ದಾಬಸ್‌ಪೇಟೆ: ರಸ್ತೆ ಡಿವೈಡರ್‌ಗೆ ಡಿಕ್ಕಿಯಾಗಿ ಪಕ್ಕದ ರಸ್ತೆಯಲ್ಲಿ ಬರುತ್ತಿದ್ದ ಬಸ್‌ಗೂ ಡಿಕ್ಕಿ ಹೊಡೆದ ಪರಿಣಾಮ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದೇವನಹಳ್ಳಿಯ ಲಾಲಗೊಂಡನಹಳ್ಳಿ ಗೇಟ್ ಬಳಿ ನಡೆದಿದೆ.
ಘಟನಾ ವಿವರ: ಒಂದೇ ಗ್ರಾಮದ ಸ್ನೇಹಿತರು ಹಾಗೆ ರಾತ್ರಿ ಎಲ್ಲರೂ ಒಟ್ಟಿಗೆ ಸಿಕ್ಕ ಕಾರಣ ಊಟ ಮಾಡಿ ಹೊರಬರೋಣ ಅಂತ ಹೇಳಿ ಕೀಯಾ ಕಾರಿನಲ್ಲಿ ಹೋಗಿ ಊಟ ಮಾಡಿಕೊಂಡು ಚಿಕ್ಕಬಳ್ಳಾಪುರ ಕಡೆಯಿಂದ ದೇವನಹಳ್ಳಿ ಕಡೆಗೆ ವಾಪಾಸ್ಸು ಬರುವಾಗ ರಸ್ತೆ ಡಿವೈಡರ್ ಕಾಣದ ಹಿನ್ನೆಲೆಯಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಕ್ಕದ ರಸ್ತೆಯಲ್ಲಿ ಬರುತ್ತಿದ್ದ ಬಸ್ ಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ರಭಸಕ್ಕೆ ಕಾರು ಪಕ್ಕದ ರಸ್ತೆಯಲ್ಲಿ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಗೆ ಡಿಕ್ಕಿ ಹೊಡೆದ ಪರಿಣಾಮ, ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಅಪಘಾತ ರಭಸಕ್ಕೆ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿವೆ. ಬಸ್ ನ ಮುಂಭಾಗ ಕುಳಿತಿದ್ದ ಒಬ್ಬ ಮಹಿಳೆಯಗೂ ಗಂಭೀರ ಗಾಯಗಳಾಗಿವೆ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆಮೃತ ಮೂವರು ಊರಿನಲ್ಲಿ ಎಲ್ಲರೊಟ್ಟಿಗೂ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದರು. ಮೃತ ಮೋಹನ್ ಹೆಂಡತಿ ಎರಡನೇ ಮಗುವಿಗೆ ಎಂಟು ತಿಂಗಳ ಗರ್ಭಿಣಿ ಆಗಿದ್ದಳು. ಇನ್ನೂ ಸುಮನ್ ಮತ್ತು ಸಾಗರ್ ಗೆ ಮದುವೆ ಆಗಿರಲಿಲ್ಲ. ಮೋಹನ್‍ಗಾಗಿ ಕಾಯುತ್ತಿದ್ದ ತುಂಬು ಗರ್ಭಿಣಿ, ಗಂಡ ಸಾವಿನ ಸುದ್ದಿ ಕೇಳಿ ಶಾಕ್ ಆಗಿದ್ದಾರೆ.
ಬಿಳಿಪಟ್ಟಿ ಇಲ್ಲದೆ ಇರುವುದೇ ಅಪಘಾತಕ್ಕೆ ಕಾರಣ: ಇಷ್ಟೇಲ್ಲಾ ಅವಘಡಕ್ಕೆ ಮೂಲ ಕಾರಣ ರಸ್ತೆಯಲ್ಲಿ ಬಿಳಿ ಪಟ್ಟಿ ಇಲ್ಲದೆ ಇರುವುದು ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕುತ್ತಿದ್ದಾರೆ. ರಸ್ತೆ ಕ್ರಾಸ್ ಮಾಡಲು ಕೆಲವೇ ಕೆಲವು ಅಡಿ ಮಾತ್ರ ಇದೆ. ಆದರೆ ರಸ್ತೆಯ ತಿರುವ ಕಾಣದೆ ಈ ರೀತಿ ಭೀಕರ ಅಪಘಾತವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.ಘಟನಾ ಸ್ಥಳಕ್ಕೆ ಟ್ರಾಫಿಕ್ ಜಂಟಿ ಆಯುಕ್ತರಾದ ಕಾರ್ತಿಕ್ ರೆಡ್ಡಿ ಭೇಟಿ ನೀಡಿದ್ದು ಸ್ಥಳ ಪರಿಶೀಲನೆ ಮಾಡಿದ್ದಾರೆ. ಇನ್ನೂ ಪ್ರಕರಣ ಕುರಿತು ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪೋಟೋ 6 * 7 * 8 : ಅಪಘಾತದಲ್ಲಿ ಮೃತಪಟ್ಟ ಒಂದೇ ಗ್ರಾಮದ ಯುವಕರುಪೋಟೋ 9 : ಅಪಘಾತಕ್ಕೀಡಾದ ಬಸ್
ಪೋಟೋ 10 : ಅಪಘಾತಕ್ಕೀಡಾದ ಕಾರು