ಚುಂಚನಕಟ್ಟೆ ಶ್ರೀರಾಮ ದೇವಸ್ಥಾನದಲ್ಲಿ ಅದ್ಧೂರಿ ವೈಕುಂಠ ಏಕಾದಶಿ

KannadaprabhaNewsNetwork |  
Published : Jan 11, 2025, 12:45 AM IST
52 | Kannada Prabha

ಸಾರಾಂಶ

ಪೂಜೆ ನೈವೇದ್ಯ ಮಂಗಳಾರತಿ ನೆರವೇರಿಸಿದ ಆರ್ಚಕರು ಬೆಳಗ್ಗೆ 6.30ರಲ್ಲಿ ಭಕ್ತರಿಗೆ ಸ್ವರ್ಗದ್ವಾರ ಪ್ರವೇಶಕ್ಕೆ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಸಾಲಿಗ್ರಾಮ

ತಾಲೂಕಿನ ಚುಂಚನಕಟ್ಟೆ ಗ್ರಾಮದ ಶ್ರೀರಾಮ ದೇವಸ್ಥಾನದಲ್ಲಿ ಅದ್ದೂರಿಯಾಗಿ ವೈಕುಂಠ ಏಕಾದಶಿ ನಡೆಯಿತು.

ಈ ವೇಳೆ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿನ ಭಕ್ತರು ಭಾಗವಹಿಸಿ ಭಕ್ತಿಭಾವ ಮೆರೆದರು. ಮುಂಜಾನೆಯಿಂದಲೇ ಸುಪ್ರಭಾತ, ಹಾಲು- ಮೊಸರು, ಆರ್ಚಕ ವೃಂದ ಅರಿಶಿನ- ಕುಂಕುಮ, ಎಳನೀರು, ಪಂಚಾಮೃತಾಭಿಷೇಕ ಸೇರಿದಂತೆ ಶ್ರೀರಾಮ, ಲಕ್ಷ್ಮಣ ಹಾಗೂ ಸೀತಮ್ಮನವರ ಮೂರ್ತಿಗಳಿಗೆ ಜಲಾಭಿಷೇಕ ಮಾಡಿದರು. ನಂತರ ಹಲವು ಬಗೆಯ ಪುಷ್ಪಗಳ ತೋಮಾಲಾ ಅಲಂಕರಿಸಿ, ವಿವಿಧ ಧಾರ್ಮಿಕ ಕಾರ್ಯಗಳನ್ನು ನಡೆಯಿತು.

ಸ್ವರ್ಗದ್ವಾರಕ್ಕೆ ಪ್ರವೇಶ ಪಡೆದ ಭಕ್ತರು

ಪೂಜೆ ನೈವೇದ್ಯ ಮಂಗಳಾರತಿ ನೆರವೇರಿಸಿದ ಆರ್ಚಕರು ಬೆಳಗ್ಗೆ 6.30ರಲ್ಲಿ ಭಕ್ತರಿಗೆ ಸ್ವರ್ಗದ್ವಾರ ಪ್ರವೇಶಕ್ಕೆ ಚಾಲನೆ ನೀಡಿದರು. ಗ್ರಾಮಸ್ಥರು ಸೇರಿದಂತೆ ಜಿಲ್ಲೆಯ ನಾನಾ ಭಾಗಗಳಿಂದ ಭಕ್ತರು ಸಂಜೆವರೆಗೂ ತಂಡೋಪತಂಡವಾಗಿ ದೇಗುಲಕ್ಕೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ಪ್ರಸಾದ ವಿತರಣೆ:- ದೇಗುಲ ಆಡಳಿತ ಹಾಗೂ ಭಕ್ತರ ಸಹಯೋಗದಲ್ಲಿ ಬರುವ ಭಕ್ತರಿಗೆ ಬಿಸಿಬೇಳೆ ಬಾತ್, ಕೇಸರಿ ಬಾತ್, ವಡೆ ವ್ಯವಸ್ಥೆ ಮಾಡಲಾಗಿತ್ತು.

ಈ ವೇಳೆ ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಮೇಗೌಡ, ಗ್ರಾಪಂ ಮಾಜಿ ಅಧ್ಯಕ್ಷೆ ಪ್ರೇಮಕುಮಾರ್, ಮಧು, ಪಾರುಪತ್ತೆದಾರು ಯತಿರಾಜ್, ಕುಮಾರ್, ಹೆಬ್ಬಾಳು ಸೋಮಣ್ಣ, ಚುಂಚನಕಟ್ಟೆ ಕೃಷ್ಣ, ಅರ್ಚಕರಾದ ನಾರಾಯಣ ಅಯ್ಯಂಗಾರ್, ವಾಸುದೇವ, ಸಿಬ್ಬಂದಿ ಶಿವಣ್ಣ, ತಿಮ್ಮಣ್ಣ ಚಂದ್ರಣ್ಣ, ಅನಂತ್, ತಬಲ ಮಂಜು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