ಸ್ಟಾರ್ಟ್‌ಅಪ್‌ಗಳಿಗೆ ಹೂಡಿಕೆಗಾಗಿ 9ರಿಂದ ಟೈ ಗ್ಲೋಬಲ್ ಶೃಂಗಸಭೆ

KannadaprabhaNewsNetwork |  
Published : Dec 06, 2024, 08:56 AM IST
PC 2 | Kannada Prabha

ಸಾರಾಂಶ

ತಂತ್ರಜ್ಞಾನ ಕ್ಷೇತ್ರದ ಸ್ಟಾರ್ಟ್‌ ಅಪ್‌ಗಳಲ್ಲಿ ಬಂಡವಾಳ ಹೂಡಿಕೆ ಮಾಡಲು ಆಯೋಜಿಸಿರುವ ಪ್ರಸಕ್ತ ವರ್ಷದ ಜಾಗತಿಕ ಉದ್ದಿಮೆದಾರರ ಸಮಾವೇಶ ‘ಟೈ ಗ್ಲೋಬಲ್‌ ಸಮ್ಮಿಟ್‌-2024’ ಡಿಸೆಂಬರ್‌ 9ರಿಂದ 11ರವರೆಗೆ ಬೆಂಗಳೂರಿನಲ್ಲಿ ಮತ್ತು ಡಿ.12ರಂದು ಮೈಸೂರಿನಲ್ಲಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ತಂತ್ರಜ್ಞಾನ ಕ್ಷೇತ್ರದ ಸ್ಟಾರ್ಟ್‌ ಅಪ್‌ಗಳಲ್ಲಿ ಬಂಡವಾಳ ಹೂಡಿಕೆ ಮಾಡಲು ಆಯೋಜಿಸಿರುವ ಪ್ರಸಕ್ತ ವರ್ಷದ ಜಾಗತಿಕ ಉದ್ದಿಮೆದಾರರ ಸಮಾವೇಶ ‘ಟೈ ಗ್ಲೋಬಲ್‌ ಸಮ್ಮಿಟ್‌-2024’ ಡಿಸೆಂಬರ್‌ 9ರಿಂದ 11ರವರೆಗೆ ಬೆಂಗಳೂರಿನಲ್ಲಿ ಮತ್ತು ಡಿ.12ರಂದು ಮೈಸೂರಿನಲ್ಲಿ ನಡೆಯಲಿದೆ ಎಂದು ಸಾಫ್ಟ್‌ವೇರ್‌ ಟೆಕ್ನಾಲಜಿ ಪಾರ್ಕ್‌ ಆಫ್‌ ಇಂಡಿಯಾ (ಎಸ್‌ಟಿಪಿಐ) ಬೆಂಗಳೂರು ವಲಯ ನಿರ್ದೇಶಕ ಡಾ। ಸಂಜಯ್‌ ತ್ಯಾಗಿ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ತಂತ್ರಜ್ಞಾನ ಕ್ಷೇತ್ರದ ಸ್ಟಾರ್ಟ್‌ ಅಪ್‌ಗಳಲ್ಲಿ ಜಾಗತಿಕ ಉದ್ದಿಮೆದಾರರು ಹೂಡಿಕೆಗೆ ಆಕರ್ಷಿಸುವ ಮೂಲಕ ಉತ್ತೇಜನ ನೀಡುವುದು ಈ ಶೃಂಗದ ಉದ್ದೇಶವಾಗಿದೆ. ನವೀನ ವ್ಯಾಪಾರ ಮಾದರಿಗಳು, ಉತ್ತಮ ಮಾರುಕಟ್ಟೆ ಬೇಡಿಕೆ ಮತ್ತು ಐಪಿ ಆಧಾರದ ಮೇಲೆ ಉನ್ನತ ಸ್ಟಾರ್ಟ್-ಅಪ್‌ಗಳನ್ನು ಗುರುತಿಸಲಾಗುತ್ತದೆ. ಅವುಗಳಲ್ಲಿ ಬಂಡವಾಳ ಹೂಡುವ ಅವಕಾಶವನ್ನು ಶೃಂಗ ದೊರಕಿಸುತ್ತದೆ. ಜಾಗತಿಕ ಉದ್ದಿಮೆದಾರರಿಂದ ಸುಮಾರು ₹100 ಕೋಟಿ ಈಕ್ವಿಟಿ ಅನುದಾನ ದೊರೆಯುವ ವಿಶ್ವಾಸವಿದೆ ಎಂದು ಹೇಳಿದರು.

ಒಟ್ಟಾರೆ ಯುಎಸ್‌ನ 50 ದೊಡ್ಡ ಬಂಡವಾಳದಾರರ ಸೇರಿದಂತೆ ಸುಮಾರು 750 ಹೂಡಿಕೆದಾರರು ಈ ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸಮಾವೇಶದಲ್ಲಿ ಭಾಗವಹಿಸುವ ಸ್ಟಾರ್ಟ್‌ ಅಪ್‌ಗಳಲ್ಲಿ ಟಾಪ್‌ 10 ಸ್ಟಾರ್ಟ್‌ ಅಪ್‌ಗಳನ್ನು ಗುರುತಿಸಿ ಮೌಲ್ಯಮಾಪನ ಮಾಡುತ್ತದೆ. ಟಾಪ್‌ ಮೂರು ಸ್ಟಾರ್ಟ್‌ ಅಪ್‌ಗಳಾಗಿ ಆಯ್ಕೆಯಾಗುವವರಿಗೆ ತಲಾ ₹50 ಲಕ್ಷ ಅನುದಾನದ ಜೊತೆಗೆ ಅವರ ಬೆಳವಣಿಗೆಗೆ ಮಾರ್ಗದರ್ಶನ ಕೂಡ ದೊರೆಯಲಿದೆ ಎಂದು ಟೈ ಬೆಂಗಳೂರಿನ ಕಾರ್ಯಕಾರಿ ನಿರ್ದೇಶಕಿ ರಿತು ಶರ್ಮಾ ವಿವರಿಸಿದರು.

ಟಿಜಿಎಸ್‌ 100ನ ಅಧ್ಯಕ್ಷ ನವೀನ್‌ ಗುಪ್ತಾ, ಟೈ ಬೆಂಗಳೂರು ಮುಖ್ಯಸ್ಥ ಮದನ್‌ ಪದಕಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!