ನೀರು ಬಿಡದ ಅಧಿಕಾರಿ ಕಟ್ಟಿ ಹಾಕಿ, ಏನೇ ಬಂದರೂ ನಾನಿರುವೆ

KannadaprabhaNewsNetwork |  
Published : Feb 14, 2026, 03:15 AM IST
ಕೆರೂರ | Kannada Prabha

ಸಾರಾಂಶ

ಸಮರ್ಪಕ ನೀರು ಬಿಡದ ಅಧಿಕಾರಿಗಳನ್ನು ಕಟ್ಟಿಹಾಕಿ ಏನೇ ಬಂದರೂ ನಾನಿದ್ದೇನೆ ಎಂದು ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಜೆ.ಟಿ.ಪಾಟೀಲ ಗುಡುಗಿದರು.

ಕನ್ನಡಪ್ರಭವಾರ್ತೆ ಕೆರೂರ

ಸಮರ್ಪಕ ನೀರು ಬಿಡದ ಅಧಿಕಾರಿಗಳನ್ನು ಕಟ್ಟಿಹಾಕಿ ಏನೇ ಬಂದರೂ ನಾನಿದ್ದೇನೆ ಎಂದು ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಜೆ.ಟಿ.ಪಾಟೀಲ ಗುಡುಗಿದರು.

ನೀರಿಲ್ಲದೆ ಬೆಳೆಗಳು ಒಣಗುತ್ತಿವೆ. ಸಮರ್ಪಕ ನೀರು ಬರುತ್ತಿಲ್ಲವೆಂದು ದೂರಿದ ನರೆನೂರ ಗ್ರಾಮದ ರೈತರ ದೂರು ಕೇಳಿ ಕುಪಿತರಾದ ಶಾಸಕರು ಅಲ್ಲಿಯೇ ಇದ್ದ ಕೆಬಿಜಿಎನ್ಎಲ್ ಎಇಇ ವಿಶ್ವನಾಥ ನೀಲನ್ನವರ, ಎಇ ನವೀನ ಅವರನ್ನು ಕಾರಣ ಕೇಳಿದಾಗ ಅವರ ಉತ್ತರ ಸಮಾಧಾನ ತರದೇ ಇದ್ದಾಗ ಮೇಲಾಧಿಕಾರಿ ಜಯಣ್ಣ ಅವರ ಜೊತೆ ದೂರವಾಣಿಯಲ್ಲಿ ಮಾತನಾಡಿ ಅವರಿಂದಲೂ ಸಮರ್ಪಕ ಉತ್ತರ ದೊರೆಯದಿದ್ದಾಗ ರೈತರನ್ನುದ್ದೇಶಿಸಿ ಮಾತನಾಡಿ, ನೀರು ನಿಂತು ಬೆಳೆಹಾನಿಯಾಗಿದ್ದು, ಬೆಳೆ ಪರಿಹಾರ ಕೊಡಿಸಿ, ಇಲ್ಲದಿದ್ದರೇ ನಿಮ್ಮ ವೇತನದಲ್ಲಿ ಕೊಡಿ ಎಂದು ಸಂಬಂಧಿಸಿದ ಅಧಿಕಾರಿಗಳ ಮೇಲೆ ಹರಿಹಾಯ್ದುರು. ನರೆನೂರ ಗ್ರಾಮದಲ್ಲಿ ಗುರುವಾರ ₹60 ಲಕ್ಷ ವೆಚ್ಚದ ನರೆನೂರ-ಸಾಗನೂರ ರಸ್ತೆಯ ಸುಧಾರಣೆ ಭೂಮಿಪೂಜಾ ಕಾರ್ಯಕ್ರಮ ನೆರವೇರಿಸಿ ರೈತರ ಅಹವಾಲು ಸ್ವೀಕರಿಸಿ ಮಾತನಾಡಿ, ರೈತರಿಗೆ ತೊಂದರೆಯಾಗಲು ಬಿಡುವುದಿಲ್ಲ, ಈಗ ಅಧಿಕಾರಿಗಳಿಗೆ ತಾಕೀತು ಮಾಡಿದ್ದೇನೆ. ಆತಂಕ ಪಡಬಾರದು ಎಂದು ಮನವಿ ಮಾಡಿದರು.ಗುತ್ತಿಗೆದಾರ ಪ್ರವೀಣ ಚಿಕ್ಕೂರ, ಗಣ್ಯರಾದ ಶೇಖರ ರಾಠೋಡ, ಅಶೋಕ ಕೊಪ್ಪದ, ಭರಮಪ್ಪ ಉದಗಟ್ಟಿ, ನಿಂಗಪ್ಪ ಬೆಳಗಂಟಿ, ಲಾಲಸಾಬ ನದಾಫ, ಮಲ್ಲಪ್ಪ ಪೂಜಾರ, ಧರ್ಮಣ್ಣ ಭಗವತಿ, ಯಮನಪ್ಪ ಹವಳಕೋಡ, ವೆಂಕಟೇಶ ಜಂಬಗಿ ಮುಂತಾದವರು ಇದ್ದರು.ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಗ್ಯಾರಂಟಿ ಯೋಜನೆಗಳ ಜೊತೆಗೆ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಸಮಾಜದ ಎಲ್ಲ ವರ್ಗದ ಜನರ ಅಭಿವೃದ್ಧಿ ನನ್ನ ಕನಸಾಗಿದ್ದು, ಸರ್ಕಾರದ ಎಲ್ಲ ಯೋಜನೆಗಳನ್ನು ಸಮರ್ಪಕವಾಗಿ ಕ್ಷೇತ್ರಕ್ಕೆ ತರುತ್ತೇನೆ. ಸಾರ್ವಜನಿಕರು ಸದ್ಬಳಕೆಗೆ ಮುಂದಾಗಬೇಕು.

-ಜೆ.ಟಿ.ಪಾಟೀಲ, ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಕಾಲದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯಾಗಲಿ
ಕಾರ್ಮಿಕ ದ್ರೋಹವನ್ನು ಸಹಿಸಲಾಗದು: ಬಿ.ಎಂ. ಭಟ್‌