ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ಭಾನುವಾರ ಸಂಜೆ ಆರು ಘಂಟೆ ಸುಮಾರಿಗೆ ಇದ್ದಕ್ಕಿದ್ದ ಹಾಗೆ ರಭಸವಾದ ಗಾಳಿಯೊಂದಿಗೆ ಮಳೆ ಆರಂಭವಾಯಿತು. ನೋಡನೋಡುತ್ತಿದ್ದಂತೆ ಗಾಳಿಯ ವೇಗ ಹೆಚ್ಚಾಗತೊಡಗಿತು. ಇದರಿಂದ ಫಸಲಿಗೆ ಬಂದಿದ್ದ ಅಡಕೆ ಮತ್ತು ತೆಂಗಿನ ಮರಗಳು ಕ್ಷಣಾರ್ಧದಲ್ಲಿ ಮುರಿದು ನೆಲಕ್ಕುರುದವು. ಮಳೆ ಅಷ್ಟೇನು ಬರದಿದ್ದರೂ ಗಾಳಿ ವೇಗಕ್ಕೆ ಲಕ್ಷಾಂತರ ರೂಪಾಯಿ ಆದಾಯ ನೀಡುತ್ತಿದ್ದ ಅಡಕೆ ಮತ್ತು ತೆಂಗಿನ ಮರಗಳು ಮುರಿದು ಬಿದ್ದಿವೆ.
300ಕ್ಕೂ ಹೆಚ್ಚು ವಿದ್ಯುತ್ ಕಂಬಗಳಿಗೆ ಹಾನಿ:ರಾತ್ರಿ ಬೀಸಿದ ಗಾಳಿಯಿಂದ ರಸ್ತೆಯ ಅಕ್ಕಪಕ್ಕದ ತೋಟಗಳ ಮರಗಳು ಮುರಿದು ವಿದ್ಯುತ್ ಕಂಬಗಳ ಮೇಲೆ ಬಿದ್ದಿದ್ದರಿಂದ 300ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ರಸ್ತೆಯ ಮೇಲೆ ಬಿದ್ದಿವೆ. ಜೊತೆಗೆ 10ಕ್ಕೂ ಹೆಚ್ಚು ಟಿಸಿ ಕಂಬಗಳು ಟಿಸಿ ಸಮೇತ ನೆಲಕ್ಕುರುಳಿವೆ. ಇದರಿಂದ ಹೊಳೆಹೊನ್ನೂರು ಮತ್ತು ಆನವೇರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಹತ್ತಾರು ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ರಾತ್ರಿಯೆಲ್ಲಾ ಕತ್ತಲೆಯಲ್ಲಿ ಕಳೆಯುವಂತಾಗಿದೆ.
ಅರಹತೊಳಲು ಗ್ರಾಮದ ಆರ್.ಲೋಕೇಶ (52) ಎಂಬ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಗ್ರಾಮದ ರಸ್ತೆ ಪಕ್ಕದಲ್ಲಿ ತರಕಾರಿ ಬೆಳೆಯುತ್ತಿದ್ದ ಲೋಕೇಶ್ ಭಾನುವಾರ ಸಂಜೆ ತರಕಾರಿ ಬಳ್ಳಿಗಳಲ್ಲಿ ಕೆಲಸ ಮಾಡುತ್ತಿದ್ದರು. ಸಂಜೆ ಗಾಳಿಮಳೆ ಆರಂಭವಾಗುತ್ತಿದ್ದಂತೆ ಪಕ್ಕದಲ್ಲಿಯೇ ಇದ್ದ ಅಡಕೆ ಮನೆಯ ಒಳಗಡೆ ಹೋಗಿ ಆಶ್ರಯ ಪಡೆದಿದ್ದಾರೆ. ಗಾಳಿ ಹೆಚ್ಚಾದ ಕಾರಣ ಅಡಿಕೆ ಮನೆಗೆ ಹಾಕಿದ್ದ ಹೆಂಚುಗಳೆಲ್ಲಾ ಹಾರಿ ಹೋಗುವುದನ್ನು ಕಂಡು ಗಾಬರಿಯಿಂದ ಹೃದಯಾಘಾತ ಸಂಬವಿಸಿದೆ. ತಕ್ಷಣ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋಗುವಷ್ಟರಲ್ಲಿ ಪ್ರಾಣ ಬಿಟ್ಟಿದ್ದಾನೆ. ಮೃತರು ಒಬ್ಬಳು ಮಗಳು ಮತ್ತು ಪತ್ನಿಯನ್ನು ಅಗಲಿದ್ದಾರೆ.
ಹಾರಿಹೋದ ಮನೆ ಮೇಲ್ಛಾವಣಿ: