ಸುಬ್ರಮಣಿ ಸಿದ್ದಾಪುರಸಿದ್ದಾಪುರ: ದೇಶದಲ್ಲಿ ಹುಲಿ ಸಂರಕ್ಷಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಪ್ರಾಜೆಕ್ಟ್ ಟೈಗರ್, ವನ್ಯಜೀವಿ ಕಾರಿಡಾರ್‌ಗಳ ನಿರ್ಮಾಣ, ಅರಣ್ಯ ಪ್ರದೇಶಗಳ ವಿಸ್ತರಣೆ ಆಕ್ರಮ ಬೇಟೆ ಸೇರಿದಂತೆ ಹಲವಾರು ಕ್ರಮಗಳನ್ನು ಪರಿಣಾಮಕಾರಿಯಾಗಿ ರೂಪಿಸಿಲಾಗಿದೆ.
ಹುಲಿ ಸಂರಕ್ಷಣೆಗೆ ಅರಣ್ಯದಲ್ಲಿ ಹಲವು ಕ್ರಮಗಳನ್ನು ಕೈಗೊಂಡರೂ ಅರಣ್ಯದಂಚಿನ ಪ್ರದೇಶಗಳಲ್ಲಿ ಮಾತ್ರ ಹುಲಿ ದಾಳಿ ನಡೆಯುತ್ತಿದೆ. ಹುಲಿಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ಮಾನವ–ವನ್ಯಜೀವಿ ಸಂಘರ್ಷವೂ ಹೆಚ್ಚಾಗುತ್ತಿದೆ. ಗ್ರಾಮದ ಸುತ್ತಮುತ್ತಲಿನ ನಿವಾಸಿಗಳ ಜಾನುವಾರುಗಳು ಹುಲಿ ದಾಳಿಗೆ ಬಲಿಯಾಗುತ್ತಿರುವ ಘಟನೆಗಳು ವರದಿಯಾಗುತ್ತಿದ್ದು, ಜನರು ಆತಂಕದಲ್ಲಿ ದಿನ ಕಳೆಯುವಂತಾಗಿದೆ.
ಹುಲಿ ದಾಳಿಗೆ ಜಾನುವಾರುಗಳು ಬಲಿ:ಹುಲಿಗಳು ಆಹಾರಕ್ಕಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದು, ಅರಣ್ಯದಂಚಿನ ಗ್ರಾಮಗಳಾದ ಮಾಲ್ದಾರೆ, ಬಾಣಾಂಗಾಲ ಗೂಡ್ಲುರು ಶ್ರೀಮಂಗಲ ತಿತಿಮತಿ ಮುಂತಾದ ಪ್ರದೇಶದಲ್ಲಿ ನಿವಾಸಿಗಳು ಸಾಕಿದ ಹಸು, ಎಮ್ಮೆ, ಕರು ಮೊದಲಾದ ಸಾಕು ಪ್ರಾಣಿಗಳನ್ನು ಹುಲಿಗಳು ತಿಂದು ಹಾಕುತ್ತಿವೆ. ಕಾಫಿ ತೋಟಗಳಲ್ಲಿ ಕೂಡ ಹುಲಿ ಸಂಚಾರ ಕಂಡುಬರುತ್ತಿದ್ದು, ಕಾರ್ಮಿಕರು ಬೆಳೆಗಾರರು ಆತಂಕ ಪಡುವಂತಾಗಿದೆ. ಅಗತ್ಯವಿದ್ದರೆ ಸರ್ಕಾರದಿಂದ ಅನುಮತಿ ಪಡೆದು, ಜನವಸತಿ ಪ್ರದೇಶಗಳಿಗೆ ಪ್ರವೇಶಿಸಿದ ಹುಲಿ ಅಥವಾ ಕಾಡಾನೆಗಳನ್ನು ಸುರಕ್ಷಿತವಾಗಿ ಸೆರೆ ಹಿಡಿದು ಮರಳಿ ಕಾಡಿಗೆ ಬಿಡುವ ಕಾರ್ಯವೂ ನಡೆಯುತ್ತಿದೆ. ಈ ಎಲ್ಲ ಕ್ರಮಗಳ ಮೂಲಕ ಅರಣ್ಯ ಇಲಾಖೆ ವನ್ಯಜೀವಿ ಸಂರಕ್ಷಣೆ ಜತೆಗೆ ಮಾನವ–ವನ್ಯಜೀವಿ ಸಂಘರ್ಷವನ್ನು ಕಡಿಮೆ ಮಾಡುವತ್ತ ಗಂಭೀರ ಪ್ರಯತ್ನ ನಡೆಸಲಾಗುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ವಿರಾಜಪೇಟೆ ಪೊನ್ನಂಪೇಟೆ ಮತ್ತು ತಿತಿಮತಿ ವಲಯಗಳಲ್ಲಿ 2024-25ನೇ ಸಾಲಿನಲ್ಲಿ 57 ಜಾನುವಾರುಗಳ ಮೇಲೆ ಹುಲಿ ದಾಳಿ ನಡೆಸಿದ್ದು, 15 ಲಕ್ಷದ 91 ಸಾವಿರ ಹಾಗೂ 2025-26 ಸಾಲಿನಲ್ಲಿ 48 ಪ್ರಕರಣಗಳು ದಾಖಲಾಗಿದ್ದು, 15,51, 600 ರು.ವನ್ನು ಅರಣ್ಯ ಇಲಾಖೆಯು ಜಾನುವಾರುಗಳ ವಾರಸುದಾರರಿಗೆ ಪರಿಹಾರವಾಗಿ ನೀಡಿದೆ.
