ರೊ ನಾವಲಗಿ ಇದ್ದರು.