- ತಾಲೂಕು ಬೇಡ ಜಂಗಮ ಸಮಾಜದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಹಾಗು ಸೇವಾ ದೀಕ್ಷಾ ಕಾರ್ಯಕ್ರಮ
ಜಗತ್ತಿನ ಒಳಿತು ಬಯಸುವ ಶಕ್ತಿ ಎಂದರೆ ಅದು ಬೇಡ ಜಂಗಮ ಸಮಾಜ ಮಾತ್ರ ಎಂದು ಬೀರೂರು ಪಟ್ಟಣದ ರಂಭಾಪುರಿ ಖಾಸಾ ಪೀಠದ ಶ್ರೀ ರುದ್ರಮುನಿ ಶಿವಾಚಾರ್ಯಸ್ವಾಮೀಜಿ ಹೇಳಿದರು.
ಭಾನುವಾರ ಪಟ್ಟಣದ ಶ್ರೀ ವೀರಭದ್ರೇಶ್ವರ ಸ್ವಾಮಿ ಸಮುದಾಯ ಭವನದಲ್ಲಿ ತಾಲೂಕು ಬೇಡ ಜಂಗಮ ಸಮಾಜದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಹಾಗು ಸೇವಾ ದೀಕ್ಷಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ ಎಲ್ಲ ಯುಗಗಳಲ್ಲೂ ಹಾಗೂ ತಲತಲಾಂತರದಿಂದ ಜಂಗಮರು ಜಗತ್ತಿನಲ್ಲಿ ಸರಿಮಾರ್ಗದಲ್ಲಿ ನಡೆಸಲು ವಿದ್ಯೆ ಕಲಿಸಿ ಶಾಂತಿ ನೆಮ್ಮದಿ ನೀಡಿರುವುದು ಬೇಡ ಜಂಗಮ ಸಮಾಜ ಮಾತ್ರ. ಜಂಗಮ ಎಂದರೆ ಅದು ಗೌರವ ನೀಡುವ ಹೆಸರು. ದೇವಾನು ದೇವತೆಗಳ ವಿಗ್ರಹಗಳಿಗೆ ಜಂಗಮರು ಶಕ್ತಿ ತುಂಬುವರು ಎಂದರು.ಇಂದಿನ ಸಮಾಜ ಜನರು ಜಂಗಮ ಸಂಸ್ಕಾರ ಪಡೆಯಬೇಕು ಜಂಗಮರಿಗೆ ಯಾವುದೇ ಸೂತಕ ಹಾಗೂ ಕಟ್ಟುಪಾಡುಗಳಿಲ್ಲ. ಅವರು ಜೋಳಿಗೆ ಹಾಕಿಕೊಂಡು ತರುವ ಭಿಕ್ಷೆಯನ್ನು ಪಡೆದು ಜನರಿಗೆ ದಾಸೋಹ ಮಾಡುತ್ತಾ ಬರುವ ಮೂಲಕ ಪಂಚ ಪೀಠಗಳ ನಿರ್ಮಾಣ ಆಗಿದೆ. ಜಂಗಮರಿಗೂ ಗುರುಗಳಿದ್ದು. ಪ್ರತಿಯೊಬ್ಬರೂ ಸಿದ್ದಾಂತ ಶಿಖಾಮಣಿ ಓದಿ ಸಂಸ್ಕಾರದ ಜಂಗಮರಾಗಿ ಹೋಗಬೇಕು.
ಕಾರ್ಯಕ್ರಮ ಉದ್ಘಾಟಿಸಿದ ಅ.ಭಾ.ವೀ. ಮಹಾಸಭಾ ಜಿಲ್ಲಾಧ್ಯಕ್ಷ ಎಚ್ ಎಂ. ಲೋಕೇಶ್ ಮಾತನಾಡಿ, ನಮ್ಮ ಬೇಡ ಜಂಗಮ ಸಮಾಜವನ್ನು ಕಟ್ಟುವಲ್ಲಿ ಅನೇಕರ ಪರಿಶ್ರಮವಿದೆ. ಸಂಘಟನೆ ಮಾಡುವ ನಿಟ್ಟಲ್ಲಿ ಕ್ರಮ ವಹಿಸಿದ್ದು, ಸಮಾಜದ ಸಂಘಟನೆಗೆ ತಾವು ಎಲ್ಲ ರೀತಿ ಸಹಕಾರ ನೀಡಲು ಸಿದ್ದನಿದ್ದೇನೆ ಎಂದರು. ಆದರೆ ಸಮಾಜದ ಯುವ ಸಮೂಹ ಕೆಲವೆಡೆ ತಪ್ಪು ಹಾದಿ ತುಳಿಯುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಇದು ಸಮಾಜಕ್ಕೆ ಶೋಭೆ ತರುವ ಕೆಲಸವಲ್ಲ. ಮಕ್ಕಳ ಬಗ್ಗೆ ಪೋಷಕರು ಎಚ್ಚರ ವಹಿಸಬೇಕು ಕಿವಿಮಾತು ಹೇಳಿದರು.
ಬೇಡ ಜಂಗಮ ಸಮಾಜದ ತಾಲೂಕು ಅಧ್ಯಕ್ಷ ಎಂ.ಆರ್. ಪ್ರಕಾಶಮೂರ್ತಿ ಮಾತನಾಡಿ, ಜಂಗಮ ಸಮಾಜ ಸಂಘಟನೆ ಬಹಳಷ್ಟು ಜನರ ಸಹಕಾರದಿಂದ ನಡೆಯುತ್ತಿದೆ. ಹಾಗಾಗಿ ಕಡೂರು- ಬೀರೂರು ಸೇರಿದಂತೆ ತಾಲೂಕಿನಲ್ಲಿ ಸಮಾಜದಲ್ಲಿ ಸುಮಾರು 6 ಸಾವಿರ ಜನರಿದ್ದಾರೆ. ಇದಕ್ಕಾಗಿ ಜನಗಣತಿ ಮಾಡಿದ್ದು, ಶೀಘ್ರ ಸದಸ್ಯತ್ವ ನೋಂದಣಿ ಅಭಿಯಾನ ಆರಂಭಿಸಲಾಗುವುದು. ಜೊತೆಯಲ್ಲಿ ಕಡೂರಲ್ಲಿ ಯಾವುದಾದರೂ ರಸ್ತೆಗೆ ರೇಣುಕಾಚಾರ್ಯರ ಹೆಸರು ಮತ್ತು ಪುತ್ಥಳಿ ಸ್ಥಾಪನೆಗೆ ಪುರಸಭೆಯಲ್ಲಿ ಕ್ರಮ ವಹಿಸಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯು.ಸಿಯ ಸಾಧಕ ವಿದ್ಯಾರ್ಥಿಗಳ ಪುರಸ್ಕಾರದಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದ ಪತ್ರಕರ್ತ ಎ.ಜೆ ಪ್ರಕಾಶ ಮೂರ್ತಿಪುತ್ರ ಷಡ್ಜಯ್ ಗೌರವ ಸ್ವೀಕರಿಸಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಕಡೂರು ಪಟ್ಟಣದ ಶ್ರೀ ವೀರಭದ್ರೇಶ್ವರ ಸ್ವಾಮಿ ಸಮುದಾಯ ಭವನದಲ್ಲಿ ನಡೆದ ತಾಲೂಕು ಬೇಡ ಜಂಗಮ ಸಮಾಜದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಿಯುಸಿಯಲ್ಲಿ ಮೂರನೇ ಸ್ಥಾನ ಪಡೆದ ಎ.ಜೆ ಪ್ರಕಾಶಮೂರ್ತಿ ಪುತ್ರ ಷಢ್ಜಯ್ ರವರನ್ನು ಗೌರವಿಸಲಾಯಿತು. .
ಕಡೂರು ಪಟ್ಟಣದ ಶ್ರೀ ವೀರಭದ್ರೇಶ್ವರ ಸ್ವಾಮಿ ಸಮುದಾಯ ಭವನದಲ್ಲಿ ನಡೆದ ತಾಲೂಕು ಬೇಡ ಜಂಗಮ ಸಮಾಜದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಹಾಗು ಪ್ರತಿಜ್ಞಾವಿಧಿ ಕಾರ್ಯಕ್ರಮ ನಡೆಯಿತು. ಅ.ಭಾ.ವೀ ಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಹೆಚ್. ಎಂ. ಲೋಕೇಶ್ ಉಧ್ಘಾಟಿಸಿದರು.