ಧಾರಾಕಾರವಾಗಿ ಸುರಿದ ಮಳೆಗೆ ಟಿನ್ ಶೆಡ್ ಗೋಡೆ ಕುಸಿದು ವೃದ್ಧೆ ಸಾವನ್ನಪ್ಪಿರುವ ಘಟನೆ ಗುರುಮಠಕಲ್ ತಾಲೂಕಿನ ಚಿಂತನಹಳ್ಳಿ ಗ್ರಾಮದಲ್ಲಿ ನಡೆದಿದೆ.ಚಿಂತನಹಳ್ಳಿ ಗ್ರಾಮದ ಗುಂಜಲಮ್ಮ (68) ಮೃತ ವೃದ್ಧೆ. ಈ ಘಟನೆ ರಾತ್ರಿ ವೇಳೆ ಮನೆಯಲ್ಲಿ ಮಲಗಿದ್ದಾಗ ಸಂಭವಿಸಿದೆ. ವೃದ್ಧೆಯ ಜೊತೆಗಿದ್ದ ವೃದ್ಧೆಯ ಸಹೋದರನಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಗುರುಮಠಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.