ಜನಾಂಗಗಳನ್ನು ಒಗ್ಗೂಡಿಸುವ ಶಕ್ತಿ ಜಾನಪದಕ್ಕಿದೆ: ಜಿ.ಬಿ.ಸುರೇಶ್

KannadaprabhaNewsNetwork |  
Published : Feb 03, 2026, 02:00 AM IST
ಎಲ್ಲಾ ಜನಾಂಗಗಳನ್ನು ಒಗ್ಗೂಡಿಸುವ, ಮತ್ತು ಪ್ರೀತಿಸುವ, ಗೌರವಿಸುವ ಶಕ್ತಿ ಜಾನಪದಕ್ಕಿದೆಃ ಜಿ.ಬಿ.ಸುರೇಶ್ | Kannada Prabha

ಸಾರಾಂಶ

ತರೀಕೆರೆಎಲ್ಲಾ ಜನಾಂಗಗಳನ್ನು ಒಗ್ಗೂಡಿಸುವ, ಪ್ರೀತಿಸುವ ಮತ್ತು ಗೌರವಿಸುವ ಶಕ್ತಿ ಜಾನಪದಕ್ಕಿದೆ ಎಂದು ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಜಿ.ಬಿ ಸುರೇಶ್ ಹೇಳಿದ್ದಾರೆ.

ತರೀಕೆರೆ ತಾಲೂಕು ಕರ್ನಾಟಕ ಜಾನಪದ ಪರಿಷತ್ತು, ಕಜಾಪ ಚಿಕ್ಕಮಗಳೂರು ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಎಲ್ಲಾ ಜನಾಂಗಗಳನ್ನು ಒಗ್ಗೂಡಿಸುವ, ಪ್ರೀತಿಸುವ ಮತ್ತು ಗೌರವಿಸುವ ಶಕ್ತಿ ಜಾನಪದಕ್ಕಿದೆ ಎಂದು ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಜಿ.ಬಿ ಸುರೇಶ್ ಹೇಳಿದ್ದಾರೆ.

ತರೀಕೆರೆ ತಾಲೂಕು ಕರ್ನಾಟಕ ಜಾನಪದ ಪರಿಷತ್ತು, ಕಜಾಪ ಚಿಕ್ಕಮಗಳೂರು ಜಿಲ್ಲಾ ಘಟಕದಿಂದ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ಪಟ್ಟಣದ ಪತ್ರಕರ್ತ ಅನಂತ ನಾಡಿಗ್ ಅವರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ನಮ್ಮ ಜನಪದ ಸಂಸ್ಕೃತಿಗೆ ಮೇಲು-ಕೀಳು ಬಡವ ಶ್ರೀಮಂತರೆಂಬ ಭೇದಭಾವವಿಲ್ಲ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯ ಮಹನೀಯರಿಗೆ ಸನ್ಮಾನಿಸುವುದು ನಮ್ಮ ಜನಪದ ಸಂಸ್ಕೃತಿ ಆದ್ಯ ಕರ್ತವ್ಯ. ಹಿಂದಿ ನಿಂದಲೂ ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ, ನಾಟಕ ರಂಗಗಳಲ್ಲಿ ಸಾಧನೆ ಮಾಡಿದವರನ್ನು ಗೌರವಿಸಿದ್ದೇವೆ. ಹಿರಿಯ ನಿಷ್ಟಾವಂತ ಪತ್ರಕರ್ತ ನಾಡಿಗರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸಂದಿರುವುದು ಜಿಲ್ಲೆಯ ಜನರಿಗೆ ಹೆಮ್ಮೆಯ ವಿಚಾರ. ಇನ್ನೂ ಹೆಚ್ಚು ಹೆಚ್ಚು ಪ್ರಶಸ್ತಿ ಗೌರವಗಳು ಲಭಿಸ ಲೆಂದು ಹಾರೈಸುತ್ತೇನೆ ಎಂದು ತಿಳಿಸಿದರು.

