ಚಾಂದಿನಿ ಚೌಕ್‌ನಲ್ಲಿ ಮುಸ್ಲಿಂ ಬಾಂಧವರ ಮನೆಗಳಿಗೆ ಭೇಟಿ ನೀಡಿ ಮತಯಾಚನೆ
ಭಾರತದ ಕನಸಿಗೆ ಕೊಡಲಿ ಏಟು ನೀಡಲು ಹೊರಟಿರುವ ದುಷ್ಟ ಶಕ್ತಿಗಳ ಬಗ್ಗೆ ಸದಾ ಜಾಗೃತರಾಗಿರಬೇಕು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕೃಪೆಯಿಂದ ಬೆಳದವರು ಎಲ್ಲವನ್ನು ಮರೆತು ಮನಬಂದಂತೆ ಮಾತನಾಡುತ್ತಿದ್ದು ಕಾಲವೇ ಅವರಿಗೆ ಉತ್ತರಿಸಲಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.
ನಗರದ ಮಟನ್ ಮಾರ್ಕೆಟ್ ಹಾಗೂ ಚಾಂದಿನಿ ಚೌಕ್‌ನಲ್ಲಿ ಹಲವು ಮುಸ್ಲಿಂ ಬಾಂಧವರ ಮನೆಗಳಿಗೆ ಭೇಟಿ ನೀಡಿ ಮತಯಾಚನೆ ಮಾಡಿ ಮಾತನಾಡಿದರು.‘ನನ್ನ ಗುರುತು ತೆನೆ ಹೊತ್ತ, ನಾನು ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಹಾಗೂ ಎಚ್.ಡಿ.ರೇವಣ್ಣ ಮಗ ಎಂದು ಹೇಳಿ ನನಗೆ ಮತನೀಡಿ’ ಎಂದು ಮತಯಾಚನೆ ಮಾಡಿದರು.
ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಮೈತ್ರಿ ಅಭ್ಯರ್ಥಿಯಾದ ಸಂಸದ ಪ್ರಜ್ವಲ್ ರೇವಣ್ಣ ರವರ ಸಮ್ಮುಖದಲ್ಲಿ ಈ ವೇಳೆ ನೂರಾರು ಮಂದಿ ಕಾಂಗ್ರೆಸ್ ಪಕ್ಷದಿಂದ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ನಂತರ ಮಾಧ್ಯಮದ ಜೊತೆ ಮಾತನಾಡಿ, ‘ನಗರಸಭಾ ಮಾಜಿ ಸದಸ್ಯ ಯೂನುಸ್ ನಮ್ಮ ತಂದೆ ಕಾಲದಿಂದ ಕಾಂಗ್ರೆಸ್ ಪಕ್ಷದಲ್ಲಿ ಇದ್ದು. ಶಾಸಕ ಕೆ ಎಂ ಶಿವಲಿಂಗೇಗೌಡ 2023 ನೇ ಸಾಲಿನಲ್ಲಿ ವಿಧಾನಸಭಾ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಬಂದ ನಂತರ ನಮ್ಮನ್ನು ಕಡೆಗಣಿಸಿ ಏಕ ಪಕ್ಷ ಹಾಗೂ ಸರ್ವಾಧಿಕಾರ ನಿರ್ಧಾರ ಸಹ ಮಾಡುತ್ತ ಇದುವರೆಗೂ ಬಂದಿರುವ ಕಾರಣ ನಮಗೆ ಮನಸಾಕ್ಷಿ ಒಪ್ಪದ ಕಾರಣ ಇಂದು ನಾವು ನೂರಾರು ಕಾಂಗ್ರೆಸ್ ಕಾರ್ಯಕರ್ತ ಬಂಧುಗಳು ಹಾಸನ ಸಂಸದರಾದ ಪ್ರಜ್ವಲ್ ರೇವಣ್ಣ ಅವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಆಗಿರುತ್ತೇವೆ’ ಎಂದು ತಿಳಿಸಿದರು.
ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅರಸೀಕೆರೆಯ ಮಟನ್ ಮಾರ್ಕೆಟ್ ಹಾಗೂ ಚಾಂದಿನಿ ಚೌಕ್‌ನಲ್ಲಿ ಹಲವು ಮುಸ್ಲಿಂ ಬಾಂಧವರ ಮನೆಗಳಿಗೆ ಭೇಟಿ ನೀಡಿ ಮತಯಾಚನೆ ಮಾಡಿದರು.