ಕನ್ನಡಪ್ರಭ ವಾರ್ತೆ ಜಮಖಂಡಿ
2024-25ನೇ ಸಾಲಿನ ದ್ವಿತೀಯ ಪಿಯುಸಿ ಕಲಾ, ವಾಣಿಜ್ಯ, ವಿಜ್ಞಾನ 3 ವಿಭಾಗದಲ್ಲೂ ತಾಲೂಕಿನ ಮೂವರು ವಿದ್ಯಾರ್ಥಿಗಳು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ನಗರದ ತುಂಗಳ ವಿಜ್ಞಾನ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಭೂಮಿಕಾ ಬಾಗೇವಾಡಿ 594 ಅಂಕ ಗಳಿಸಿ ಜಿಲ್ಲೆಗೆ ಪ್ರಥಮ ರ‍್ಯಾಂಕ್ ಹಾಗೂ ರಾಜ್ಯಕ್ಕೆ 6ನೇ ರ‍್ಯಾಂಕ್ ಪಡೆದಿದ್ದಾರೆ.ಭಾಷಾವಾರು ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ ಹಾಗೂ ಕನ್ನಡ ಭಾಷೆಯಲ್ಲಿ 100 ಕ್ಕೆ 100, ಇಂಗ್ಲೀಷ್ 95, ಭೌತಶಾಸ್ತ್ರ 99 ಅಂಕಗಳಿಸಿದ್ದಾರೆ. ಸಂಸ್ಥಾಪಕ ಅಶೋಕ ತುಂಗಳ, ಡಾ.ಲಕ್ಷ್ಮೀ ತುಂಗಳ ಹಾಗೂ ಪ್ರಾಚಾರ್ಯ ಆರ್.ಜಿ. ಜಹಾಗೀರದಾರ ಹರ್ಷ ವ್ಯಕ್ತಪಡಿಸಿದ್ದಾರೆ.
ಕಲಾ ವಿಭಾಗದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಗೋಠೆ ಕಾಲೇಜಿನ ವಿಧ್ಯಾರ್ಥಿನಿ ವಿಜಯಲಕ್ಷ್ಮಿ ಹನುಮಂತ ಬಡಿಗೇರ (581) ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಭಾಷಾವಾರು ಕನ್ನಡ 100, ಇಂಗ್ಲಿಷ್ 92, ಇತಿಹಾಸ 97, ಅರ್ಥಶಾಸ್ತ್ರ 98, ಸಮಾಜಶಾಸ್ತ್ರ 100, ರಾಜ್ಯಶಾಸ್ತ್ರ 94 ಅಂಕ ಪಡೆದಿದು ಗೋಠೆ ಗ್ರಾಮದ ಕೀರ್ತಿ ಹೆಚ್ಚಿಸಿದ್ದಾಳೆ. ವಿದ್ಯಾರ್ಥಿನಿಯ ಸಾಧನೆಗೆ ಕಾಲೇಜಿನ ಪ್ರಾಚಾರ್ಯ ಎಸ್.ಜೆ. ಅಜನಾಳ, ಶಿಕ್ಷಕರು, ಸಿಬ್ಬಂದಿ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಸಂತಸ ವ್ಯಕ್ತಪಡಿಸಿದ್ದಾರೆ.ವಾಣಿಜ್ಯ ವಿಭಾಗದಲ್ಲಿ ತಾಲೂಕಿನ ತೊದಲಬಾಗಿ ಗ್ರಾಮದ ಮಲ್ಲಿಕಾರ್ಜುನ ಪಿಯು ಕಾಲೇಜಿನ ವಿದ್ಯಾರ್ಥಿನಿ ಮಧುಶ್ರೀ ಹಣಮಂತ ಶೆಟ್ಟೆನ್ನವರ (593) ಅಂಕ ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಭಾಷಾವಾರು ಲೆಕ್ಕದಲ್ಲಿ ಕನ್ನಡ-100 ಇಂಗ್ಲಿಷ್-95, ಅರ್ಥಶಾಸ್ತ್ರ-99, ಭೂಗೊಳಶಾಸ್ತ್ರ-100, ವ್ಯವಹಾರ ಅಧ್ಯಯನ-99, ಲೆಕ್ಕಶಾಸ್ತ್ರ 100 ಅಂಕ ಪಡೆದುಕೊಂಡಿದ್ದು ತೊದಲಬಾಗಿ ಗ್ರಾಮಕ್ಕೆ ಕೀರ್ತಿ ತಂದಿದ್ದಾಳೆ. ವಿದ್ಯಾರ್ಥಿನಿಯ ಸಾಧನೆಗೆ ಕಾಲೇಜಿನ ಪ್ರಾಚಾರ್ಯ ಆರ್.ಎಚ್.ಚಿನಗುಂಡಿ, ಶಿಕ್ಷಕರು, ಸಿಬ್ಬಂದಿ ವರ್ಗದವರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬಸಪ್ಪ ಹೆಗ್ಗೊಂಡ, ನಿರ್ದೇಶಕ ಅಶೋಕ ಕಂಕಣವಾಡಿ ಹಾಗೂ ಸದಸ್ಯರು ಸಂತಸ ವ್ಯಕ್ತಪಡಿಸಿದ್ದಾರೆ.