ಕನ್ನಡಪ್ರಭ ವಾರ್ತೆ ಆಲೂರು
ಗ್ರಾಮದ ನಟೇಶ್ (55), ಚಿನ್ನಮ್ಮ (45) ಮೃತ ದಂಪತಿ. ಇವರು ಬ್ಯಾಂಕ್ ಹಾಗೂ ಕೈಸಾಲ ಮಾಡಿಕೊಂಡಿದ್ದರು. ಸತತ ಬೆಳೆನಷ್ಟದಿಂದಾಗಿ ಸಾಲ ತೀರಿಸಲಾಗದೆ ಪರದಾಡುತ್ತಿದ್ದರು. ಸಾಲದ ಹಣ ನೀಡುವಂತೆ ಸಾಲ ಕೊಟ್ಟವರು ಒತ್ತಾಯಿಸುತ್ತಿದ್ದರು. ಇದರಿಂದ ಕಂಗಾಲಾಗಿದ್ದ ಅವರು ಬುಧವಾರ ತಡರಾತ್ರಿ ತಮ್ಮ ಜಮೀನಿನಲ್ಲಿರುವ ತೆರೆದ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.---------
12ಎಚ್ಎಸ್ಎನ್23 ; ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತ ದಂಪತಿ ನಟೇಶ್ ಹಾಗೂ ಚಿನ್ನಮ್ಮ.