ವಿಜಯಪುರ: ಪತ್ರಕರ್ತ ಪರಶುರಾಮ ಶಿವಶರಣ ಅವರು ಅನ್ನಭಾಗ್ಯ ಅಕ್ಕಿ ಮಾಫಿಯಾದ ಕುರಿತು ರಾಜ್ಯ ಮಟ್ಟದ ಪತ್ರಿಕೆಯೊಂದರಲ್ಲಿ ವಿಶೇಷ ವರದಿ ಬರೆದಿದ್ದಕ್ಕೆ, ಅವರ ಮನೆಗೆ ಬಂದು ಗೂಂಡಾ ವರ್ತನೆ ತೋರಿ, ಜೀವ ಬೆದರಿಕೆ ಹಾಕಿದ ಅಕ್ಕಿ ಮಾಫಿಯಾದ ಇಬ್ಬರು ಆರೋಪಿಗಳಾದ ಗುಡುಲಾಲ್ ತುಬಾಕೆ ಹಾಗೂ ಅಲ್ತಾಫ್ ಪುಣೇಕರ ಮೇಲೆ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಅಕ್ಕಿ ಮಾಫಿಯಾದ ಆರೋಪಿಗಳಾದ ಗುಡುಲಾಲ್ ತುಬಾಕೆ ಹಾಗೂ ಅಲ್ತಾಫ್ ಪುಣೇಕರ ಪತ್ರಕರ್ತ ಪರಶುರಾಮ ಶಿವಶರಣ ಮನೆಯಲ್ಲಿ ಇಲ್ಲದ ವೇಳೆ ಸೋಮವಾರ ಅವರ ಮನೆಗೆ ಬಂದು, ಗೂಂಡಾ ವರ್ತನೆ ತೋರಿದ್ದರು. ಜೊತೆಗೆ ಅವಾಚ್ಯ ಪದಗಳಿಂದ ಜಾತಿ ನಿಂದನೆ ಮಾಡಿ, ಜೀವ ಬೆದರಿಕೆಯೊಡ್ಡಿದ್ದರು. ಪತ್ರಕರ್ತ ನೀಡಿದ ದೂರಿನ ಆಧಾರದಲ್ಲಿ ಎಪಿಎಂಸಿ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.