ಕನ್ನಡಪ್ರಭ ವಾರ್ತೆ ವಿಜಯಪುರ
ಬೆಳಗಾವಿಯಲ್ಲಿ ಡಿ.೨೭, ೨೮, ೨೯ ರಂದು ಎ.ಐ.ಸಿ.ಸಿ ಅಧಿವೇಶನದಲ್ಲಿ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ಹೇಳಿದರು.ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಎಐಸಿಸಿ ಅಧಿವೇಶನ ನಡೆದು ೧೦೦ ವರ್ಷಗಳು ಸಂದಿರುವ ಸವಿನೆನಪಿಗಾಗಿ ರಾಜ್ಯದಲ್ಲಿ ೧೦೦ ಬ್ಲಾಕ್ ಕಾಂಗ್ರೆಸ್ ಕಚೇರಿಗಳನ್ನು ನಿರ್ಮಿಸಲಾಗುತ್ತಿದೆ. ಈಗಾಗಲೇ ವಿಜಯಪುರ ಜಿಲ್ಲೆಯಲ್ಲಿ ೮ ಮತಕ್ಷೇತ್ರಗಳ ಪೈಕಿ ೫ರಲ್ಲಿ ನಿವೇಶನ ನೀಡಲು ಜಿಲ್ಲಾಧ್ಯಕ್ಷರು ಮನವಿ ನೀಡಿದ್ದಾರೆ, ಉಳಿದ ಕಚೇರಿಗಳನ್ನು ಮುಂದಿನ ದಿನಗಳಲ್ಲಿ ಮಾಡುವುದಾಗಿ ಹೇಳಿದರು.
ವಿಜಯಪುರ ಜಿಲ್ಲೆಯ ಅಧಿಕಾರಿ ವರ್ಗದವರು ಕಾಂಗ್ರೆಸ್ ಕಾರ್ಯಕರ್ತರ ಕೆಲಸಗಳಿಗೆ ಸ್ಪಂದಿಸದಿರುವ ಬಗ್ಗೆ ಜಿಲ್ಲಾಧ್ಯಕ್ಷರು ಉಪಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಅಂತಹ ಅಧಿಕಾರಿಗಳಿಗೆ ಕಾಂಗ್ರೆಸ್ ಕಾರ್ಯಕರ್ತರ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಸೂಚನೆ ನೀಡುವುದಾಗಿ ತಿಳಿಸಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಅಹವಾಲಗಳನ್ನು ರಾಜ್ಯಾಧ್ಯಕ್ಷರ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಉಪಮುಖ್ಯಮಂತ್ರಿ ಕೆಪಿಸಿಸಿಯಿಂದ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಸಿ.ಎಸ್.ನಾಡಗೌಡ, ಅಶೋಕ ಮನಗೂಳಿ, ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹ್ಮದರಫೀಕ ಟಪಾಲ, ಮುಖಂಡ ಅಬ್ದುಲ ಹಮೀದ ಮುಶ್ರೀಫ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ಚಾಂದಸಾಬ ಗಡಗಲಾವ, ಸುಭಾಷ ಕಾಲೇಬಾಗ, ವಿಜಯಕುಮಾರ ಘಾಟಗೆ, ಗಂಗಾಧರ ಸಂಭಣ್ಣಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಾಕೀರಹುಸೇನ ಮುಲ್ಲಾ, ಎಂ.ಎಂ.ಮುಲ್ಲಾ, ದೇಸು ಚವ್ಹಾಣ, ಸಂತೋಷ ಬಿರಾದಾರ, ಹಾಜಿಲಾಲ್ ದಳವಾಯಿ, ಅಯಾಜ ರೋಜೆವಾಲೆ, ವಿದ್ಯಾವತಿ ಅಂಕಲಗಿ, ಶಾಹಜಾನ ಮುಲ್ಲಾ, ಜಮೀರ ಬಕ್ಷಿ, ಎಸ್ಸಿ ಘಟಕದ ಅಧ್ಯಕ್ಷ ರಮೇಶ ಗುಬ್ಬೇವಾಡ, ವಿದ್ಯಾರಾಣಿ ತುಂಗಳ, ವಿಜಯಕುಮಾರ ಕಾಳೆ, ಅಮೀತ ಚವ್ಹಾಣ, ಲಕ್ಷ್ಮಣ ಇಲಕಲ್, ಜಯಶ್ರೀ ಭಾರತೆ, ಜಯಶ್ರೀ ಹಲಗೂರ, ಭಾರತಿ ಹೊಸಮನಿ, ರಾಜೇಶ್ವರಿ ಚೋಳಕೆ, ಶಮೀಮಾ ಅಕ್ಕಲಕೋಟ ಮುಂತಾದವರು ಇದ್ದರು.