ಮೂವರು ಶಿಕ್ಷಕರಿಗೆ ಕಲಾಶಿಸಂ ಪ್ರತಿಷ್ಠಾನ ಪ್ರಶಸ್ತಿ

KannadaprabhaNewsNetwork |  
Published : Sep 03, 2025, 01:01 AM IST
2ಎಂಡಿಜಿ1, ಉದಯ ಗಾಂವಕಾರ.2ಎಂಡಿಜಿ1ಎ.ಹೆಚ್. ಎಂ. ವನಿತಾ.2ಎಂಡಿಜಿ1ಬಿ.ಎಸ್. ಕಲಾಧರ್. | Kannada Prabha

ಸಾರಾಂಶ

ಮುಂಡರಗಿ ಕಲಾ ಶಿಕ್ಷಣ ಸಂಸ್ಕೃತಿ ಪ್ರತಿಷ್ಠಾನ ಕೊಡಮಾಡುವ ಪಸಕ್ತ ಸಾಲಿನ "ಮಕ್ಕಳ ಸ್ನೇಹಿ ಶಿಕ್ಷಕ'''' ರಾಜ್ಯ ಮಟ್ಟದ ಪ್ರಶಸ್ತಿಗೆ ಕುಂದಾಪುರದ ಉದಯ ಗಾಂವಕರ, ಹಗರಿಬೊಮ್ಮನಹಳ್ಳಿಯ ಎಚ್. ಎಂ. ವನಿತಾ ಮತ್ತು ಶಿಡ್ಲಘಟ್ಟದ ಎಸ್. ಕಲಾಧರ್ ಆಯ್ಕೆಯಾಗಿದ್ದಾರೆ.

ಮುಂಡರಗಿ: ಇಲ್ಲಿನ ಕಲಾ ಶಿಕ್ಷಣ ಸಂಸ್ಕೃತಿ ಪ್ರತಿಷ್ಠಾನ ಕೊಡಮಾಡುವ ಪಸಕ್ತ ಸಾಲಿನ "ಮಕ್ಕಳ ಸ್ನೇಹಿ ಶಿಕ್ಷಕ'''''''' ರಾಜ್ಯ ಮಟ್ಟದ ಪ್ರಶಸ್ತಿಗೆ ಕುಂದಾಪುರದ ಉದಯ ಗಾಂವಕರ, ಹಗರಿಬೊಮ್ಮನಹಳ್ಳಿಯ ಎಚ್. ಎಂ. ವನಿತಾ ಮತ್ತು ಶಿಡ್ಲಘಟ್ಟದ ಎಸ್. ಕಲಾಧರ್ ಆಯ್ಕೆಯಾಗಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಪ್ರತಿಷ್ಠಾನದ ಅಧ್ಯಕ್ಷ ಡಾ. ನಿಂಗು ಸೊಲಗಿ, ಪ್ರಶಸ್ತಿ ₹5000 ನಗದು, ಫಲಕ, ಫಲ-ಪುಷ್ಪ ಹೊಂದಿದೆ. ಸೆ. 7 ರಂದು ಮುಂಡರಗಿಯಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ರಾಜ್ಯಾದ್ಯಂತ ಇರುವ ಪರಿಚಿತ ಸಮುದಾಯ, ಆಯಾ ಭಾಗದ ಅಧಿಕಾರಿಗಳು, ಶಿಕ್ಷಕರೊಂದಿಗೆ ಮಾತುಕತೆ ನಡೆಸಿ ಮಕ್ಕಳ ಸ್ನೇಹಿಯಾಗಿ ನಾವಿನ್ಯಯುತ ಸೃಜನಾತ್ಮಕ ಪ್ರಯೋಗ, ಚಟುವಟಿಕೆಗಳೊಂದಿಗೆ ಕಾರ್ಯ ಮಾಡುತ್ತಿರುವ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಉದಯ ಗಾಂವಕಾರ: ಉತ್ತರ ಕನ್ನಡದ ಕುಮಟಾ ತಾಲೂಕಿನ ಪಡುವಣಿಯವರಾದ ಉದಯ ಗಾಂವಕಾರ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿದ್ದು, ಬೇಳೂರು ಸರಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಭಾರತ ಜ್ಞಾನ ವಿಜ್ಞಾನ ಸಮಿತಿ ಕರ್ನಾಟಕದ ನೇತೃತ್ವದಲ್ಲಿ ನಡೆದ ಮಕ್ಕಳ ವಿಜ್ಞಾನ ಹಬ್ಬ, ಕಲಿಕಾ ಹಬ್ಬ, ಮಕ್ಕಳ ಸಾಹಿತ್ಯ ಸಂಭ್ರಮ ಕಾರ್ಯಕ್ರಮಗಳ ವಿನ್ಯಾಸ ರೂಪಿಸುವಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ಶಿಕ್ಷಣ ಇಲಾಖೆ ರೂಪಿಸಿದ ವಿಜ್ಞಾನ ಚಟುವಟಿಕೆ ಪುಸ್ತಕ ರಚನೆಯ ಮುಖ್ಯಸ್ಥರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ''''''''ಬರೆವಣಿಗೆ ಮೆರವಣಿಗೆ'''''''' ಮತ್ತಿತರ ವಿಜ್ಞಾನ ಬರಹಗಳು, ''''''''ಮಕ್ಕಳಿಗಾಗಿ ಮಹಾತ್ಮ'''''''', ''''''''ಆಲೂ ಸಮೋಸಾದೊಳಗೆ ಬಂದಿದ್ದು ಹೇಗೆ?'''''''' ಕೃತಿಗಳು ಪ್ರಕಟಗೊಂಡಿದ್ದು, ಹಲವು ಮಕ್ಕಳ ನಾಟಕಗಳು ರಂಗದ ಮೇಲೆ ಪ್ರದರ್ಶನಗೊಂಡಿವೆ.ಎಚ್. ಎಂ. ವನಿತಾ: ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಗಂ. ಭೀ. ಸರಕಾರಿ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಭಾಷೆಯ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿರುವ ಎಚ್.ಎಂ. ವನಿತಾ ಗ್ರಾಮೀಣ ಭಾಗದ ಮಕ್ಕಳಲ್ಲಿ ಇಂಗ್ಲಿಷ್ ಭಾಷೆ ಕುರಿತಾಗಿರುವ ಭಯವನ್ನು ದೂರ ಮಾಡಲು ತಮ್ಮ ಸೇವಾ ಅನುಭವದುದ್ದಕ್ಕೂ ಹಲವಾರು ಯಶಸ್ವಿ ಪ್ರಯತ್ನಗಳನ್ನು ಕೈಗೊಂಡಿದ್ದಾರೆ. ರಾಜ್ಯ ಸರ್ಕಾರ ಮೊದಲ ಬಾರಿಗೆ ರೂಪಿಸಿದ 1ರಿಂದ 4ನೇ ತರಗತಿಯ ಇಂಗ್ಲಿಷ್ ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ, ಇಂಗ್ಲಿಷ್ ಬೋಧನೆಯ ಸರಳೀಕರಣದಲ್ಲಿ ಪಾಲ್ಗೊಂಡಿದ್ದಾರೆ. ನಲಿ-ಕಲಿ ವಿಧಾನದ ಮೂಲಕ ಇಂಗ್ಲಿಷ್ ಕಲಿಸುವ ಸಾಹಿತ್ಯವನ್ನು ರಚಿಸಲು ಯುನಿಸೆಫ್ ಮತ್ತು ರಾಜ್ಯ ಸರ್ಕಾರ ನೇಮಿಸಿದ್ದ ಸಮಿತಿಯ ಭಾಗವಾಗಿ ಕೆಲಸ ಮಾಡಿದ್ದಾರೆ. ರಾಜ್ಯ ಸರ್ಕಾರದ ಇಂಗ್ಲಿಷ್ ಮಾಧ್ಯಮ ಶಾಲೆಗಳ ಪಠ್ಯಪುಸ್ತಕ ಪರಿಷ್ಕರಣೆ ಮತ್ತು ಅನುವಾದ ಸಮಿತಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ನಾಲ್ಕು ವರ್ಷಗಳ ಕಾಲ ಸಂಪನ್ಮೂಲ ವ್ಯಕ್ತಿಯಾಗಿ ಹಲವಾರು ಶಿಕ್ಷಕರಿಗೆ ತರಬೇತಿ ನೀಡಿದ್ದಾರೆ.

