ಕನ್ನಡಪ್ರಭ ವಾರ್ತೆ ಗದಗ
ಇಟಲಿ ಹಾಗೂ ಗ್ರೀಸ್ ದೇಶದ ತಜ್ಞರನ್ನೊಳಗೊಂಡ ಡೆಕ್ಕನ್ ಹೆರಿಟೇಜ್ ಫೌಂಡೇಶನ್‌ನ ಸದಸ್ಯರು ಭೇಟಿ ನೀಡಿ, ಲಕ್ಕುಂಡಿಯಲ್ಲಿನ ಅಭಿವೃದ್ಧಿ ಕಾರ್ಯಗಳು ಮತ್ತು ಉತ್ಖನನ ಕುರಿತು ಮಾಹಿತಿ ಸಂಗ್ರಹಿಸಿದರು.
ಡೆಕ್ಕನ್ ಹೆರಿಟೇಜ್ ಫೌಂಡೇಶನ್‌ನ ಮುಖ್ಯಸ್ಥರಾದ ಡಾ.ಹೆಲೆನ್ ನೇತೃತ್ವದ ತಜ್ಞರ ತಂಡ ಇಲ್ಲಿನ ಪ್ರಾಚ್ಯಾವಶೇಷಗಳು ಹಾಗೂ ದೇವಸ್ಥಾನಗಳ ವಾಸ್ತುಶಿಲ್ಪವನ್ನು ಕೂಲಂಕುಷವಾಗಿ ಪರಿಶೀಲಿಸಿತು. ಸುಮಾರು 3 ಎಕರೆ ಜಾಗದಲ್ಲಿ ಹರಡಿರುವ ಬಯಲು ವಸ್ತು ಸಂಗ್ರಹಾಲಯವನ್ನು ಅತ್ಯಾಧುನಿಕ ಹಾಗೂ ಪ್ರವಾಸಿ ಸ್ನೇಹಿಯನ್ನಾಗಿ ರೂಪಿಸಲು ಈ ತಂಡ ಯೋಜನೆ ಸಿದ್ಧಪಡಿಸುತ್ತಿದೆ.ನೂತನ ಯೋಜನೆ:ರಾಜ್ಯ ಸರ್ಕಾರವು ಲಕ್ಕುಂಡಿ ಅಭಿವೃದ್ಧಿಗೆ ₹2.25 ಕೋಟಿ ಅನುದಾನ ಮೀಸಲಿಟ್ಟಿದ್ದು, ಈ ವಿದೇಶಿ ಸಂಸ್ಥೆಯು ಸರ್ಕಾರದ ಟೆಂಡರ್ ಪಡೆದು ಇಲ್ಲಿನ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿದೆ. ಶೀಘ್ರದಲ್ಲೇ ಈ ತಂಡವು ಸಮಗ್ರ ಪ್ರಾಜೆಕ್ಟ್ ರಿಪೋರ್ಟ್ ಸಿದ್ಧಪಡಿಸಲಿದೆ. ಪ್ರವಾಸಿಗರಿಗೆ ನೆರವಾಗಲು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವಿಶೇಷ ಗೈಡ್ ಬುಕ್ ಸಿದ್ಧಪಡಿಸಲಿದ್ದೇವೆ. ಇದರಿಂದಾಗಿ ಲಕ್ಕುಂಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಮೆರುಗು ದೊರೆಯಲಿದೆ ಎಂದು ಫೌಂಡೇಶನ್ ತಿಳಿಸಿದೆ. 15ನೇ ದಿನದ ಉತ್ಖನನ:
ವಿದೇಶಿ ತಜ್ಞರ ತಂಡ ಲಕ್ಕುಂಡಿಯ ಪರಂಪರೆಯನ್ನು ಕಂಡು ಬೆರಗಾಗಿದೆ. ಸರ್ಕಾರ ಹಾಗೂ ಈ ಫೌಂಡೇಶನ್ ಸಹಯೋಗದಲ್ಲಿ ಲಕ್ಕುಂಡಿಯನ್ನು ವಿಶ್ವದರ್ಶನ ಮಾಡುವ ಗುರಿ ಹೊಂದಲಾಗಿದೆ. ಇದಕ್ಕಾಗಿ ವಿಶೇಷ ಯೋಜನೆ ರೂಪಿಸಿಲಾಗಿದೆ. ಅದಕ್ಕಾಗಿ ಸರ್ಕಾರ ಅನುದಾನವನ್ನು ಮೀಸಲಿಟ್ಟಿದೆ.
- ಡಾ.ಶರಣು ಗೋಗೇರಿ, ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ .