ಮಾನವನ ಹಸ್ತಕ್ಷೇಪದಿಂದ ಪರಿಸರಕ್ಕೆ ಕುತ್ತು

KannadaprabhaNewsNetwork |  
Published : Nov 22, 2026, 02:30 AM IST
73ನೇ ಸಹಕಾರ ಸಪ್ತಾಹದ ಅಂಗವಾಗಿ ಕಲಘಟಗಿಯಲ್ಲಿ ಜರುಗಿದ ಕಾರ್ಯಕ್ರಮ ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ಮಾನವ ಬದುಕಲು ಮತ್ತು ಅಭಿವೃದ್ಧಿ ಹೊಂದಲು ಪ್ರಕೃತಿಯೇ ಮೂಲಾಧಾರ. ಆದರೆ, ಮಾನವನ ಚಟುವಟಿಕೆಗಳಿಂದಾಗಿ ಪರಿಸರವು ತೀವ್ರತರ ಹಾನಿಗೊಳ್ಳುತ್ತಿದೆ.

ಕಲಘಟಗಿ:

ಮಾನವ ಬದುಕಲು ಮತ್ತು ಅಭಿವೃದ್ಧಿ ಹೊಂದಲು ಪ್ರಕೃತಿಯೇ ಮೂಲಾಧಾರ. ಆದರೆ, ಮಾನವನ ಚಟುವಟಿಕೆಗಳಿಂದಾಗಿ ಪರಿಸರವು ತೀವ್ರತರ ಹಾನಿಗೊಳ್ಳುತ್ತಿದೆ ಎಂದು ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಮಂಜುನಾಥಗೌಡ ಮುರಳ್ಳಿ ಹೇಳಿದರು.

73ನೇ ಸಹಕಾರ ಸಪ್ತಾಹದ ಅಂಗವಾಗಿ ಪಟ್ಟಣದಲ್ಲಿ ಜರುಗಿದ ಪರಿಸರ ಸಂರಕ್ಷಣೆ, ಲಿಂಗ ಸಮಾನತೆ ಮತ್ತು ವಿಶ್ವ ಶಾಂತಿಗಾಗಿ ಸಹಕಾರ ಸಂಸ್ಥೆಗಳು ದಿನದ ಕಾರ್ಯಕ್ರಮ ಉದ್ಘಾಟಿಸಿದ ಅವರು, ಪರಿಸರವೆಂದರೆ ಸುತ್ತಮುತ್ತಲಿನ ಸಸ್ಯವರ್ಗ, ಪ್ರಾಣಿಗಳು, ನದಿಗಳು, ಪರ್ವತಗಳು ಮತ್ತು ಮಣ್ಣು ಗಾಳಿಯನ್ನು ಒಳಗೊಂಡ ಜೀವಜಲ. ಅದನ್ನು ಉಳಿಸಿಕೊಳ್ಳುವತ್ತ ನಾವು ಸಾಗಬೇಕಿದೆ. ಇತ್ತೀಚಿನ ದಿನಗಳಲ್ಲಿ ಕಾರ್ಖಾನೆ, ವಾಹನಗಳಿಂದ ವಿಷಾನಿಲಗಳು ಮತ್ತು ಹೊಗೆಯಿಂದ ಪರಿಸರ ಕಲುಷಿತಗೊಳ್ಳುತ್ತಿದೆ, ಕೈಗಾರಿಕೆಗಳ ತ್ಯಾಜ್ಯ, ಪ್ಲಾಸ್ಟಿಕ್‌, ಕಸ, ಇತ್ಯಾದಿಗಳು ನದಿ ಮತ್ತು ಸಮುದ್ರಗಳನ್ನು ಸೇರಿ ನೀರನ್ನು ಕಲುಷಿತಗೊಳಿಸುತ್ತಿದೆ. ಅಭಿವೃದ್ಧಿಯ ನೆಪದಲ್ಲಿ ಗ್ರಾಮ, ಪಟ್ಟಣ ಪ್ರದೇಶಗಳಲ್ಲಿ ಮರಗಳ ಅನಿಯಂತ್ರಿತ ಕಡಿತದಿಂದಾಗಿ ಮಳೆ ಕಡಿಮೆಯಾಗುತ್ತಿದೆ ಎಂದರು.