ಅರಣ್ಯ ಇಲಾಖೆ ಹುಲಿ ಆಕ್ರಮಣಕ್ಕೆ ಹಲವು ಅಧುನಿಕ ಕ್ರಮಗಳನ್ನು ಕೈಗೊಂಡಿದ್ದು, ಹುಲಿ ಚಲನವಲನ ಪತ್ತೆಹಚ್ಚಲು
ವನ್ಯಜೀವಿಗಳ ದಾಳಿಯಿಂದ ಸಾರ್ವಜನಿಕರನ್ನು ರಕ್ಷಿಸುವ ಉದ್ದೇಶದಿಂದ ಅರಣ್ಯ ಇಲಾಖೆ ಹಲವು ಸಮಗ್ರ ಹಾಗೂ ತಂತ್ರಜ್ಞಾನಾಧಾರಿತ ಕ್ರಮಗಳನ್ನು ಕೈಗೊಂಡಿದೆ. ಈ ಭಾಗವಾಗಿ ಮ್ಯಾಕ್ (MAC) ತಂಡಗಳನ್ನು ರಚಿಸಲಾಗಿದ್ದು, ಹುಲಿ ಸೇರಿದಂತೆ ಅಪಾಯಕಾರಿ ವನ್ಯಜೀವಿಗಳ ಇರುವಿಕೆ ಕಂಡುಬಂದ ತಕ್ಷಣ ಸ್ಥಳೀಯರಿಗೆ ಅಗತ್ಯ ಮುನ್ನೆಚ್ಚರಿಕೆ ಮಾಹಿತಿ ನೀಡಲಾಗುತ್ತಿದೆ.
-ಜಗನ್ನಾಥ್ ,ಡಿಎಫ್ ಒ ವಿರಾಜಪೇಟೆ
ಜೀವ ಭಯದಲ್ಲಿ ಕೆಲಸ ಮಾಡುವ ಆತಂಕವನ್ನು ಸೃಷ್ಟಿ ಮಾಡಿದೆ ಸರಕಾರಗಳು ತಕ್ಷಣವೇ ಈ ಹುಲಿ ದಾಳಿಯ ಗಂಭೀರತೆಯನ್ನು ಅರಿತು ಇದಕ್ಕೆ ಶಾಶ್ವತ ಪರಿಹಾರ ಮಾಡಬೇಕಿದೆ.
ಹುಲಿ ಸಂರಕ್ಷಣೆ ಭಾಗವಾಗಿ ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಕ್ಯಾಮೆರಾ ಟ್ರ್ಯಾಪ್‌ಗಳನ್ನು ಅಳವಡಿಸಲಾಗಿದೆ. ಪ್ರಸ್ತುತ ರಾಷ್ಟ್ರೀಯ ಹುಲಿ ಗಣತಿ ಕಾರ್ಯ ನಡೆಯುತ್ತಿದೆ. ಕ್ಯಾಮೆರಾಗಳಲ್ಲಿ ಸೆರೆಯಾದ ಹುಲಿಗಳ ಮಾಹಿತಿಯನ್ನು ಸಂಗ್ರಹಿಸಿ ಬೆಂಗಳೂರಿಗೆ ಕಳುಹಿಸಲಾಗುತ್ತಿದೆ. ಅಲ್ಲಿ ಮಾಹಿತಿಯನ್ನು ವಿಶ್ಲೇಷಣೆ ಮಾಡಿ, ಹೊಸ ಹುಲಿಗಳು ಪತ್ತೆಯಾದರೆ ಅವುಗಳಿಗೆ ಹೊಸ ಗುರುತಿನ ಸಂಖ್ಯೆ (ಐಡಿ) ನೀಡಲಾಗುತ್ತದೆ. ಪ್ರಸ್ತುತ ನಾಗರಹೊಳೆ ಅರಣ್ಯದಲ್ಲಿ 149 ಹುಲಿಗಳಿವೆ.