ವೋಟ್ ಬಚಾವೋ ದೇಶ ಬಚಾವೋ ಘೋಷಣೆಯಡಿ ಪ್ರತಿಭಟನೆಕನ್ನಡಪ್ರಭ ವಾರ್ತೆ ರೋಣ
ಮಧ್ಯಪ್ರದೇಶ ಮಾಜಿ ಸಚಿವ, ಸಿಡಬ್ಲ್ಯೂಸಿ ಸದಸ್ಯ ಕಮಲೇಶ್ವರ ಪಟೇಲ ಮಾತನಾಡಿ, ಮತ ಚೋರಿ ಜೊತೆಗೆ ಮತದಾನ ಹಕ್ಕಿಗೂ ಕೇಂದ್ರ ಸರ್ಕಾರ ಧಕ್ಕೆ ಮಾಡುತ್ತಿದ್ದು, ದಲಿತರು, ಅಲ್ಪಸಂಖ್ಯಾತರು, ವಲಸೆ ಕಾರ್ಮಿಕರನ್ನೆ ಟಾರ್ಗೆಟ್ ಮಾಡಿ ಮತದಾನ ಹಕ್ಕನ್ನು ಕಿತ್ತುಕೊಳ್ಳುತ್ತಿದೆ. ಜನತೆ ಈ ಬಗ್ಗೆ ಜಾಗೃತರಾಗಿ ಮತ ರಕ್ಷಣೆ ಮತ್ತು ದೇಶ ರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.
ಮತದಾನದ ಹಕ್ಕು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆಯ ಕುರಿತು ಎಲ್ಲರೂ ಅರಿವು ಹೊಂದಬೇಕು. ಪ್ರಜಾಪ್ರಭುತ್ವದ ಉಳಿವಿಗಾಗಿ ಮತದಾನದ ಹಕ್ಕಿನ ರಕ್ಷಣೆ ಅಗತ್ಯವಿದೆ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಪ್ರತಿಯೊಬ್ಬ ನಾಗರಿಕನ ಮತದಾನದ ಹಕ್ಕನ್ನು ರಕ್ಷಿಸುವುದು ಅತ್ಯಗತ್ಯವಾಗಿದೆ. ಸಂವಿಧಾನ ನೀಡಿರುವ ಮತದಾನದ ಹಕ್ಕಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ. ನಮ್ಮದೊಂದು ವೋಟ್ ಇಲ್ಲದಿದ್ದರೇ ಏನಾಗುವುದಿಲ್ಲ ಎಂದು ನಿಷ್ಕಾಳಜಿ ಮಾಡದೇ, ತಮ್ಮ ಹೆಸರು ಮತದಾರರ ಪಟ್ಟಿಯಲ್ಲೆ ಇದೆಯೋ, ಎಲ್ಲವೋ ಎಂದು ಪರಿಶೀಲಿಸಿಕೊಂಡು, ಇಲ್ಲದಿದ್ದರೇ ಮರು ಸೇರ್ಪಡೆಗೆ ಮುಂದಾಗಬೇಕು ಎಂದರು.ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಐ.ಎಸ್. ಪಾಟೀಲ ಮಾತನಾಡಿ, ಮತದಾರರ ಪಟ್ಟಿಯಲ್ಲಿನ ಲೋಪದೋಷ ಸರಿಪಡಿಸುವುದು ಮತ್ತು ಅರ್ಹ ಮತದಾರರು ತಮ್ಮ ಹಕ್ಕಿನಿಂದ ವಂಚಿತರಾಗದಂತೆ ಎಚ್ಚರ ವಹಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವು ಈ ವೋಟ್ ಬಚಾವೋ ದೇಶ ಬಚಾವೋ ಅಭಿಯಾನದ ಮೂಲಕ ಜನಜಾಗೃತಿ ಮೂಡಿಸುತ್ತಿದೆ ಎಂದರು.
ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಅಕ್ಷಯ ಪಾಟೀಲ ಮಾತನಾಡಿ, ರೋಣ ಮತ್ತು ನರೇಗಲ್ಲ ಬ್ಲಾಕ್ ವ್ಯಾಪ್ತಿಯಲ್ಲಿ ಪಕ್ಷದ ಕಾರ್ಯಕರ್ತರು ಮನೆಮನೆಗೆ ತೆರಳಿ ಮತದಾರರ ಹಕ್ಕುಗಳ ಕುರಿತು ಅರಿವು ಮೂಡಿಸಬೇಕು. ಪ್ರಜಾಪ್ರಭುತ್ವದ ರಕ್ಷಣೆಗಾಗಿ ಪಕ್ಷ ಹಮ್ಮಿಕೊಳ್ಳುವ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.