ಕನ್ನಡಪ್ರಭ ವಾರ್ತೆ ವಿಜಯಪುರ
ಅಖಿಲ ಕರ್ನಾಟಕ ಮಂಟಪ, ಲೈಟ್ ಆ್ಯಂಡ್ ಸೌಂಡ್, ಸಂಗೀತ, ಡೆಕೋರೇಷನ್, ಕ್ಯಾಟ್ರಿಂಗ್, ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ ರಾಜ್ಯ ಅಧ್ಯಕ್ಷ ಜಹೂರಹಮ್ಮದ ಇಂಡೀಕರ ಮಾತನಾಡಿ, ಹೋರಾಟ ಪಕ್ಷಾತೀತವಾಗಿ, ಪ್ರಾಮಾಣಿಕವಾಗಿ ಮುನ್ನಡೆಯಬೇಕು. ಜಿಲ್ಲೆಯ ಬಡ ಜನರ ಆರೋಗ್ಯ ಮತ್ತು ಶಿಕ್ಷಣದ ಹಿತಾಸಕ್ತಿ ಅಡಗಿರುವ ಈ ಹೋರಾಟಕ್ಕೆ ನಮ್ಮ ಬೆಂಬಲ ಯಾವತ್ತು ಇರುತ್ತದೆ. ಜಿಲ್ಲೆಯ ಜನತೆ ಒಗ್ಗಟ್ಟಾಗಿ ಈ ಹೋರಾಟ ಬೆಂಬಲಿಸುವಂತೆ ಮನವಿ ಮಾಡಿದರು.
ಮುಖಂಡರಾದ ಶಬ್ಬೀರ ಪಿರಜಾದೆ, ಸೋಯಲ್ ಇಂಡೀಕರ, ಅಜಿಜದಾದಾ ಡಾಲಾಯತ, ಅಪ್ಪಣ್ಣ, ಮಹಾರಾಜ, ಅನಿಲ ಉಕ್ಕಲಿ, ಗೋವರ್ಧನ ಚಲವಾದಿ, ಶಂಖರ ವಡವಡಗಿ, ಶರಣು ಸಿಂದಗಿ, ಚಿದಾನಂದ ಗಡಿಗೇರ, ಸಂಗಪ್ಪ ಸೊಲಾಪುರ, ಸುಧಾಕರ ಕನಮಡಿ, ಪ್ರಭುಗೌಡ ಪಾಟೀಲ, ನಕುಶಾ ಹೊಸಮನಿ, ಸಂಗೀತಾ ಪುಜಾರಿ ಹೋರಾಟವನ್ನು ಬೆಂಬಲಿಸಿದರು.ಸಿದ್ದನಗೌಡ ಪಾಟೀಲ, ಭೋಗೇಶ ಸೋಲಾಪುರ, ಅಕ್ರಮ ಮಾಶಾಳಕರ, ಲಕ್ಮಣ ಹಂದ್ರಾಳ, ವಾಸುದೇವ ಸಿರೋಳ, ದಸ್ತಗೀರ ಉಕ್ಕಲಿ, ಲಕ್ಷ್ಮಣ ಕಂಬಾಗಿ, ಶೃತಿ ನಿಡೋಣಿ, ಕವಿತಾ ಪವಾರ, ಮಲ್ಲಿಕಾರ್ಜುನ ಬಟಗಿ, ರಾಜೇಶ್ವರಿ ಮಠಪತಿ, ಶಕುಂತಲಾ, ಅರವಿಂದ ಕುಲಕರ್ಣಿ, ಅನಿಲ ಹೊಸಮನಿ, ಸುರೇಶ ಬಿಜಾಪುರ, ಹೆಚ್.ಟಿ.ಭರತಕುಮಾರ ಸೇರಿ ಹಲವರು ಭಾಗವಹಿಸಿದ್ದರು.