ಹುಬ್ಬಳ್ಳಿ:
ಕೊಲ್ಹಾಪುರದ ಹೆಸರಾಂತ ಗಾಯಕರ ತಂಡದ ನಾಯಕ ರಾಜೇಂದ್ರ ಮೆಸ್ತ್ರಿ ಅವರ ದಿಲ್ಜಲೆ ಚಿತ್ರದ ''''''''ಮೇರೆ ಮುಲ್ಕ್ ಮೇರಾ ದೇಶ್ ಮೇರಾ ಹೇ ವತನ್'''''''' ಮೂಲಕ ಪ್ರಾರಂಭವಾದ ಸಂಗೀತ ಸಂಜೆಯಲ್ಲಿ ದೇಸ್ ರಂಗೀಲಾ, ಐ ಲವ್ ಮೈ ಇಂಡಿಯಾ, ಏ ಮೇರೇ ವತನ್ ಕೆ ಲೋಗೋ ಹಾಡುಗಳು ಭಾವನಾತ್ಮಕತೆಯ ಮೂಲಕ ಮನಮುಟ್ಟಿದವು.
ಕಲಾವಿದ ಮಹೇಶ ಸೊನೂಲೆ ಕಂಠಸಿರಿಯಲ್ಲಿ ಪ್ರಸ್ತುತವಾದ ಜಿಂದಗಿ ಮೌತ್‌ನ ಬನ್ ಜಾಯೆ, ಸರ್ಫೋಶ್ ಕಿ ತಮನ್ನಾ ಹಾಡು ಗಮನ ಸೆಳೆಯಿತು. ಸೀತಾರಾಮ ಜಾಧವ್ ಅವರು ಭಾರತ್ ಹಮ್ಕೋ ಜಾನ್ ಸೇ ಪ್ಯಾರಾ ಹೈ, ಮಾ ತುಜೇ ಸಲಾಂ, ಸಾರೇ ಜಹಾಂಸೇ ಅಚ್ಛಾ ಹಾಡುಗಳು ಪ್ರೇಕ್ಷಕರಲ್ಲಿ ದೇಶಭಕ್ತಿಯ ರೋಮಾಂಚಕತೆ ಉಂಟು ಮಾಡುವಲ್ಲಿ ಯಶಸ್ವಿಯಾದವು.ಕಾರ್ಯಕ್ರಮದ ಕೊನೆಯಲ್ಲಿ ಗಾಯಕರಾದ ವೈದೇಹಿ ಜಾಧವ ಹಾಗೂ ಅಂಜಲಿ ಮುಳೆ ಪ್ರಸ್ತುತಪಡಿಸಿದ ವಂದೇಮಾತರಂ ಹಾಡಿಗೆ ಪ್ರೇಕ್ಷಕರೆಲ್ಲರೂ ಎದ್ದು ನಿಂತು ಭಾರತಾಂಬೆಗೆ ಗೌರವ ಸಲ್ಲಿಸಿ ಘೋಷಣೆ ಕೂಗಿದರು.
ಈ ವೇಳೆ ಆರ್‌ಎಸ್‌ಎಸ್ ಉತ್ತರ ಪ್ರಾಂತ ಸಂಪರ್ಕ ಪ್ರಮುಖ ಸುಬೇದಾರ ಸುಧೀರಸಿಂಹ ಘೋರ್ಪಡೆ ಮಾತತಾಡಿ, ಸ್ವಾತಂತ್ರ್ಯ ಕೇವಲ ಉಪಾವಾಸ ಸತ್ಯಾಗ್ರಹದಿಂದ ಸಿಕ್ಕಿಲ್ಲ. ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಝಾನ್ಸಿ ಲಕ್ಷ್ಮೀಬಾಯಿ ಸೇರಿದಂತೆ ಅನೇಕರ ತ್ಯಾಗ, ಬಲಿದಾನದಿಂದ ಲಭಿಸಿದೆ ಎಂದರು.ಫೌಂಡೇಶನ್ ಅಧ್ಯಕ್ಷ ವೆಂಕಟೇಶ ಕಾಟವೆ ಮಾತನಾಡಿ, ದೇಶ ಭಕ್ತಿ ಗೀತೆಗಳಿಂದ ದೇಶ ಭಕ್ತಿ ತುಂಬಿಸುತ್ತಿದೆ. ಇದು ಹೋರಾಟಗಾರರನ್ನು ಸ್ಮರಿಸುವ ಕಾರ್ಯಕ್ರಮವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಅಶೋಕ ಕಾಟವೆ ಮಾತನಾಡಿದರು. ಸಂಗೀತ ಕಾರ್ಯಕ್ರಮಕ್ಕೂ ಮೊದಲು ಭಾರತಮಾತೆ ಹಾಗೂ ಸಂಗೊಳ್ಳಿ ರಾಯಣ್ಣನ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು. ಇದೇ ವೇಳೆ ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು. ಸುನೀಲ ಕಾಟವೆ, ಸಚಿನ ಕಾಟವೆ, ಮೋಹನ ಚಿತಲೆ, ಅಣ್ಣಪ್ಪ ಗೋಕಾಕ, ಸುಭಾಷಸಿಂಗ್ ಜಮಾದಾರ ಸೇರಿದಂತೆ ಹಲವರಿದ್ದರು.