ಕಾಂಗ್ರೆಸ್‌ ಸಮಾವೇಶಕ್ಕೆ ಭಾರೀ ಬಿಗಿ ಭದ್ರತೆ

KannadaprabhaNewsNetwork |  
Published : Dec 05, 2024, 12:33 AM IST
4ಎಚ್ಎಸ್ಎನ್20ಎ : ಸಮಾವೇಶ ನಡೆಯಲಿರುವ ವೇದಿಕೆ. | Kannada Prabha

ಸಾರಾಂಶ

ಹಾಸನ ನಗರದ ಹೊರವಲಯದ ಕೃಷ್ಣ ನಗರದಲ್ಲಿ ಗುರುವಾರ ಕಾಂಗ್ರೆಸ್‌ ಪಕ್ಷದ ಜನಕಲ್ಯಾಣ ಸ್ವಾಭಿಮಾನಿ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಆದಿಯಾಗಿ ಹಲವು ಸಚಿವರು ಪಾಲ್ಗೊಳ್ಳಲಿದ್ದಾರೆ. ಸಮಾವೇಶಕ್ಕೆ ಈಗಾಗಲೇ ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದು, ಖುದ್ದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್. ರಾಜಣ್ಣ ನೇತೃತ್ವದಲ್ಲಿ ಸಿದ್ಧತೆಗಳು ಪೂರ್ಣಗೊಂಡಿವೆ. ಪೊಲೀಸ್ ಇಲಾಖೆಯಿಂದ ಐವರು ಎಸ್ಪಿ, ಆರು ಎಎಸ್ಪಿ, ೧೨ ಡಿವೈಎಸ್ಪಿ, ೩೦ಕ್ಕೂ ಹೆಚ್ಚು ಇನ್ಸ್‌ಪೆಕ್ಟರ್‌, ೮೦ಕ್ಕೂ ಹೆಚ್ಚು ಪಿಎಸ್‌ಐ ಹಾಗೂ ಸುಮಾರು ೨೦೦೦ಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಿ ಭದ್ರತೆ ವ್ಯವಸ್ಥೆ ಕೊಡಲಾಗಿದೆ.

ಕನ್ನಡಪ್ರಭ ವಾರ್ತೆ ಹಾಸನ

ಹಾಸನ ನಗರದ ಹೊರವಲಯದ ಕೃಷ್ಣ ನಗರದಲ್ಲಿ ಗುರುವಾರ ಕಾಂಗ್ರೆಸ್‌ ಪಕ್ಷದ ಜನಕಲ್ಯಾಣ ಸ್ವಾಭಿಮಾನಿ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಆದಿಯಾಗಿ ಹಲವು ಸಚಿವರು ಪಾಲ್ಗೊಳ್ಳಲಿದ್ದಾರೆ. ಸಮಾವೇಶಕ್ಕೆ ಈಗಾಗಲೇ ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದು, ಖುದ್ದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್. ರಾಜಣ್ಣ ನೇತೃತ್ವದಲ್ಲಿ ಸಿದ್ಧತೆಗಳು ಪೂರ್ಣಗೊಂಡಿವೆ.

ಹಾಸನದ ಅರಸೀಕೆರೆ ರಸ್ತೆಯ ಎಸ್‌ ಎಂ ಕೃಷ್ಣ ಬಡಾವಣೆಯ ಕ್ರೀಡಾಂಗಣದಲ್ಲಿ ನಡೆಯಲಿರುವ ಸಮಾವೇಶಕ್ಕಾಗಿ ಬೃಹತ್ ವೇದಿಕೆ ಸಿದ್ಧತೆ ಪೂರ್ಣಗೊಂಡಿದೆ. ಎಲ್ಲೆಡೆ ಕೈ ನಾಯಕರ ಫ್ಲೆಕ್ಸ್ ಹಾಗು ಬ್ಯಾನರ್‌ಗಳು ರಾರಾಜಿಸುತ್ತಿದೆ. ಜನಕಲ್ಯಾಣ ಸ್ವಾಭಿಮಾನಿ ಸಮಾವೇಶ ಎಂಬ ಹೆಸರಿನಲ್ಲೇ ಬಹುತೇಕ ಫ್ಲೆಕ್ಸ್ ಬ್ಯಾನರ್‌ ಪ್ರಿಂಟ್ ಮಾಡಲಾಗಿದೆ. ಫ್ಲೆಕ್ಸ್‌ನಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಭಾವಚಿತ್ರಗಳು ದೊಡ್ಡದಾಗಿ ರಾರಾಜಿಸುತ್ತಿವೆ. ಬಿ.ಎಂ. ರಸ್ತೆ ಉದ್ದಲಕ್ಕೂ ಕಾಂಗ್ರೆಸ್ ನಾಯಕರ ಮುಖಂಡರ ಫ್ಲೆಕ್ಸ್ ಮತ್ತು ಬ್ಯಾನರ್ ಹಾಗೂ ಪಕ್ಷದ ಬಾವುಟ ರಾರಾಜಿಸುತ್ತಿವೆ. ನಗರದ ಅರಸೀಕೆರೆ ರಸ್ತೆ ತುಂಬೆಲ್ಲಾ ಫ್ಲೆಕ್ಸ್‌ಗಳು ಆವರಿಸಿವೆ.

ಇನ್ನು ಸಮಾವೇಶ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ಭದ್ರತೆ ಒದಗಿಸಲಾಗಿದೆ. ಐವರು ಎಸ್ಪಿ, ಆರು ಎಎಸ್ಪಿ, ೧೨ ಡಿವೈಎಸ್ಪಿ, ೩೦ಕ್ಕೂ ಹೆಚ್ಚು ಇನ್ಸ್‌ಪೆಕ್ಟರ್‌, ೮೦ಕ್ಕೂ ಹೆಚ್ಚು ಪಿಎಸ್‌ಐ ಹಾಗೂ ಸುಮಾರು ೨೦೦೦ಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಿ ಭದ್ರತೆ ವ್ಯವಸ್ಥೆ ಕೊಡಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