ಆರೋಗ್ಯವಂತರಾಗಿರಲು ಯೋಗ್ಯಕ್ಕೆ ಆದ್ಯತೆ ನೀಡಿ: ಲಲಿತಾಂಬ

KannadaprabhaNewsNetwork |  
Published : Jun 22, 2025, 01:18 AM IST
21ಕೆಎಂಎನ್ ಡಿ11 | Kannada Prabha

ಸಾರಾಂಶ

ಒಂದೇ ಭೂಮಿ ಒಂದೇ ಆರೋಗ್ಯ ಎಂಬ ಸಂಕಲ್ಪವನ್ನು ಇಟ್ಟುಕೊಂಡು ಪ್ರಧಾನಿ ಮೋದಿ ಅವರು ಈ ದಿನವನ್ನು ಅಂತಾರಾಷ್ಟ್ರೀಯ ಯೋಗ ದಿನವಾಗಿ ಮಾಡಿದ್ದಾರೆ. ಉತ್ತಮ ಆರೋಗ್ಯಕ್ಕಾಗಿ ಯೋಗ ಮತ್ತು ಧ್ಯಾನ ಎಷ್ಟು ಮುಖ್ಯ ಎಂದು ತಿಳಿಸಿಕೊಟ್ಟ ದೇಶ ನಮ್ಮದು.

ಕನ್ನಡಪ್ರಭ ವಾರ್ತೆ ಹಲಗೂರು

ಪ್ರತಿಯೊಬ್ಬರು ಆರೋಗ್ಯವಂತರಾಗಿರಲು ದಿನಕ್ಕೆ ಒಂದು ಗಂಟೆ ಯೋಗ್ಯಾಭ್ಯಾಸಕ್ಕೆ ಆದ್ಯತೆ ನೀಡುವಂತೆ ಪ್ರಾಂಶುಪಾಲೆ ಲಲಿತಾಂಬ ಸೋಮಶೇಖರ್ ತಿಳಿಸಿದರು.

ಜೆಜೆ ಪಬ್ಲಿಕ್ ಶಾಲೆ ಆವರಣದಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಯೋಗ ಅಭ್ಯಾಸ ತರಬೇತಿ ನೀಡಿ ಮಾತನಾಡಿ, ವಿಶ್ವದಲ್ಲಿ ಇಂದು ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತಿದೆ. ಜಗತ್ತಿನ 191 ದೇಶಗಳು ಈ ದಿನವನ್ನು ಆಚರಿಸುತ್ತಿವೆ ಎಂದರು.

ಒಂದೇ ಭೂಮಿ ಒಂದೇ ಆರೋಗ್ಯ ಎಂಬ ಸಂಕಲ್ಪವನ್ನು ಇಟ್ಟುಕೊಂಡು ಪ್ರಧಾನಿ ಮೋದಿ ಅವರು ಈ ದಿನವನ್ನು ಅಂತಾರಾಷ್ಟ್ರೀಯ ಯೋಗ ದಿನವಾಗಿ ಮಾಡಿದ್ದಾರೆ. ಉತ್ತಮ ಆರೋಗ್ಯಕ್ಕಾಗಿ ಯೋಗ ಮತ್ತು ಧ್ಯಾನ ಎಷ್ಟು ಮುಖ್ಯ ಎಂದು ತಿಳಿಸಿಕೊಟ್ಟ ದೇಶ ನಮ್ಮದು ಎಂದರು.

ಶಾಲೆ ಮೇಲ್ವಿಚಾರಕ ವಿಕಾಸ್ ಮಾತನಾಡಿ, ಶಾಲೆ ಮಕ್ಕಳು ಭಾರತ ನಕ್ಷೆ ಮಾದರಿಯಲ್ಲಿ ಯೋಗಾಭ್ಯಾಸ ಮಾಡುವ ಮೂಲಕ ವಿಶ್ವ ಯೋಗದಿನವನ್ನು ಆಚರಿಸಿದ್ದಾರೆ ಎಂದರು.

ಈ ವೇಳೆ ಶಾಲೆಯ ಶಿಕ್ಷಕರಿಂದ ಸೇರಿದಂತೆ ಇತರರು ಇದ್ದರು.

ಸಾವಿರಾರು ಮಕ್ಕಳಿಂದ ಸಾಮೂಹಿಕ ಯೋಗಾಭ್ಯಾಸ

ಪಾಂಡವಪುರ:

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಸಾವಿರಾರು ಮಕ್ಕಳು ಸಾಮೂಹಿಕವಾಗಿ ಯೋಗಾಭ್ಯಾಸ ನಡೆಸಿದರು.

ಸಂಸ್ಥೆ ಕಾರ್ಯದರ್ಶಿಯಾದ ಡಾ.ಜೆ.ಎನ್.ರಾಮಕೃಷ್ಣೇಗೌಡರ ನೇತೃತ್ವದಲ್ಲಿ ಯೋಗ ಗುರು ಅರುಣ್‌ಗೌಡ ಮಾರ್ಗದರ್ಶನದಲ್ಲಿ ಬೆಳಗ್ಗೆ 7 ಗಂಟೆಯಿಂದ ಸತತ ಎರಡು ಗಂಟೆಗಳ ಕಾಲ ಯೋಗಾಭ್ಯಾಸ ನಡೆಸಿದರು.

ಈ ವೇಳೆ ಡಾ.ಜೆ.ಎನ್.ರಾಮಕೃಷ್ಣೇಗೌಡ ಮಾತನಾಡಿ, ಪ್ರತಿಯೊಬ್ಬ ಮನುಷ್ಯ ಆರೋಗ್ಯವಂತರಾಗಿ ಸದೃಢ ದೇಹ ಹೊಂದಲು ಕಡ್ಡಾಯವಾಗಿ ನಿತ್ಯ ಯೋಗಾಭ್ಯಾಸ ಮಾಡಬೇಕು. ನಿರಂತರ ಯೋಗಾಭ್ಯಾಸದಿಂದ ದೈಹಿಕ ಹಾಗೂ ಮಾನಸಿಕ ಮತ್ತು ಆಧ್ಯಾತ್ಮಿಕ ಬದಲಾವಣೆಯಾಗುತ್ತದೆ ಎಂದರು.

ಇದೇ ವೇಳೆ ಶಾಲೆ ಮುಖ್ಯಶಿಕ್ಷಕ ರಘು, ಪ್ರಾಂಶುಪಾಲ ಮಹದೇವು ಸೇರಿದಂತೆ ಶಾಲಾ ಶಿಕ್ಷಕ, ಶಿಕ್ಷಕಿಯರು ಭಾಗವಹಿಸಿದ್ದರು.

PREV

Recommended Stories

ದರ್ಶನ್ ಈಗ ವಿಚಾರಣಾಧೀನ ಕೈದಿ 7314
ಧರ್ಮಸ್ಥಳ ಗ್ರಾಮ: ಇಂದು ಮತ್ತೆ ಉತ್ಖನನ?