ಸಾಹಿತಿ ಇಮ್ರಾನ್ ಅಹಮದ್ ಬೇಗ್ ಮಾತನಾಡಿ ಆರೋಗ್ಯವಂತ ಸಮಾಜ ನಿರ್ಮಾಣ ಹಾಗೂ ತ್ಯಾಗ, ಸಹನೆ, ಕರುಣೆ, ಶ್ರಮಪಟ್ಟು ದುಡಿದು ಬದುಕುವ ಮನೋಭಾವ ಬಿತ್ತುವ ಶಕ್ತಿ ಜಾನಪದಕ್ಕಿದೆ. ಕರ್ನಾಟಕ ಜಾನಪದ ಪರಿಷತ್ತು ಸತತವಾಗಿ ಮತ್ತು ಕ್ರಿಯಾಶೀಲವಾಗಿ ಗ್ರಾಪಂ ತಾಲೂಕು, ಜಿಲ್ಲಾ ಮಟ್ಟದಲ್ಲಿ, ಸಮ್ಮೇಳನ, ಜಾನಪದ ಕಲಾ ತರಬೇತಿ ಶಿಬಿರದಂತಹ ಕಾರ್ಯಕ್ರಮ ಮಾಡು ತ್ತಿರುವುದು ಶ್ಲಾಘನೀಯ ಎಂದರು. ತರೀಕೆರೆ ನಡೆದಾಡುವ ವಿಕಿಪೀಡಿಯ ಅನಂತ ನಾಡಿಗ್ ರನ್ನು ಸನ್ಮಾನಿಸಿರುವುದು ಹೆಮ್ಮೆ ತರುವ ವಿಚಾರ ಎಂದರು. ಜಾನಪದ ಕಲಾಪೋಷಕ ಮಿಲಿಟರಿ ಶ್ರೀನಿವಾಸ್, ಕರ್ನಾಟಕ ಜಾನಪದ ಪರಿಷತ್ತು ತರೀಕೆರೆ ತಾಲೂಕು ಅಧ್ಯಕ್ಷ ನಾಗೇಶ್ , ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ನವೀನ್ ಪೆನ್ನಯ್ಯ, ಶಿವಣ್ಣ, ಚಿಕ್ಕಮಗಳೂರು ತಾಲೂಕು ಕಸಾಪ ಅಧ್ಯಕ್ಷ ಮಾವಿನಕೆರೆ ದಯಾನಂದ್, ಸಚಿನ್ ಸಿಂಗ್, ಸಂದೀಪ್ ಮಾತನಾಡಿದರು. ಸೈಯದ್ ಮುಹಿಬ್, ಲಕ್ಷ್ಮಣ್ ಎಂ.ಎಸ್. ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

-

31ಕೆಟಿಆರ್.ಕೆಃ05

ಚಿಕ್ಕಮಗಳೂರು ಜಿಲ್ಲಾ ಮತ್ತು ತರೀಕೆರೆ ತಾಲೂಕು ಜಾನಪದ ಪರಿಷತ್ತು ಘಟಕದಿಂದ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ಪತ್ರಕರ್ತ ಅನಂತ ನಾಡಿಗ್ ಅವರನ್ನು ಸನ್ಮಾನಿಸಲಾಯಿತು. ಕಜಾಪ ಜಿಲ್ಲಾಧ್ಯಕ್ಷ ಜಿ.ಬಿ ಸುರೇಶ್, ಕಸಾಪ ನಿಕಟಪೂರ್ವ ಅಧ್ಯಕ್ಷ ನವೀನ್ ಪೆನ್ನಯ್ಯ, ಸಾಹಿತಿ ಇಮ್ರಾನ್ ಅಹಮದ್ ಬೇಗ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

25 ವರ್ಷದಲ್ಲಿ ರೈತರಿಗೆ 111 ಲಕ್ಷ ಕೋಟಿ ನಷ್ಟ: ಶರ್ಮಾ
ಆಟೋ ಗ್ಲಾಸ್ ಒಡೆದಿದ್ದಕ್ಕೆಸ್ನೇಹಿತನ ಕೊಂದ ಚಾಲಕ