ಎಸ್. ಕಲಾಧರ್: ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದವರಾದ ಎಸ್. ಕಲಾಧರ್ ಅವರು ಪ್ರಸ್ತುತ ಶಿಡ್ಲಘಟ್ಟ ತಾಲೂಕಿನ ತಾತಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿಯವರೆಗಿನ 23 ವರ್ಷಗಳ ತಮ್ಮ ಸೇವಾ ಅವಧಿಯಲ್ಲಿ ಶಾಲೆಯಲ್ಲಿ ಮಕ್ಕಳ ಸ್ನೇಹಿ ವಾತಾವರಣ ನಿರ್ಮಿಸಿದ್ದಾರೆ. ಶಾಲೆಯಾಚೆಗೂ, ಮಕ್ಕಳ ಶಿಕ್ಷಣ ಮತ್ತು ಸಾಹಿತ್ಯದ ಕೆಲಸಗಳಲ್ಲಿ ನಿರತವಾಗಿರುವ ಇವರು ‘ನವಿಲಗರಿ’ ಎಂಬ ಮಕ್ಕಳ ಮಾಸಿಕ ಪ್ರಾರಂಭಿಸಿ ಎರಡು ವರ್ಷ ನಿರ್ವಹಿಸಿದ್ದಾರೆ. ಮಕ್ಕಳ ಗೋಡೆ ಪತ್ರಿಕೆ ‘ಬೇಲಿಹೂ’ನ ಪ್ರಕಟಣೆ ನಿರ್ವಹಿಸಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ‘ಗೋಡೆತೇರು’ ಗೋಡೆ ಪತ್ರಿಕೆಯ ವಿನ್ಯಾಸ ಹಾಗೂ ಸಂಪಾದಕೀಯ ಸಮಿತಿಯಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ‘ಬಾಲನಂದಿ’ ಮಕ್ಕಳ ಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''