ನರಗುಂದ: ಈದ್ ಮಿಲಾದ್ ಮೆರವಣಿಗೆ ವೀಕ್ಷಿಸಲು ಪಟ್ಟಣದಿಂದ ಕೊಪ್ಪಳಕ್ಕೆ ಬೈಕ್ ನಲ್ಲಿ ತೆರಳುತ್ತಿದ್ದಾಗ ನಿಂತಿದ್ದ ಟಾಟಾ ಏಸ್ ವಾಹನಕ್ಕೆ ಡಿಕ್ಕಿಯಾಗಿ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಕೊಪ್ಪಳ ಜಿಲ್ಲೆಯ ಬನ್ನಿಕೊಪ್ಪ ಗ್ರಾಮದ ಬಳಿ ನಡೆದಿದೆ.
ಈ ಮೂವರು ಯುವಕರು ಈದ್ ಮಿಲಾದ್ ಹಬ್ಬದ ಮೆರವಣಿಗೆ ವೀಕ್ಷಿಸಲು ಬುಧವಾರ ಬೆಳಗ್ಗೆ ನರಗುಂದದಿಂದ ಕೊಪ್ಪಳಕ್ಕೆ ಬೈಕ್ ನಲ್ಲಿ ತೆರಳುತ್ತಿದ್ದರು. ಕೊಪ್ಪಳ ಜಿಲ್ಲೆಯ ಬನ್ನಿಕೊಪ್ಪದ ಗ್ರಾಮದ ರಸ್ತೆಬದಿಯಲ್ಲಿ ಕೆಟ್ಟು ನಿಂತಿದ್ದ ಟಾಟಾ ಏಸ್ ವಾಹನಕ್ಕೆ ಬೈಕ್ ಡಿಕ್ಕಿಯಾಗಿ ಮೂವರು ಸ್ಥಳದಲ್ಲಿ ಸಾವಿಗೀಡಾಗಿದ್ದಾರೆ.
ಈದ ಮಿಲಾದ್ ಹಬ್ಬವನ್ನು ಕುಟುಂಬಸ್ಥರೊಂದಿಗೆ ಸಂಭ್ರಮದಿಂದ ಆಚರಣೆ ಮಾಡಬೇಕಾದ ಯುವಕರು ಮತ್ತೊಂದು ಉರಿಗೆ ಹಬ್ಬದ ಆಚರಣೆ ನೋಡಲು ತೆರಳಿದ ಯುವಕರು ಪ್ರಾಣವನ್ನು ಕಳೆದುಕೊಂಡಿದ್ದು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.ಮಾಬುಸಾಬ ಮಟಗೇರಿ 2ನೇ ವರ್ಷದ ಪಿಯುಸಿ ಶಿಕ್ಷಣ ಕಲಿಯುತ್ತಿದ್ದ. ಫಕ್ರುಸಾಬ ಮಾರನಬಸರಿ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದ. ಶಾನುಸಾಬ ಬಸಾಪೂರ ಎಂಬಾತ ಟೈಲ್ಸ್ ಕಲ್ಲು ಹೊಂದಿಸುವ ಕೆಲಸಕ್ಕೆ ಹೋಗುತ್ತಿದ್ದ. ಈ ಬಡ ಕುಟುಂಬದ ಮಕ್ಕಳು ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದು ಕುಟುಂಬದವರನ್ನು ಅಷ್ಟೇ ಅಲ್ಲದೇ ಇಡೀ ಪಟ್ಟಣದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿತ್ತು. ಕಳಪೆ ಜೋಳ ವಿತರಣೆ: ಪಡಿತರದಾರರ ಆರೋಪ
ಆಹಾರ ನಿರೀಕ್ಷಕರು ಆಹಾರ ಧಾನ್ಯಗಳನ್ನು ವಿತರಣೆ ಮಾಡುವುದನ್ನು ನಿಲ್ಲಿಸಿ ಎಲ್ಲ ಕಾರ್ಡದಾರರಿಗೆ ಬೇರೆ ಆಹಾರ ಧಾನ್ಯಗಳನ್ನು ವ್ಯವಸ್ಥೆ ಮಾಡಲಾಗುವುದೆಂದು ಹೇಳಿದಾಗ ಫಲಾನುಭವಿಗಳು ಪ್ರತಿಭಟನೆ ಕೈಬಿಟ್ಟರು.ಈ ಸಂದರ್ಭದಲ್ಲಿ ಹನುಮಂತ ಕಾಡಪ್ಪನವರ, ಮರಿಗೌಡ್ರ, ಮಂಜು ಹಾರಗೇರಿ, ಹನುಮಂತ ತಿರ್ಲಾಪೂರ, ಅಲ್ಲಾಭಕ್ಷಿ ಖಲೀಫ, ಹನುಮಂತಪ್ಪ ಹನುಮಸಾಗರ ಇತರರು ಇದ್ದರು.