ಕನ್ನಡಪ್ರಭ ವಾರ್ತೆ ಅರಸೀಕೆರೆ
ಸಂಯುಕ್ತ ಕರ್ನಾಟಕ ಜಿಲ್ಲಾ ವರದಿಗಾರ ಜಿ.ಆರ್ ಅಶ್ವಿನಿ ಮುರುಂಡಿ ಪ್ರಸಾದ್ ದಂಪತಿ ಪುತ್ರ ಚಿ. ಸುಹಾಸ್ ಭಾರದ್ವಾಜ್, ಹಿರಿಯ ಪತ್ರಕರ್ತ ಕಣಕಟ್ಟೆ ಕುಮಾರ್ ಮತ್ತು ಉಮಾ ಕುಮಾರ್ ದಂಪತಿ ಪುತ್ರ ಕೆ.ಕೆ ಪವನ್ ಕುಮಾರ್ ಮತ್ತು ಮತ್ತೋರ್ವ ಪತ್ರಕರ್ತ ಎಸ್.ವಿ ನವೀನ್ ಕುಮಾರ್ ಮತ್ತು ಕಾವ್ಯ ದಂಪತಿ ಪುತ್ರ ಎಸ್.ಎನ್ ಲೋಚನ್ 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದಿದ್ದು, ಇವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟೇಶ್, ಕೊಳ್ಳೆಗಾಲ ಶಾಸಕ, ಕೃಷ್ಣಮೂರ್ತಿ, ಹೊನೂರು ಶಾಸಕ ಮಂಜುನಾಥ್, ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ,ವಿ ಪ್ರಭಾಕರ, ಪತ್ರಕರ್ತರ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರು, ಚಾಮರಾಜನಗರ ಜಿಲ್ಲಾ ಅಧ್ಯಕ್ಷ ದೇವರಾಜ್, ಮಲೆ ಮಾದೇಶ್ವರ ಮಠದ ಸ್ವಾಮೀಜಿ ಶ್ರೀ ಗುರುಶಾಂತ ಸ್ವಾಮಿ ಇತರರು ಹಾಜರಿದ್ದರು.