ಸಪ್ತವರ್ಣದ ಸಹಕಾರ ಧ್ವಜಾರೋಹಣ ನೆರವೇರಿಸಿದ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನಿರ್ದೇಶಕಿ ಗೀತಾ ಎಸ್. ಮರಲಿಂಗಣ್ಣವರ, ಮಹಿಳೆಯರು ಹಲವು ದಶಕಗಳ ಹಿಂದೆ ಕುಟುಂಬದ ನಿರ್ವಹಣೆಗೆ ಮಾತ್ರ ಸಿಮೀತವಾಗಿದ್ದರು. ಸಾರ್ವಜನಿಕ ಜೀವನದಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿರಲಿಲ್ಲ. ಶಿಕ್ಷಣ, ಉದ್ಯೋಗವಕಾಶಗಳು, ವೇತನ ತಾರತಮ್ಯ, ಮಹಿಳೆಯರು ಲಿಂಗಾಧಾರಿತ ಅಸಮಾನತೆಗೆ ಒಳಗಾಗುತ್ತಿದ್ದರು. ಅಲ್ಲದೇ ಕುಟುಂಬದ ಅಥವಾ ರಾಜಕೀಯ, ಸಾಮಾಜಿಕ ಮಟ್ಟದ ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಈ ಸಹಕಾರ ಕ್ಷೇತ್ರದಿಂದ ಎಲ್ಲವೂ ಸಾಧ್ಯವಾಗಿದೆ ಎಂದರು.

ಸಹಕಾರ ರತ್ನ ಪುರಸ್ಕೃತ ಉಮೇಶ ಆರ್. ಹೆಬಸೂರ, ರೈತ ಸದಸ್ಯರಿಗೆ ಟ್ರ್ಯಾಕ್ಟರ್‌ ಸಾಲ ವಿತರಿಸಿದರು. ರೈತ ಸದಸ್ಯರು ಅನುಕೂಲವಾಗಲೆಂದು ಕೇಂದ್ರ ಸಹಕಾರ ಬ್ಯಾಂಕ್‌ ತಮಗೆ ಅನೇಕ ಹಣಕಾಸಿನ ಸಹಾಯ ಮಾಡುತ್ತಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಹಕಾರ ರತ್ನ ಪುರಸೃತ ಎಸ್.ಎನ್. ರಾಯನಾಳ ಮಾತನಾಡಿದರು. ಹನ್ನೆರಡು ಮಠದ ರೇವಣಸಿದ್ದ ಶಿವಾಚಾರ್ಯರು ಅಶಿರ್ವಚನ ನೀಡಿದರು. ಜಿಪಂ ಮಾಜಿ ಸದಸ್ಯ ಐ.ಸಿ. ಗೋಕುಲ, ನಿಂಗಪ್ಪ ಸುತಗಟ್ಟಿ, ನಿಂಗನಗೌಡ ಮರಿಗೌಡ್ರ, ನಿರ್ದೇಶಕರಾದ ಮಲ್ಲಿಕಾರ್ಜುನ ಹೊರಕೇರಿ, ಸಿದ್ದಪ್ಪ ಸಪ್ಪೂರಿ ಇದ್ದರು. ಬಸವರಾಜ ದೊಡ್ಡಮನಿ ಪ್ರಾರ್ಥಿಸಿದರು. ಮಂಗಳಗೌಡ ದಾನಪ್ಪಗೌಡ್ರ ಸ್ವಾಗತಿಸಿದರು. ಬಸವರಾಜ ಕಡ್ಲಣ್ಣವರ ನಿರೂಪಿಸಿದರು. ಮಹೇಶ ಎಸ್. ಗೊರಾಬಾಳ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀ ಮುತ್ತಪ್ಪಸ್ವಾಮಿ ದೇವಾಲಯದಲ್ಲಿ ಪೊಟ್ಟನ್ ದೇವರ ನೂತನ ಗುಡಿಗೆ ಭೂಮಿ ಪೂಜೆ
ಸರ್ವೇ ಇಲಾಖೆಗೆ ಲೋಕಾಯುಕ್ತ ದಿಢೀರ್ ದಾಳಿ: ಪರಿಶೀಲನೆ