ಪಾಳೆಗಾರಿಕೆಯನ್ನು ಕೊನೆಗೊಳಿಸಿ, ಭೂರಹಿತರಿಗೆ ಭೂಮಿಯನ್ನು ಹಂಚಿದ ದೇಶದ ಮೊಟ್ಟ ಮೊದಲ ರಾಜ ಟಿಪ್ಪು. ದೇಶಕ್ಕಾಗಿ ಬ್ರಿಟಿಷರೊಂದಿಗೆ ಹೋರಾಡಿದ ಅಪ್ರತಿಮ ದೇಶಪ್ರೇಮಿ.
ಗಜೇಂದ್ರಗಡ: ಸ್ವಾಭಿಮಾನದ ಸಂಕೇತವಾಗಿರುವ ಟಿಪ್ಪು ಸುಲ್ತಾನ್ ಸ್ವಂತ ಮಕ್ಕಳನ್ನು ಬ್ರಿಟಿಷರಲ್ಲಿ ಒತ್ತೆಯಿಟ್ಟು ಹೋರಾಟ ನಡೆಸಿದ ಅಪ್ರತಿಮ ಸ್ವಾತಂತ್ರ ಹೋರಾಟಗಾರ ಎಂದು ಟಿಪ್ಪು ಸುಲ್ತಾನ್ ಕಮಿಟಿ ಅಧ್ಯಕ್ಷ ದಾವಲಸಾಬ್ ತಾಳಿಕೋಟಿ ತಿಳಿಸಿದರು.
ಪಟ್ಟಣದ ಕುಷ್ಟಗಿ ರಸ್ತೆಯಲ್ಲಿನ ಟಿಪ್ಪು ಸುಲ್ತಾನ್ ಸರ್ಕಲ್‌ನಲ್ಲಿ ಆಯೋಜಿಸಿದ್ದ ೨೭೫ನೇ ಟಿಪ್ಪು ಸುಲ್ತಾನ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪಾಳೆಗಾರಿಕೆಯನ್ನು ಕೊನೆಗೊಳಿಸಿ, ಭೂರಹಿತರಿಗೆ ಭೂಮಿಯನ್ನು ಹಂಚಿದ ದೇಶದ ಮೊಟ್ಟ ಮೊದಲ ರಾಜ ಟಿಪ್ಪು. ದೇಶಕ್ಕಾಗಿ ಬ್ರಿಟಿಷರೊಂದಿಗೆ ಹೋರಾಡಿದ ಅಪ್ರತಿಮ ದೇಶಪ್ರೇಮಿ, ಸ್ವಾಭಿಮಾನಿಯಾಗಿದ್ದ ಟಿಪ್ಪು ಎಂದಿಗೂ ಜೀ ಹುಜೂರ ಎನ್ನಲಿಲ್ಲ. ತನ್ನ ಮಕ್ಕಳನ್ನು ಒತ್ತೆ ಇಟ್ಟು ಹೋರಾಡಿದ ಸ್ವಾತಂತ್ರ‍್ಯ ಹೋರಾಟಗಾರಾಗಿದ್ದು, ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ನಾವು ಯಾರಿಗೂ ಜೀ ಹುಜೂರ ಎನ್ನದೇ ಸ್ವಾಭಿಮಾನದಿಂದ ಬೆಳೆಯಬೇಕು ಎಂದರು. ಮುಖಂಡ ಶರಣು ಪೂಜಾರ ಮಾತನಾಡಿ, ಟಿಪ್ಪು ತನ್ನ ಅಧಿಕಾರ ಅವಧಿಯಲ್ಲಿ ಸರ್ವ ಧರ್ಮ ಸಂಹಿಷ್ಣತೆ, ಸಹಬಾಳ್ವೆ ಹಾಗೂ ಭಾವೈಕ್ಯತೆಗೆ ಪ್ರಾಮುಖ್ಯತೆ ನೀಡಿದ್ದರು. ಮುಂಬರುವ ದಿನಗಳಲ್ಲಿ ಟಿಪ್ಪು ಸುಲ್ತಾನ್ ಜಯಂತಿಯನ್ನು ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ದೊಡ್ಡ ಮಟ್ಟದಲ್ಲಿ ಆಚರಿಸಲಾಗುವುದು ಎಂದರು. ಪ್ರಾಸ್ತಾವಿಕವಾಗಿ ಅಂಜುಮನ್ ಇಸ್ಲಾಂ ಕಮಿಟಿ ಕಾರ್ಯದರ್ಶಿ ಫಯಾಜ್ ತೋಟದ ಮಾತನಾಡಿ, ಕಳೆದ ೨೦೧೩ರಿಂದಲೂ ಟಿಪ್ಪು ಸುಲ್ತಾನ್ ಕಮಿಟಿ ವತಿಯಿಂದ ಯೋಧರಿಗೆ, ರೈತರಿಗೆ, ಪೌರಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ ಸನ್ಮಾನ ಸೇರಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ ಎಂದರು.ಅಂಜುಮನ್ ಇಸ್ಲಾಂ ಕಮಿಟಿ ಚೇರ್‌ಮನ್ ಹಸನಸಾಬ ತಟಗಾರ, ಪುರಸಭೆ ಮಾಜಿ ಸದಸ್ಯರಾದ ಮುರ್ತುಜಾ ಡಾಲಾಯತ್, ರಾಜು ಸಾಂಗ್ಲೀಕರ ಹಾಗೂ ಎ.ಡಿ. ಕೋಲಕಾರ, ಸುಭಾನಸಾಬ ಆರಗಿದ್ದಿ, ಎ.ಕೆ. ಕಾತರಕಿ, ಮುನ್ನಾ ಹಣಗಿ, ನಾಸಿರ ಸುರುಪುರ, ಮಾಸುಮಲಿ ಮದಗಾರ, ಮನ್ಸೂರ್ ಸೊನ್ನೇಖಾನ, ಮುರ್ತುಜಾಖಾದ್ರಿ ಮದಗಾರ, ಅಲ್ಲಾಭಕ್ಷಿ ಮುಚ್ಚಾಲಿ, ಇಮ್ರಾನ ಅತ್ತಾರ, ಆರೀಫ್ ಮನಿಯಾರ, ಮೌಸೀನ ಆರಿ ಸೇರಿ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.