ಟಿಎಂಸಿ ಬ್ಯಾಂಕ್‌ ಕಾರ್ಯವ್ಯಾಪ್ತಿ ವಿಸ್ತರಣೆಗೆ ಚಿಂತನೆ

KannadaprabhaNewsNetwork |  
Published : Jun 19, 2026, 02:00 AM IST
ದೊಡ್ಡಬಳ್ಳಾಪುರದ ಟಿಎಂಸಿ ಬ್ಯಾಂಕಿನ ಸರ್ವ ಸದಸ್ಯರ ಸಭೆ ಅಧ್ಯಕ್ಷ ಕೆ.ಪಿ.ವಾಸುದೇವ್‌ ಅಧ್ಯಕ್ಷತೆಯಲ್ಲಿ ನಡೆಯಿತು. ಇದೇ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. | Kannada Prabha

ಸಾರಾಂಶ

ದೊಡ್ಡಬಳ್ಳಾಪುರ: ನೇಕಾರರ ಸಹಕಾರ ಬ್ಯಾಂಕ್‌ ಎಂದೇ ಖ್ಯಾತವಾಗಿರುವ ಟಿಎಂಸಿ ಬ್ಯಾಂಕ್ ಕಳೆದ ಹಣಕಾಸು ವರ್ಷದಲ್ಲಿ ₹26.4 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಕೆ.ಪಿ.ವಾಸುದೇವ್‌ ಹೇಳಿದರು

ದೊಡ್ಡಬಳ್ಳಾಪುರ: ನೇಕಾರರ ಸಹಕಾರ ಬ್ಯಾಂಕ್‌ ಎಂದೇ ಖ್ಯಾತವಾಗಿರುವ ಟಿಎಂಸಿ ಬ್ಯಾಂಕ್ ಕಳೆದ ಹಣಕಾಸು ವರ್ಷದಲ್ಲಿ ₹26.4 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಕೆ.ಪಿ.ವಾಸುದೇವ್‌ ಹೇಳಿದರು.

ಇಲ್ಲಿನ ಖಾಸಗಿ ಸಭಾಂಗಣದಲ್ಲಿ ನಡೆದ ಟೆಕ್ಸ್‌ಟೈಲ್‌ ಮ್ಯಾನುಫ್ಯಾಕ್ಚರರ್ಸ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ ನ 62ನೇ ವಾರ್ಷಿಕ ಹಾಗೂ 2025-26 ನೇ ಸಾಲಿನ ಸರ್ವ ಸದಸ್ಯರ ಮಹಾಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಟಿಎಂಸಿ ಬ್ಯಾಂಕ್ 62 ವರ್ಷಗಳನ್ನು ಪೂರೈಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಬ್ಯಾಂಕಿನ ಕಾರ್ಯಕ್ಷೇತ್ರ ಇದುವರೆಗೆ ದೊಡ್ಡಬಳ್ಳಾಪುರಕ್ಕೆ ಮಾತ್ರ ಸೀಮತವಾಗಿದ್ದು, ಈಗ ಇದರ ಕಾರ್ಯವ್ಯಾಪ್ತಿಯನ್ನು ಬೆಂಗಳೂರು ಗ್ರಾಮಾಂತರಕ್ಕೆ ವಿಸ್ತರಿಸಲು ಬೈಲಾ ತಿದ್ದುಪಡಿ ಮಾಡಲಾಗುವುದು. ಹೊಸ ಶಾಖೆ ತೆರೆಯುವ ಚಿಂತನೆ ಇದೆ. ಕಾರ್ಯಕಾರಿ ಸಮಿತಿಯ ನಿರ್ದೇಶಕರ ಸ್ಥಾನ ಕಾರಣಾಂತರಗಳಿಂದ ತೆರವಾದರೆ ಚುನಾವಣೆ ನಡೆಸದೇ ನಿರ್ದೇಶಕರ ನೇಮಕ ಕುರಿತ ಹೊಸ ಮಾರ್ಗ ಸೂಚಿಯಂತೆ ಬೈಲಾ ತಿದ್ದುಪಡಿ ಮಾಡಲಾಗುವುದು ಎಂದರು.

ನೇಕಾರರಿಗೆ ಮಗ್ಗದ ಮೇಲೆ ಸಾಲ ನೀಡುವ ಏಕೈಕ ಬ್ಯಾಂಕ್ ನಮ್ಮದಾಗಿದೆ. ಓವರ್ ಡ್ರಾಪ್ಟ್ ಸಾಲವನ್ನೂ ನೀಡಲಾಗುತ್ತಿದೆ. ಬೆಳ್ಳಿ, ಚಿನ್ನದ ಸಾಲ, ವಾಹನಗಳ ಮೇಲಿನ ಸಾಲ ಸೇರಿದಂತೆ ನೀಡಲಾಗುವ ವಿವಿಧ ಸಾಲ ಸೌಲಭ್ಯ ನೀಡಲಾಗುತ್ತಿದೆ. ಬ್ಯಾಂಕಿನ ಡಿಜಿಟಲೀಕರಣ ಮಾಡಲು ಒತ್ತು ನೀಡಲಾಗುತ್ತಿದ್ದು, ಯುಪಿಐ ಪಾವತಿ, ಕೋರ್ ಬ್ಯಾಂಕಿಂಗ್ ಮೊದಲಾದ ಸೌಲಭ್ಯಗಳನ್ನು ನೀಡಲು ಪ್ರಯತ್ನಿಸಲಾಗುವುದು ಎಂದರು.

ಶೇ.10ರಷ್ಟು ಡಿವಿಡೆಂಡ್ :

ಮಾರ್ಚ್ 2026ರ ಪ್ರಗತಿಯಂತೆ ಶೇರು ಮೊತ್ತ ₹65.84 ಲಕ್ಷ ಆಗಿದೆ. ಠೇವಣಿ ಮೊತ್ತ ₹16.07 ಕೋಟಿ ದಾಟಿದ್ದು, ₹7.11 ಕೋಟಿ ಸಾಲ ವಸೂಲಾತಿಯಾಗಿದೆ. ಅನುತ್ಪಾದಕ ಆಸ್ತಿಗಳು ಈಗ ಶೇ.1.10ಕ್ಕೆ ಇಳಿಕೆಯಾಗಿದ್ದು, ಆಡಿಟ್ ವರದಿಯಲ್ಲಿ ಎ ಶ್ರೇಣಿ ಪಡೆದಿದೆ. ಶೇ.99ರಷ್ಟುಸಾಲ ವಸೂಲಾಗುತ್ತಿದೆ. ಸದಸ್ಯರಿಗೆ ಈ ಬಾರಿಯೂ ಶೇ.10ರಷ್ಟುಡಿವಿಡೆಂಡ್ ನೀಡಲಾಗುತ್ತಿದೆ. ಸಹಕಾರ ಸಂಘಗಳ ನಿಯಮದಂತೆ ಸದಸ್ಯರು ಮತದಾನದ ಹಕ್ಕು ಪಡೆಬೇಕಾದರೆ, ಬ್ಯಾಂಕಿನಲ್ಲಿ ಕನಿಷ್ಟ2500 ಠೇವಣಿ ಅಥವಾ ₹500 ರ ಆರ್.ಡಿ ಖಾತೆ ಅಥವಾ ಉಳಿತಾಯ ಖಾತೆಯಲ್ಲಿ 12 ವ್ಯವಹಾರಗಳು ಮತ್ತು ಸರ್ವ ಸದಸ್ಯರ 5 ಸಭೆಗಳಲ್ಲಿ 2 ಕ್ಕೆ ಕಡ್ಡಾಯ ಭಾಗವಹಿಸುವಿಕೆ ಇದನ್ನು ಸದಸ್ಯರು ಪಾಲಿಸಬೇಕು. ಸದಸ್ಯರು ಹೆಚ್ಚಿನ ಹಣವನ್ನು ಬ್ಯಾಂಕಿನ ವಹಿವಾಟುಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಬ್ಯಾಂಕ್ ಮತ್ತಷ್ಟುಏಳಿಗೆಯಾಗುವಂತೆ ಸಹಕರಿಸುವಂತೆ ಮನವಿ ಮಾಡಿದರು.

ಪ್ರತಿಭಾ ಪುರಸ್ಕಾರ:

ಇದೇ ವೇಳೆ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಯೋಗ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಅಭಿನಂದಿಸಲಾಯಿತು.

ಸಭೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಡಿ.ಪ್ರಶಾಂತ್ ಕುಮಾರ್, ನಿರ್ದೇಶಕರಾದ ಪಿ.ಸಿ.ವೆಂಕಟೇಶ್, ಜಿ.ಮಂಜುನಾಥ್, ಎ.ಆರ್.ಶಿವಕುಮಾರ್, ಕೆ.ಜಿ.ಗೋಪಾಲ್, ಬಿ.ಆರ್.ಉಮಾಕಾಂತ್, ನಾರಾಯಣ್.ಎನ್.ನಾಯ್ಡು, ಅನಿಲ್.ಎಸ್, ಎ.ಗಿರಿಜಾ, ಡಾ.ಆರ್.ಇಂದಿರಾ, ವೃತ್ತಿಪರ ನಿರ್ದೇಶಕರಾದ ಎ.ಆರ್.ನಾಗರಾಜನ್, ಕೆ.ಎಂ.ಕೃಷ್ಣಮೂರ್ತಿ, ಪ್ರಭಾರಿ ವ್ಯವಸ್ಥಾಪಕರಾದ ಎ.ಎಸ್.ಪುಷ್ಪಲತಾ ಹಾಜರಿದ್ದರು.

16ಕೆಡಿಬಿಪಿ2-ದೊಡ್ಡಬಳ್ಳಾಪುರದ ಟಿಎಂಸಿ ಬ್ಯಾಂಕಿನ ಸರ್ವ ಸದಸ್ಯರ ಸಭೆ ಅಧ್ಯಕ್ಷ ಕೆ.ಪಿ.ವಾಸುದೇವ್‌ ಅಧ್ಯಕ್ಷತೆಯಲ್ಲಿ ನಡೆಯಿತು. ಇದೇ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಲ್ಕಿಯ ಸುದೀರ್ಘ ಇತಿಹಾಸ ಬಿಂಬಿಸುವ ದಿ ಲ್ಯಾಂಪ್‌ ಬೆರರ್ಸ್‌ ಕೃತಿ
ಅಳ್ನಾವರಕ್ಕೆ ಬೇಕು ಶರವೇಗದ ಅಭಿವೃದ್ಧಿ ಭಾಗ್ಯ!